Wednesday, April 23, 2025

Latest Posts

ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ `ಚಿತ್ತಾರ ಸ್ಟಾರ್ ಅವಾರ್ಡ್ಸ್-2023

- Advertisement -

Movie News: 2019ರಲ್ಲಿ ಚಿತ್ತಾರವೂ 10ನೇ ವರ್ಷದ ಅಂದ್ರೆ ದಶಕದ ಸಂಭ್ರವನ್ನು ಆಚರಿಸಿತ್ತು. ಅದಕ್ಕಾಗಿ ಆ ದಶಕದ ಅನೇಕ ಏಳು ಬೀಳುಗಳನ್ನು ಗಮನಿಸಿ, ಗೆದ್ದವರಿಗೆ ಗೌರವಿಸಿ, ಗೆಲ್ಲಬೇಕಾದವರಿಗೆ ಪ್ರೋತ್ತಾಹಿಸಬೇಕೆಂಬ ಮಹೋದ್ದುದ್ದೇಶದಿಂದ, `ಚಿತ್ತಾರ ಸ್ಟಾರ್ ಅವಾರ್ಡ್-2019’ ಎಂಬ ಕಾರ್ಯಕ್ರಮವನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಯಶಸ್ವಿಯಾಗಿ ಆರಂಭಿಸಿದ್ದೆವು.

ನಂತರದ ವರ್ಷಗಳಲ್ಲಿ ಆಯಾ ವರ್ಷದಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಅಥವಾ ಗೌರವಿಸುವ ಯೋಜನೆಯೂ ನಮ್ಮದಾಗಿತ್ತು. ಕೋವಿಡ್ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯೇ ಕಷ್ಟವಾಗಿದ್ದ ಕಾಲದಲ್ಲೂ ಕನ್ನಡ ಚಿತ್ರರಂಗ ಮತ್ತೆ ಯಶಸ್ಸಿನ ಹೆಜ್ಜೆ ಇಡಲು ಅಣಿಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರರಂಗಕ್ಕೆ ಹಾಗೂ ಚಿತ್ರರಸಿಕರಿಗೆ ಒಂದು ಪ್ರೋತ್ಸಾಹ ಅಥವಾ ಹುಮ್ಮಸ್ಸನ್ನು ನೀಡುವ ಉದ್ದೇಶದಿಂದ ಚಿತ್ತಾರ ಸ್ಟಾರ್ ಅವಾರ್ಡ್ 2022, ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವರ್ಷ ಅಂದರೆ, ಚಿತ್ತಾರವು ತನ್ನ ಹದಿನಾಲ್ಕನೇ ವಾಷೀಕೋತ್ಸವವನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್-2023’ ಮೂಲಕ ಅದ್ಧೂರಿಯಾಗಿ ನಡೆಸಿದೆ. ಚಿತ್ತಾರದ ಈ ಕಾರ್ಯಕ್ರಮಕ್ಕೆ ಚಂದನವನದ ಎಲ್ಲಾ ತಾರೆಗಳ ಆಗಮನ ಮತ್ತಷ್ಟು ಕಳೆಕಟ್ಟಿತ್ತು, ಸ್ಟಾರ್‌ಗಳಿಂದ ಹಿಡಿದು ತಂತ್ರಜ್ಞರು ಸೇರಿದಂತೆ ಚಂದನವನ ತೋಟ ಚಿತ್ತಾರ ಅಂಗಳದಲ್ಲಿ ಎಲ್ಲರನ್ನು ಆಕರ್ಷಿಸಿತು. ಚಿತ್ತಾರದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಪ್ರಶಸ್ತಿ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದ್ದು, ಹಿರಿಯ ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಹಿರಿಯ ನಟರಾದ ಸುಂದರ್ ರಾಜ್, ಬಹುಭಾಷಾ ನಟಿಯಾದ ಭಾವನಾ ರಾವ್, ಸಿನಿಮಾ ಸಂಪರ್ಕಧಿಕಾರಿಯಾದ ಸುಧೀಂದ್ರ ವೆಂಕಟೇಶ್, `ಚಿತ್ತಾರ’ ಪತ್ರಿಕೆಯ ಗೌರವ ಸಂಪಾದಕರಾದ ಸದಾಶಿವ ಶೆಣೈ, ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಮತ್ತು `ಚಿತ್ತಾರ’ ಪತ್ರಿಕೆಯ ಉಪಸಂಪಾದಾಕರಾದ ಬಿ.ನವೀನ್‌ಕೃಷ್ಣ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಇನ್ನು, ವೋಟಿಂಗ್ಗೆAದೇ ವಿಶೇಷ ವೆಬ್‌ಸೈಟ್ ನಿರ್ಮಿಸಲಾಗಿದ್ದು. ಆ ಮೂಲಕ ಪ್ರೇಕ್ಷಕರು ತಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆನ್‌ಲೈನ್ ಮೂಲಕ ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಇನ್ನು, ಬಿತ್ತಿಪತ್ರಗಳ ಮೂಲಕವೂ ಕರ್ನಾಟಕಾದ್ಯಂತ ಶಾಲಾ-ಕಾಲೇಜು ಮತ್ತು ಪ್ರಮುಖ ಸ್ಥಳಗಳಲ್ಲಿ ವೋಟಿಂಗ್ ವ್ಯವಸ್ಥೆಯನ್ನು ಮಾಡಿ, ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶ್ರೀಈಶ್ವರ್ ಖಂಡ್ರೆ, ಶ್ರೀ ಸುನೀಲ್ ಕುಮಾರ್ ದೇಸಾಯಿ, ಶ್ರೀ ದತ್ತಣ್ಣ, ಸದಾಶಿವ ಶೆಣೈ, ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಶ್ರೀರಾಜೇಂದ್ರ ಸಿಂಗ್ ಬಾಬು, ವಿ.ಮನೋಹರ್, ಶ್ರೀಮತಿ ವಾಣಿ ಹರಿಕೃಷ್ಣ, ಶ್ರೀಮತಿ ಸುಮನಾ ಕಿತ್ತೂರು, ಶ್ರೀಮತಿ ಪದ್ಮಾ ವಾಸಂತಿ, ಭಾವನಾರಾವ್, ಎ.ಪಿ.ಅರ್ಜುನ್, ಅನು ಪ್ರಭಾಕರ್, ವಿಜಯ ರಾಘವೇಂದ್ರ,  ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮ.ಹರೀಶ್, ಉಮೇಶ್ ಬಣಕಾರ್, ಹಾಜರಿದ್ದು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ರಿಷಭ್ ಶೆಟ್ಟಿ, ಧ್ರುವ ಸರ್ಜಾ, ರಚಿತಾ ರಾಮ್, ಪಂಚಭಾಷಾ ತಾರೆ ಪ್ರಿಯಾಮಣಿ, ವೇದಿಕಾ, ಅಶಿಕಾ ರಂಗನಾಥ್, ಅಭಿಷೇಕ್ ಅಂಬರೀಶ್, ರೀಷ್ಮಾ ನಾಣಯ್ಯ, ನಿಶ್ವಿಕಾ ನಾಯ್ಡು, ಅಜನೀಶ್ ಲೋಕನಾಥ್, ಅರವಿಂದ್ ಕಶ್ಯಪ್, ನಿರ್ದೇಶಕರಾದ ಕಿರಣ್ ರಾಜ್, ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ, ಲಹರಿ ಸಂಸ್ಥೆಯ ವೇಲು ಅವರೂ ಸೇರಿದಂತೆ ಒಟ್ಟು ಐವತ್ತು ಪ್ರಶಸ್ತಿಗಳನ್ನು ಈ ಅದ್ಧೂರಿ ಸಮಾರಂಭದಲ್ಲಿ ನೀಡಲಾಯಿತು. ಇನ್ನು, ಭಾರತದ ಹೆಮ್ಮೆಯನ್ನು ಜಗತ್ತಿನೆತ್ತರಕ್ಕೆ ಏರಿಸಿ, ಆಸ್ಕರ್ ಅವಾರ್ಡ್ ಪಡೆದುಕೊಂಡ `ಎಲಿಫೆಂಟ್ ವಿಸ್ಪರಸ್’ ಮತ್ತು `ಆರ್.ಆರ್.ಆರ್’ ಚಿತ್ರಗಳಿಗೆ ‘ಚಿತ್ತಾರ ಪ್ರೆöÊಡ್ ಆಫ್ ಇಂಡಿಯಾ’ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.

ಇಡೀ ಚಂದನವನ ನಮ್ಮ ಚಿತ್ತಾರ ಸ್ಟಾರ್ ಅವಾರ್ಡ್ಸ್-2023 ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಸಂತೋಷವಾಯಿತು. ಸಾಧಕರಿಗೆ ಸನ್ಮಾನ, ಕಿರಿಯರಿಗೆ ಪ್ರೋತ್ಸಾಹ ನೀಡುವ ನಮ್ಮ ಆಶಯ ಮುಂದುವರಿಯುತ್ತದೆ. ಪ್ರಶಸ್ತಿ ಆಯ್ಕೆ ಅತ್ಯಂತ ಪಾರದರ್ಶಕವಾಗಿ ನಡೆದಿದ್ದು ಸಾರ್ಥಕತೆಯನ್ನು ತಂದಿದೆ. ಈ ರೀತಿಯ ಬೆಂಬಲ ಮತ್ತಷ್ಟು ಹೊಸ ಪ್ರಯತ್ನಗಳಿ ನಾಂದಿ ಹಾಡಲಿದೆ.

-ಕೆ.ಶಿವಕುಮಾರ್, ವ್ಯವಸ್ಥಾಪಕ ನಿರ್ದೇಶಕರು `ಚಿತ್ತಾರ’

“ಗರಡಿ” ಚಿತ್ರದ ಹಾಡು ” ಹೊಡಿರೆಲೆ ಹಲಗಿ ” ಸಖತ್ ಹಿಟ್..

ಸಸ್ಪೆನ್ಸ್ ಥ್ರಿಲ್ಲರ್ ಶೀಲಾ ಸಿನಿಮಾದಲ್ಲಿ ರಾಗಿಣಿ ನಟನೆ

ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!

- Advertisement -

Latest Posts

Don't Miss