Tuesday, September 23, 2025

Latest Posts

ಚಿಗರಿಗೆ ಡಿಕ್ಕಿ ಹೊಡೆದ ಚಿಗರಿ: ಬಸ್ಸಿನ ಗಾಜು ಪುಡಿ ಪುಡಿ..!

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ತ್ವರಿತ ಸಾರಿಗೆ ಸೇವೆ ಒದಗಿಸಲು ಬಂದಿರುವ ಚಿಗರಿ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ನಿಂತಿದ್ದ ಚಿಗರಿ ಬಸ್ ವೊಂದಕ್ಕೆ ಮತ್ತೊಂದು ಚಿಗರಿ ಡಿಕ್ಕಿ ಹೊಡೆದ ಘಟನೆ ಚೆನ್ನಮ್ಮ ವೃತ್ತದ ಬಳಿಯಲ್ಲಿ ನಡೆದಿದೆ.

ಹೌದು.. ನಿಂತಿದ್ದ ಚಿಗರಿ ಬಸ್ಸಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂದಿನ ಗಾಜು ಪುಡಿ ಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೈ ಟೆಕ್ ತಂತ್ರಜ್ಞಾನ ಇರುವ ಬಸ್ಸಿನಲ್ಲಿಯೇ ಇಂತಹ ಅಪಘಾತ ಸಂಭವಿಸುತ್ತಿದ್ದರೇ ಇನ್ನೂ ಬೇರೆ ವಾಹನಗಳ ಗತಿ ಏನು ಎಂಬುವುದು ಸಾರ್ವಜನಿಕ ಪ್ರಶ್ನೆಯಾಗಿದೆ.

ಇನ್ನೂ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಚಿಗರಿ ಬಸ್ ಅವಾಂತರ ಮಾಡುತ್ತಲೇ ಬಂದಿದ್ದು, ಚಾಲಕನ ಅಜಾಗರೂಕತೆಯೋ ಅಥವಾ ಬ್ರೇಕ್ ಸಮಸ್ಯೆಯೋ ಗೊತ್ತಿಲ್ಲ ಇಂತಹದೊಂದು ಅಪಘಾತ ಸಂಭವಿಸಿದ್ದು, ಈ ಬಗ್ಗೆ ಬಿ.ಆರ್.ಟಿ.ಎಸ್ ಸೂಕ್ತ ಎಚ್ಚರಿಕೆ ವಹಿಸಬೇಕಿದೆ.

ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇಗುಲ ಧ್ವಂಸ: ಖಲಿಸ್ತಾನಿಗಳಿಂದ ಕೃತ್ಯ

RRR ಸಿನಿಮಾ ವಿಲನ್ ನಿಧನ: ಈ ಸುದ್ದಿ ನಂಬಲಸಾಧ್ಯವೆಂದ ರಾಜಮೌಳಿ..

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

- Advertisement -

Latest Posts

Don't Miss