Film News: ಒಬ್ಬ ಅಭಿನಯ ಚಕ್ರವರ್ತಿ ಮತ್ತೊಬ್ಬ ಚಾಲೆಂಜಿಂಗ್ ಸ್ಟಾರ್ ಒಂದ್ಕಾಲದಲ್ಲಿ ಅವರು ಕುಚುಕು ಫ್ರೆಂಡ್ಸ್ ಆದ್ರೆ ಆ ಒಂದು ವಿಷಘಳಿಗೆ ಅವರ ಗೆಳೆತನಕ್ಕೆ ಕಪ್ಪು ಚುಕ್ಕೆಯಾಗಿ ಉಳಿಯಿತು. ಮತ್ತೆ ಒಂದಾಗ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇರ್ಬೇಕಾದ್ರೆ ಮತ್ತೊಂದೆಡೆ ಆ ಎರಡು ಗುಂಪುಗಳು ಮಾತ್ರ ಇನ್ನೂ ಫ್ಯಾನ್ಸ್ ವಾರ್ ನ್ನು ಮಾತ್ರ ನಿಲ್ಲಿಸಿಲ್ಲ. ಹೌದು ಸ್ವಲ್ಪ ಕಾಲ ತಣ್ಣಗಾಗಿದ್ದ ಫ್ಯಾನ್ಸ್ ವಾರ್ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಫ್ಯಾನ್ಸ್ ವಾರ್ ಅನ್ನೋದು ಹೊಸದಲ್ಲ . ಹೌದು 90 ರ ದಶಕದಲ್ಲಿಯೇ ಆರಂಭವಾಗಿದ್ದ ಫ್ಯಾನ್ಸ್ ವಾರ್ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಆ ದಶಕದಲ್ಲಿಯೇ ಚಿತ್ರ ಮಂದಿರಗಳಲ್ಲಿ ಫ್ಯಾನ್ಸ್ ಬಡಿದಾಡಿದ ಘಟನೆಗಳೂ ನಡೆದಿತ್ತು.ನಿರಂತರ ಸಿನಿರಂಗಕ್ಕೆ ಕಪ್ಪು ಚುಕ್ಕೆಯಾಗಿದ್ದ ಈ ಫ್ಯಾನ್ಸ್ ವಾರ್ ಇದೀಗ ಮತ್ತೆ ಆರಂಭವಾದಂತಿದೆ.
ಹೌದು ದರ್ಶನ್ ಹಾಗು ಸುದೀಪ್ ಅಭಿಮಾನಿಗಳ ಫ್ಯಾನ್ಸ್ ವಾರ್ ಇದೀಗ ಮತ್ತೆ ಶುರುವಾಗಿದೆ. ಸುದೀಪ್ ಅಭಿಮಾನಿಗಳು ದರ್ಶನ್ ವಿರುದ್ಧ ಟ್ವಿಟರ್ ಟ್ರೆಂಡ್ ಶುರು ಮಾಡಿದ್ರೆ ಇತ್ತ ದರ್ಶನ್ ಅಭಿಮಾನಿಗಳು ಸುದೀ ಪ್ ವಿರುದ್ಧ ಟ್ವಿಟರ್ ಟ್ರೆಂಡ್ ಆರಂಭಿಸಿದ್ದಾರೆ.
ಇನ್ನು ಈ ವಾರ್ ಆರಂಭವಾಗಲು ಕಾರಣವೂ ಇದೆ. ಇತ್ತೀಚೆಗೆ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದು ನಿರ್ಮಾಪಕರೊಬ್ಬರ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ ಇದೇ ವಿಚಾರಕ್ಕೆ ದರ್ಶನ್ ಅಭಿಮಾನಿಗಳು ಕಿಚ್ಚನ ವಿರುದ್ಧದ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಆಕ್ರೋಶ ಗೊಂಡ ಸುದೀಪ್ ಅಭಿಮಾನಿಗಳು ದರ್ಶನ್ ವಿರುದ್ಧ ನೆಗೆಟಿವ್ ಟ್ರೆಂಡ್ ಶುರುಮಾಡಿದ್ದಾರೆ.banflopstardharshanandsaveKFI ದರ್ಶನ್ ಅವರನ್ನು ಬ್ಯಾನ್ ಮಾಡಿ ಮತ್ತು ಕನ್ನಡ ಚಿತ್ರರಂಗವನ್ನು ಉಳಿಸಿ ಎಂಬುವುದಾಗಿ ಟ್ವಿಟರ್ ವಾರ್ ಆರಂಭಿಸಿದ್ದಾರೆ. ಜೊತೆಗೆ ಈ ಟ್ಯಾಗ್ ಬಳಸಿ 3ಲಕ್ಷಕ್ಕೂ ಅಧಿಕ ಟ್ವಿಟ್ ಮಾಡಿದ್ದಾರೆ. ಇದಕ್ಕೆ ಆಕ್ರೋಶಿತ ಗೊಂಡ ಡಿ ಬಾಸ್ ಅಭಿಮಾನಿಗಳು #LossMakingLordKiccha ನಷ್ಟಸೃಷ್ಟಿಸುವ ರಾಜ ಕಿಚ್ಚ ಎಂಬಂತಹ ಟ್ವಿಟರ್ ಟ್ರೆಂಡ್ ಮಾಡಿ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಒಟ್ಟಾರೆ ಇಂತಹ ಫ್ಯಾನ್ಸ್ ವಾರ್ ನಿಂದ ಅವರ ನಾಯಕರಿಗಂತೂ ಯಾವುದೇ ಲಾಭವಾಗುತ್ತಿಲ್ಲ ಬದಲಾಗಿ ಸ್ಯಾಂಡಲ್ ವುಡ್ ಗೆ ಒಂದು ಕಪ್ಪು ಚುಕ್ಕೆಯಾಗುತ್ತಿದೆ ಅನ್ನೋದನ್ನು ಫ್ಯಾನ್ಸ್ ಮರೆತಿದ್ದಾರೆ.
ಪ್ರೇಕ್ಷಕರ ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ