Kasaragodu: ಮುಸ್ಲಿಂ ಲೀಗ್ ನಿಂದ ದೇವಸ್ಥಾನದ ಮುಂದೆ ನಿಮ್ಮನ್ನು ನೇಣು ಹಾಕಿ ಸುಟ್ಟು ಹಾಕುತ್ತೇನೆ’ ಎಂದು ಘೋಷಣೆ

ಕೇರಳ: ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಮಣಿಪುರದ ಹಿಂಸಾಚಾರ ಪೂರ್ತಿ ಸ್ಮಶಾನ ದಂತೆ ಗೋಚರಿಸುತ್ತಿದೆ ಒಂದು ತಿಂಗಳಿನಿಂದ ಇಲ್ಲಿಯವರೆಗೂ ಕಿಂಚಿತ್ತೂ ಕಡಿಮೆ ಯಾಗುವ  ಲಕ್ಷಣಗಳು ಕಾಣುತ್ತಿಲ್ಲ ಹಾಗಾಗಿ ಭಾರತದ ಪ್ರತಿ ರಾಜ್ಯದಲ್ಲಿಯೂ ಸಹ ಮಣಿಪುದ ಹಿಂಸಾಚಾರ  ತಡೆಗಟ್ಟುವಂತೆ ಸರ್ಕಾರಕ್ಕೆ ಪ್ರತಿಭಟನಾಕಾರರು ಕೂಗಿ ಕೂಗಿ ಹೇಳುತ್ತಿದ್ದಾರೆ ಇದೇ ರೀತಿ ಕೇರಳದ ಕಾಸರಗೋಡಿನಲ್ಲಿಯೂ ಹಿಂಸಾಛಾರದ ವಿರುದ್ದ ಪ್ರತಿಭಟನೆ ಮಾಡುವಾಗ ದೇವಸ್ತಾನದ ಮುಂದೆ ನಿಮ್ಮನ್ನು ಸುಟ್ಟು ಹಾಕುತ್ತೇವೆ ಎಂದು ಘೋಷಣೆ ಕೂಗಿರುವ ವೀಡಿಯೋ ವೈರಲ್ ಆಗಿದೆ.

ಕಾಸರಗೋಡು ಜಿಲ್ಲೆಯ ಕಾಞಂಗಾಡ್‌ನಲ್ಲಿ ಮುಸ್ಲಿಂ ಲೀಗ್‌ನಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರನೊಬ್ಬ ‘ದೇವಸ್ಥಾನದ ಮುಂದೆ ನಿಮ್ಮನ್ನು ನೇಣು ಹಾಕಿ ಸುಟ್ಟು ಹಾಕುತ್ತೇನೆ’ ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ವಿವಾದಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆತನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ವಿರುದ್ಧ ಆರಂಭವಾದ ಪ್ರತಿಭಟನೆ ಹಿಂಸಾಸ್ವರೂಪವನ್ನು ಪಡೆದುಕೊಂಡು ೧೬೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ಮತ್ತು ನೂರಾರು ಜನರು ಗಾಯಗೊಂಡಿದ್ರು. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಲು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ಮೇ ೩ ರಂದು ಹಿಂಸಾಚಾರ ಭುಗಿಲೆದ್ದಿತ್ತು. ಇದು ಇಲ್ಲಿಗೆ ನಿಲ್ಲುವ ಹಾಗೆ ಕಾಣುತ್ತಿಲ್ಲ ಕೇಂದ್ರ ಸರ್ಕಾರ  ಹತ್ತಿಕ್ಕಲು ಪ್ರಯತ್ನಿಸುತ್ತಿಲ್ಲ.

College: ಕಾಲೇಜುಗಳಲ್ಲಿ ಡ್ರಗ್ಸ್ ವ್ಯವಹಾರ, ಬಸವನಗುಡಿ ಪೋಲಿಸರ ವಶಕ್ಕೆ

Red alert: ಮುಂಗಾರಿನಲ್ಲಿ ಮಳೆಯ ಆರ್ಭಟ ಜೋರಾದ ಕಾರಣ ರೆಡ್ ಅಲರ್ಟ್​

Rain : ಅಂತ್ಯಕ್ರಿಯೆಗೂ ಅಡ್ಡಿಯಾದ ಮಳೆ ಅಬ್ಬರ…!

About The Author