Monday, December 23, 2024

Latest Posts

Bullies: ಹಾಸನದಲ್ಲಿ ಪುಂಡರ ಹಾವಳಿ ರಾತ್ರಿ ಯುವಕನ ಮೇಲೆ ಅಟ್ಯಾಕ್ ಮಾಡಿ ಹಣ ಕಿತ್ತು ಪರಾರಿ

- Advertisement -

ಹಾಸನ: ನಗರದಲ್ಲಿ ರಾತ್ರಿ ಸಮಯದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ನೆನ್ನೆ ರಾತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಮೂವರು ಕಿಡಿಗೇಡಿಗಳು ಅಟಾಕ್ ಮಾಡಿ ನಗದು, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗಿದ್ದಾರೆ

ನಗರದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಮೇಲ್ಸೇತುವೆ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದ್ದು ತಕ್ಷಣ ಸ್ಪಂದಿಸಿದ 112 ಪೊಲೀಸ್ ರವಿ ಕುಮಾರ್ ಹಾಗೂ ಅವರ ತಂಡದ ಸಹಾಯದಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ

24 ವರ್ಷದ ನಿಶಾಂತ್ ಹಲ್ಲೆಗೆ ಒಳಗಾದ ಯುವಕನಾಗಿದ್ದು ಬಸ್ ಇಳಿದು ಮನೆ ಕಡೆ ಹೋಗುತ್ತಿದ್ದ ನಿಶಾಂತ್ ನನ್ನ ಹಿಂಬಾಲಿಸಿರುವ ದರೋಡೆ ಕೊರರು ಬಸ್ ನಿಲ್ದಾಣದ ಎದುರಿನ ಅಂಡರ್ ಪಾಸ್ ಬಳಿ ಏಕಾಏಕಿ ಅಡ್ಡಹಾಕಿ ಚಾಕು ತೋರಿಸಿ ಹಣ ಹಾಗೂ ಇನ್ನೋತ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ

ತಕ್ಷಣ ಸ್ನೇಹಿತರ ಸಹಾಯದೊಂದಿಗೆ 112 ಗೆ ಕರೆ ಮಾಡಲಾಗಿ ಮಾಹಿತಿ ಆಧರಿಸಿ ರಾತ್ರಿ ವೆಳೆಯೇ ಕಿಡಿಗೇಡಿಗಳ ಬೆನ್ನತ್ತಿದ ಪೊಲೀಸರು ಕೊನೆಗೂ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದು ಇನ್ನಿ ಒಬ್ಬರು ತಪ್ಪಿಸಿಕೊಂಡಿದ್ದಾರೆ

ಇನ್ನು ಈ ಬಗ್ಗೆ ಹಲ್ಲೆಗೆ ಒಳಗಾದ ನಿಶಾಂತ್ ಸುದ್ದಿಗಾರರೊಂದಿಗೆ ಮಾತನಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ
ಪೊಲೀಸರ ಕಾರ್ಯವೈಕರಿಗೆ ನಿಶಾಂತ್ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Fundamental rights: 60 ವರ್ಷಗಳಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರದ ಬಡಕುಟುಂಬ

Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?

Juice jocking: ದಾಖಲೆಗಳನ್ನು ಕದಿಯಲು ಹೊಸ ತಂತ್ರ ಕಂಡುಹಿಡಿದ ಹ್ಯಾಕರ್ಸ್…!

- Advertisement -

Latest Posts

Don't Miss