Thursday, June 19, 2025

Latest Posts

ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..

- Advertisement -

Health Tips: ಇಂದಿನ ಕಾಲಮಾನದಲ್ಲಿ ಊಟವಿಲ್ಲದಿದ್ದರೂ, ಜನ ಸಹಿಸಿಕೊಳ್ಳಬಹುದು. ಆದರೆ ಸ್ಮಾರ್ಟ್ ಫೋನ್ ಇಲ್ಲವೆಂದಲ್ಲಿ, ಅವಮಾನಕರ ಸಂಗತಿ. ಅಲ್ಲದೇ, ನಾವು ತೆಗೆದುಕೊಳ್ಳುವ ಗಾಳಿ ಎಷ್ಟು ಮುಖ್ಯವೋ, ಅಷ್ಟೇ ಫೋನು ಕೂಡ ಮುಖ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ಸ್ಮಾರ್ಟ್ ಫೋನ್ ಬಳಸುವವರೇ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಮಾರ್ಟ್ ಫೋನ್ ಬಳಸಿದ್ದಲ್ಲಿ, ನೀವು ಕೆಲವು ಗಂಭೀರ ಸಮಸ್ಯೆಗಳಿಗೆ ತುತ್ತಾಗುತ್ತೀರಿ. ಹಾಗಾದರೆ ಆ ಸಮಸ್ಯೆ ಏನು ಅಂತಾ ತಿಳಿಯೋಣ ಬನ್ನಿ..

ಮೊಬೈಲ್‌ ಹೆಚ್ಚು ಬಳಸುವವರು. ಅದರಲ್ಲೂ ಕತ್ತಲಲ್ಲಿ ಮೊಬೈಲ್ ಬಳಸುವವರು, ಖಂಡಿತವಾಗಿಯೂ ನಿಮ್ಮ ಕಣ್ಣಿನ ಆರೋಗ್ಯದ ಕಡೆಗೆ ಗಮನ ಕೊಡಲೇಬೇಕು. ಏಕೆಂದರೆ, ಕತ್ತಲಲ್ಲಿ ಹೆಚ್ಚು ಹೊತ್ತು ಮೊಬೈಲ್ ಬಳಸಿದ್ದಲ್ಲಿ, ನೀವು ನಿಮ್ಮ ಕಣ್ಣು ಕಳೆದುಕೊಳ್ಳಬಹುದು. ಹಾಗಾಗಿ ಕತ್ತಲಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಸೇರಿ ಯಾವುದೇ ಗ್ಯಾಜೆಟ್ ಬಳಸಬೇಡಿ.

ಕತ್ತಲಲ್ಲಿ ಮೊಬೈಲ್ ಬಳಸಿದಲ್ಲಿ ಯಾವ ರೋಗ ಬರುತ್ತದೆ..?

ಕತ್ತಲಲ್ಲಿ ಮೊಬೈಲ್ ಬಳಸಿದ್ದಲ್ಲಿ, ಸ್ಮಾರ್ಟ್‌ಫೋನ್ ವಿಶನ್‌ ಸಿಂಡ್ರೋಮ್‌ನಿಂದ ಬಳಲುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಕಣ್ಣು ಪದೇ ಪದೇ ಮಂಜಾಗುತ್ತದೆ. ನಿಮ್ಮ ಕಣ್ಣು ಮಂಜಾದರೂ, ನೀವು ಮೊಬೈಲ್ ನೋಡುವುದನ್ನು ಬಿಟ್ಟಿಲ್ಲವೆಂದಲ್ಲಿ, ನೀವು ನಿಮ್ಮ ಕಣ್ಣನ್ನು ಪೂರ್ತಿಯಾಗಿ ಕಳೆದುಕೊಳ್ಳುತ್ತೀರಿ. ಹಾಗಾಗಿ ಯಾವುದೇ ಕಾರಣಕ್ಕೂ ಕತ್ತಲೆಯಲ್ಲಿ ಮೊಬೈಲ್ ಬಳಕೆ ಮಾಡಬೇಡಿ.

ಬರೀ ಮೊಬೈಲ್ ಅಲ್ಲ, ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಮುಂದೆ ಕುಳಿತು ಕೆಲಸ ಮಾಡಬಾರದು. 15 ನಿಮಿಷಕ್ಕೊಮ್ಮೆಯಾದರೂ ನೀವು, ಬ್ರೇಕ್ ತೆಗೆದುಕೊಳ್ಳಬೇಕು.

ಕಣಲೆ ಅಥವಾ ಕಳಿಲೆಯ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಫ್ರೆಂಚ್ ಟೋಸ್ಟ್ ಮನೆಯಲ್ಲೇ ತಯಾರಿಸುವುದು ಹೇಗೆ..?

ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..

- Advertisement -

Latest Posts

Don't Miss