Yadgiri News: ಯಾದಗಿರಿ: ವಿಧಾನಸಭೆ ಸೋಲಿನ ಬಳಿಕ, ಹಲವು ಬಿಜೆಪಿ ನಾಯಕರು ಮಾಧ್ಯಮದ ಮುಂದೆ ಹೇಳಿಕೆಗಳನ್ನ ಕೊಟ್ಟಿದ್ದು, ಇದರಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. 123 ಜನ ಇದ್ದವರು ಈಗ 65ಕ್ಕೆ ಬಂದಿಳಿದಿದ್ದೇವೆ. ನಿಮ್ಮ ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟು ಪಕ್ಷಕ್ಕೆ ಯಾಕೆ ನಷ್ಟ ಮಾಡುತ್ತೀರಿ ಎಂದು ಸ್ವಂತ ಪಕ್ಷದವರ ವಿರುದ್ಧವೇ, ಮಾಜಿ ಸಚಿವ ರಾಜುಗೌಡ ಗರಂ ಆಗಿದ್ದಾರೆ.
ಯಾದಗಿರಿಯಲ್ಲಿಂದು ಮಾತನಾಡಿದ ಅವರು, ರೇಣುಕಾಚಾರ್ಯ ಮಾತ್ರವಲ್ಲ, ಇನ್ನೂ ಹಲವರು ಈ ರೀತಿ ಹೇಳಿಕೆಗಳನ್ನ ಕೊಟ್ಟಿದ್ದಾರೆ. ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ, ಕಷ್ಟಪಟ್ಟು ಪಕ್ಷ ಕಟ್ಟಿದವರಿಗೆ ಅನ್ಯಾಯವಾಗುತ್ತದೆ ಎಂದು ರಾಜುಗೌಡ ಹೇಳಿದ್ದಾರೆ. ಅಲ್ಲದೇ, ಇಂಥ ಹೇಳಿಕೆ ಕೊಟ್ಟವರ ವಿರುದ್ಧ ಬರೀ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದಲ್ಲ. ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ರಾಜೂಗೌಡ ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯರಿಗೆ ಸಲಹೆ ಕೊಟ್ಟಿರುವ ರಾಜೂಗೌಡ, ನೀವು ಗ್ಯಾರಂಟಿ ಬಗ್ಗೆ ಗಮನ ಹರಿಸದೇ, ಬರದಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ಕೊಡಿಸಿ. ಅವರಿಗೆ ಬರಪರಿಹಾರ ಘೋಷಣೆ ಮಾಡಿ ಎಂಜು ಮಾಜಿ ಸಚಿವ ರಾಜೂಗೌಡ ಹೇಳಿದ್ದಾರೆ.
ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ




