Business Tips: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಚವಾಗುವುದಿಲ್ಲ ಹೇಳಿ..? ವಯಸ್ಸಾದವರಿಂದ ಹಿಡಿದು, ಮಕ್ಕಳವರೆಗೂ ಎಲ್ಲರೂ ಪಾನೀಪುರಿ ಪ್ರಿಯರೇ. ಡಯಟ್ ಮಾಡುವವರು, ಜಂಕ್ ಫುಡ್ ಇಷ್ಟಪಡದ ಕೆಲವೇ ಕೆಲವರು ಮಾತ್ರ, ಪಾನೀಪುರಿ ಇಷ್ಟಪಡುವುದಿಲ್ಲ. ಆದರೂ ಭಾರತದಲ್ಲಿ ಚೆನ್ನಾಗಿ ಓಡುತ್ತಿರುವ ಉದ್ಯಮ ಅಂದ್ರೆ, ಪಾನೀಪುರಿ ವ್ಯಾಪಾರ. ಇತ್ತೀಚೆಗಂತೂ, ಡಬಲ್ ಗ್ಯಾಜುವೇಟ್‌ಗಳು ಕೂಡ, ಪಾನೀಪುರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಆರಂಭಿಸಿದ್ದಾರೆ.
ಕೆಲವರು ವಿದ್ಯೆ ಕಲಿತು ಪಾನೀಪುರಿ ಮಾರುತ್ತಾರಲ್ಲ. ಇವರಿಗೆ ನಾಚಿಕೆಯಾಗುವುದಿಲ್ಲವಾ ಅಂತಾ ಕಾಮೆಂಟ್ ಮಾಡಿದ್ದನ್ನೂ ನಾವು ನೋಡಿರುತ್ತೇವೆ. ಆದರೆ ನಾಚಿಕೆ ಯಾಕೆ ಪಡಬೇಕು ಅನ್ನೋದು ಹಲವರ ಪ್ರಶ್ನೆ. ನಿಜ. ನಿಯತ್ತಾಗಿ ಯಾವ ಕೆಲಸ ಮಾಡಿದರೂ, ಮನುಷ್ಯ ನಾಚಿಕೆ ಪಡಬೇಕು ಅಂತಿಲ್ಲ. ಹಾಗಾಗಿ ವಿದ್ಯಾವಂತರೂ ರೋಡ್ ಸೈಡ್ ಪಾನೀಪುರಿ ಮಾರಿದರೂ ಏನು ತಪ್ಪಿಲ್ಲ. ಹಾಗಾಗಿ ಇಂದು ನಾವು ಪಾನೀಪುರಿ ಉದ್ಯಮ ಆರಂಭಿಸುವುದು ಹೇಗೆ..? ಇದಕ್ಕೆ ಎಷ್ಟು ಬಂಡವಾಳ ಹಾಕಬೇಕು..? ಏನೇನು ಸಾಮಗ್ರಿ ಬೇಕು. ಹೀಗೆ ಇತ್ಯಾದಿ ಟಿಪ್ಸ್ ನೀಡಲಿದ್ದೇವೆ.
ನೀವು ಸ್ವಲ್ಪ ಸಣ್ಣ ಮಟ್ಟದಲ್ಲಿಯಾದರೂ ನೀಟ್ ಆಗಿ ಪಾನೀಪುರಿ ಸ್ಟಾಲ್ ಹಾಕಬಹುದು. ಆದರೆ ನೀವು ಪಾನೀಪುರಿ ಜೊತೆ, ಮಸಾಲೆ ಪುರಿ, ಸೇವ್ ಪುರಿ, ಧಹಿ ಪುರಿ, ಭೇಲ್ ಪುರಿ ಇವನ್ನೆಲ್ಲವನ್ನೂ ಸೇಲ್ ಮಾಡಿ.
ಮೊದಲನೇಯದಾಗಿ ಇವನ್ನೆಲ್ಲ ತಯಾರಿಸೋಕ್ಕೆ ನಿಮಗೆ ಯಾವ ಯಾವ ಕಚ್ಚಾ ವಸ್ತು ಬೇಕು ಅಂತಾ ತಿಳಿಯೋಣ. ಪೂರಿ ಬೇಕಾಗುತ್ತದೆ. ಇದನ್ನು ನೀವೇ ತಯಾರಿಸಿದರೆ ಉತ್ತಮ. ಜೀರಾ ಪಾನಿ, ಗ್ರೀನ್ ಚಟ್ನಿ, ಹುಳಿ ಚಟ್ನಿ, ಖಾರಾ ಚಟ್ನಿ, ಖಾರಾ ಬೂಂದಿ, ಬೇಯಿಸಿದ ಆಲೂಗಡ್ಡೆ- ಬಟಾಣಿ ಮಸಾಲೆ, ಮಕಾಯ್ ಚಿವ್ಡಾ, ಕೊತ್ತೊಂಬರಿ ಸೊಪ್ಪು, ಈರುಳ್ಳಿ, ಕ್ಯಾರೆಟ್, ಟೊಮೆಟೋ, ಚುರಮುರಿ, ಸಕ್ಕರೆ ಬೆರೆಸಿದ ಮೊಸರು, ಚಾಟ್ ಮಸಾಲೆ ಇವಿಷ್ಟು ಮೇನ್ ಆಗಿ ಬೇಕಾಗಿರೋದು.
ಇವನ್ನೆಲ್ಲ ಇಡಲು ಮತ್ತು ತಯಾರಿಸಲು ಪಾತ್ರೆಗಳು ಬೇಕಾಗತ್ತೆ. ನಿಮ್ಮ ಮನೆಯಲ್ಲೇ ಇರುವ ಕೆಲ ಪಾತ್ರೆಗಳನ್ನು ನೀವು ಬಳಸಬಹುದು. ಗ್ಯಾಸ್ ಸಿಲೆಂಡರ್ ಬೇಕಾಗುತ್ತದೆ. ಪಾನೀಪುರಿ ಸೆಟ್‌ಅಪ್ ಹಾಕಲು 25ರಿಂದ 30 ಸಾವಿರ ರೂಪಾಯಿ ಬೇಕಾಗುತ್ತದೆ. ನೀವು ಇನ್ನೂ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಸಿಕ್ಕರೆ ಬಳಸಬಹುದು. ಒಂದೂವರೆ, ಎರಡು ಲಕ್ಷ ಬಂಡವಾಳ ಹಾಕಿದ್ರೆ, ಚಿಕ್ಕದಾದ, ಚೊಕ್ಕದಾದ ಚಾಟ್ ಬ್ಯುಸಿನೆಸ್ ಆರಂಭಿಸಬಹುದು.
ಇನ್ನು ಕೊನೆಯದಾಗಿ ಕೆಲವು ಲೈಸೆನ್ಸ್ ಬೇಕಾಗುತ್ತದೆ. ಫುಡ್ ಲೈಸೆನ್ಸ್ ಸೇರಿ, ಕೆಲವು ಪರ್ಮಿಶನ್ ಪಡೆಯಲು 20ರಿಂದ 25 ಸಾವಿರ ರೂಪಾಯಿ ಬೇಕಾಗುತ್ತದೆ.
ಲಾಭಕ್ಕಾಗಿ ನೀವು ಅರಿತುಕೊಳ್ಳಬೇಕಾಗಿದ್ದು ಇಷ್ಟೇ. ನೀವು ವ್ಯಾಪಾರ ಮಾಡುವ ಜಾಗದಲ್ಲಿ ಜನಜಂಗುಳಿ ಇರಬೇಕು. ಶಾಲೆ-ಕಾಲೇಜಿನ ಎದುರಿಗೆ, ಮಾರುಕಟ್ಟೆಯಲ್ಲಿ, ಆಫೀಸುಗಳು ಹೆಚ್ಚಿರುವ ಜಾಗ, ಹೀಗೆ ಜನಜಂಗುಳಿ ಪ್ರದೇಶದಲ್ಲಿ ವ್ಯಾಪಾರ ಆರಂಭಿಸಿ. ನಿಮ್ಮ ಅಂಗಡಿ ನಿಮ್ಮ ಬಳಿ ಕೆಲಸ ಮಾಡುವವರು ಸದಾ ಕ್ಲೀನ್ ಇರಬೇಕು. ಜನ ಕ್ಲೀನ್ ಆಗಿ, ನೀಟ್ ಆಗಿ ಇರುವ ಅಂಗಡಿಗೆ ಬರುತ್ತಾರೆ. ಅವರಿಗೆ ಸ್ವಚ್ಛತೆ, ರುಚಿ ಮುಖ್ಯವಾಗಿರುತ್ತದೆ. ಹಾಗಾಗಿ ರುಚಿ ರುಚಿ ಪಾನೀಪುರಿ ಜೊತೆ, ಸ್ವಚ್ಛತೆಯೂ ಇರಲಿ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..