ಮಾಂಸಕ್ಕಾಗಿ ಜಾನುವಾರು ಮೇಲೆ ಗುಂಡು ಹಾರಿಸಿ ಹತ್ಯೆ

Hassan News: ಹಾಸನ: ಅಕ್ರಮ ಗೋಮಾಂಸ ಮಾರಾಟ ಜಾಲದಿಂದ ಅಮಾನವೀಯ ಕೃತ್ಯ ನಡೆದಿದ್ದು, ಮಾಂಸಕ್ಕಾಗಿ ಜಾನುವಾರು ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಲಾಗಿದೆ.

ಹಾಸನ ಜಿಲ್ಲೆ‌ ಸಕಲೇಶಪುರ ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೆನ್ನೆ ಸಂಜೆ ಕಾಫಿತೋಟದಲ್ಲಿದ್ದ ಎಮ್ಮೆ ಮೇಲೆ ಗುಂಡು ಹಾರಿಸಲಾಗಿದೆ. ಎಮ್ಮೆಯನ್ನು ಕೊಂದು ಮಾಂಸ ಕಟ್ ಮಾಡುತ್ತಿದ್ದವೇಳೆ ಮಾಹಿತಿ ತಿಳಿದು ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ.

ಜನರು ಸ್ಥಳಕ್ಕೆ ಬರುತ್ತಲೇ, ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕ್ಯಾಮನಹಳ್ಳಿಯ ದಯಾನಿಧಿ ಎಂಬುವವರ ಎಮ್ಮೆ ಸತ್ತಿದ್ದು, ಪರವಾನಗಿ ಇಲ್ಲದ ಬಂದೂಕಿನಿಂದ ದಾಳಿ ನಡೆಸಲಾಗಿದೆ. ಈಗಾಗಲೇ ಜಾನುವಾರು ಹತ್ಯೆ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಒಂದು ಬಂದೂಕು ವಶಪಡಿಸಿಕೊಳ್ಳಲಾಗಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

About The Author