ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!

Movie News: ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಮತ್ತು ನಟಿ ಸಪ್ತಮಿಗೌಡ ನಟನೆಯ ಕಾಂತಾರ ಚಿತ್ರ ಸಕ್ಸಸ್ ಕಂಡ ಬಳಿಕ, ಬೇಡಿಕೆ ಹೆಚ್ಚಾಗಿದೆ. ಕಾಂತಾರ 2 ಸ್ಕ್ರಿಪ್ಟ್ ರೆಡಿ ಮಾಡಿರುವ ರಿಷಬ್, ಇನ್ನು ಮುಂದೆ ನಿಮ್ಮೆದುರು ಬರುವುದು ಕಾಂತಾರ ಸಿಕ್ವೇಲ್ ಅಲ್ಲ ಪ್ರಿಕ್ವೇಲ್ ಎಂದಿದ್ದಾರೆ. ಅಂದರೆ ನೀವು ಈಗಾಗಲೇ ನೋಡಿರುವುದು ಕಾಂತಾರ ಪಾರ್ಟ್-2. ಇದಕ್ಕೂ ಮೊದಲು ಯಾವ ಘಟನೆ ನಡಯಿತು ಅನ್ನೋ ಬಗ್ಗೆ ಇನ್ನು ಮುಂದೆ ನೋಡಲಿದ್ದೀರಿ ಎಂದು ಹೇಳಿದ್ದರು.

ಅದರಂತೆ ಕಾಂತಾರ ಕಥೆ ಬರಲಿದ್ದು, ಅದಕ್ಕಾಗಿ ರಿಷಬ್ ಭರ್ಜರಿ ತಯಾರಿ ನಡೆಸಿದ್ದಾರೆ. ಚಿತ್ರಕ್ಕಾಗಿ ಕುದುರೆ ಸವಾರಿ ಮತ್ತು ಕಲರಿ ಪಯಟ್ಟು ಕಲಿಯುತ್ತಿರುವ ರಿಷಬ್, ಕಾಂತಾರ 2 ಸಕ್ಸಸ್‌ಗೆ ಶತಾಯ ಗತಾಯ ಶ್ರಮಿಸುತ್ತಿದ್ದಾರೆ.

ರಿಷಬ್ ನಿರ್ದೇಶನದ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬೆಲ್‌ಬಾಟಂ ಚಿತ್ರಗಳು ಸೂಪರ್‌ ಸಕ್ಸಸ್ ಕಂಡಿದ್ದವು. ಆದರೆ ಕಾಂತಾರದ ಮಾತೇ ಬೇರೆ. ಕನ್ನಡದಲ್ಲಷ್ಟೇ ಕಾಂತಾರ್ ರಿಲೀಸ್ ಆಗಿತ್ತು. ಆದರೆ ದೈವದ ಕೃಪೆಯಿಂದ ದೇಶಾದ್ಯಂತ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಯಿತು. ಹೀಗೆ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ. ತಾನು ಪ್ಯಾಾನ್ ಇಂಡಿಯಾ ಸ್ಟಾರ್ ಆಗುತ್ತೇನೆ ಎಂದು ಸ್ವತಃ ರಿಷಬ್‌ಗೂ ಗೊತ್ತಿರಲಿಲ್ಲ.

ಕಾಂತಾರ ಈ ರೇಂಜ್‌ಗೆ ಸಕ್ಸಸ್‌್ ಕಂಡ ಬಳಿಕ, ಕಾಂತಾರ 2 ಇದಕ್ಕಿಂತ ಉತ್ತಮವಾಗಿರುತ್ತದೆ ಅನ್ನೋ ನಿರೀಕ್ಷೆಯಲ್ಲಿ ರಿಷಬ್ ಫ್ಯಾನ್ಸ್ ಇರುತ್ತಾರೆ. ಹಾಗಾಗಿ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗಬಾರದು ಎಂದು ರಿಷಭ ಕುದುರೆ ಸವಾರಿ ಮತ್ತು ಕಲರಿ ಪಯಟ್ಟು ಕಲಿಯುತ್ತಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾದಲ್ಲಿ ರಿಷಬ್, ಕಂಬಳ ಓಡಿಸೋದನ್ನ ಕಲಿತಿದ್ದರು.

ಗಿನ್ನಿಸ್ ದಾಖಲೆಗೆ ನಾಂದಿ ಹಾಡಿದ ಜನಾರ್ದನ್ ಪಿ ಜಾನಿ .

ನಟ ವಿಜಯ್ ಬರ್ತ್‌ಡೇಗೆ ಲಿಯೋ ಸಿನಿಮಾ ಪ್ರೋಮೋ, ವಿಜಯ್ ಫಸ್ಟ್ ಲುಕ್ ರಿಲೀಸ್

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಆದಿತ್ಯ ನಟನೆ ..

About The Author