Hubballi News: ಹುಬ್ಬಳ್ಳಿ: ಇಂದು ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೆ ಚಾಲನೆ ನೀಡಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರೈಲಿನಲ್ಲಿ ಪ್ರಯಾಣ ಬೆಳೆಸಿದರು.
ಈ ವೇಳೆ ಮಾತನಾಡಿದ ಸಚಿವ ಜೋಶಿ, ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಭಾರತ್ ರೈಲು ಇದಾಗಿದ್ದು, ಈ ರೈಲು ಆರಂಭಿಸುವಂತೆ ಬಹುದಿನಗಳ ಬೇಡಿಕೆ ಇತ್ತು. ಏಪ್ರಿಲ್ನಲ್ಲಿ ಆರಂಭಿಸಬೇಕಾಗಿತ್ತು. ಸ್ವಲ್ಪ ತಡವಾದ್ರೂ, ಈಗ ಆರಂಭವಾಗಿದೆ. ಸ್ವದೇಶಿ ನಿರ್ಮಿತ ಟ್ರೈನ್ ಇದು ಅನ್ನೋದು ಹೆಮ್ಮೆ ವಿಚಾರ. ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. ಮೋದಿ ಅವರ ಪ್ರಯತ್ನದ ಫಲವಾಗಿ ಈ ರೈಲು ಆರಂಭವಾಗಿದೆ ಎಂದು ಜೋಶಿ ಹೇಳಿದ್ದಾರೆ.
ವಿಮಾನದಲ್ಲಿ ಹೋದ ಅನುಭವ ಆಗುತ್ತೆ. ಸದ್ಯ ಇದರ ಸಮಯ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದರ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ತುಮಕೂರು ಮತ್ತು ಚಿತ್ರದುರ್ಗ ನಡುವಿನ ರೈಲ್ವೆ ಲೈನ್ ಗೆ ಭೂಸ್ವಾಧೀನ ಮಾಡಬೇಕಿದೆ. ರಾಜ್ಯ ಸರ್ಕಾರ ಮುತುವರ್ಜಿ ವಹಿಸಬೇಕಿದೆ. ಭೂಸ್ವಾಧೀನ ಮಾಡಿಕೊಟ್ಟಲ್ಲಿ ರೈಲ್ವೆ ಲೈನ್ ಕಾಮಗಾರಿ ಆರಂಭವಾಗುತ್ತದೆ. ಹುಬ್ಬಳ್ಳಿ – ಬೆಂಗಳೂರು ನಡುವೆ ಅಂತರ ಕಡಿಮೆಯಾಗಲಿದೆ ಎಂದರು.
ಧಾರವಾಡ – ಬೆಂಗಳೂರು ನಡುವೆ ಆರಂಭಗೊಳ್ಳುವ ಸಮಯದ ಬಗ್ಗೆ ಜನರ ಆಕ್ಷೇಪವಿದೆ. ಬೆಳಿಗ್ಗೆ ಧಾರವಾಡದಿಂದ ವಂದೇ ಭಾರತ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ವಂದೇ ಭಾರತ್ ದರದ ಬಗೆಗಿನ ಗೊಂದಲ ಸರಿಪಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ನೆಲಕ್ಕಪ್ಪಳಿಸಿದ ಬೃಹದಾಕಾರದ ಕಬ್ಬಿಣದ ಕಂಬ..
ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡ ವಿಮಾನ ನಿಲ್ದಾಣ ಅಂತ ಹೆಸರಿಟ್ಟವರು ನಾವು




