ಹುಬ್ಬಳ್ಳಿ: ಸಾಕಷ್ಟು ನ್ಯೂನತೆಗಳ ಮಧ್ಯದಲ್ಲಿ ಅವಳಿನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ಒದಗಿಸುತ್ತಿರುವ ಬಿ.ಆರ್.ಟಿ.ಎಸ್ ಒಂದಿಲ್ಲೊಂದು ರೀತಿಯಲ್ಲಿ ಸುದ್ಧಿಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಜನರ ಸಮಸ್ಯೆ ಆಲಿಸಿದ್ದಾರೆ.
ಹೌದು.. ಅನಿರೀಕ್ಷಿತವಾಗಿ ಹುಬ್ಬಳ್ಳಿ ಬಿ.ಆರ್.ಟಿ.ಎಸ್ ಬಸ್ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಮಹಾನಗರ ಪಾಲಿಕೆ ಬಿ ಆರ್ ಟಿ ಸಿ ಬಸ್ ನಿಲ್ದಾಣದಿಂದ ರಾಯಪುರದವರೆಗೆ ಟಿಕೆಟ್ ತೆಗೆದುಕೊಳ್ಳುವ ಮುಖಾಂತರ ಬಸ್ ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆ ಆಲಿಸಿದರು.
ಬಿ ಆರ್ ಟಿ ಎಸ್ ಬಸ್ ಹೇಗಿದೆ ಸ್ವಚ್ಛತೆಯ ಬಗ್ಗೆ, ವೇಳೆಯ ಬಗ್ಗೆ ಹೀಗೆಲ್ಲ ಪ್ರಯಾಣಿಕರ ಜೊತೆಗೆ ಮಾತುಕತೆ ಮುಖಾಂತರ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಯಾಣಿಕರು ಬಸ್ ವ್ಯವಸ್ಥೆ ಚೆನ್ನಾಗಿದ್ದು ಸ್ವಚ್ಛತೆ ಸರಿಯಾಗಿ ಇಲ್ಲ ಮತ್ತು ಮುಂದಿನ ಸ್ಟಾಪ್ ಯಾವುದು ಬರುತ್ತಿದೆ ಅನ್ನುವುದು ನಮಗೆ ಗೊತ್ತಾಗುವುದಿಲ್ಲ ಡಿಸ್‌ಪ್ಲೇ ಹೋಗಿದೆ ಹೀಗೆ ತಮ್ಮ ಅನಾನುಕೂಲತೆ ಬಗ್ಗೆ ಕೂಡ ಶಾಸಕರ ಗಮನಕ್ಕೆ ತಂದರು. ವಿದ್ಯಾರ್ಥಿಗಳಿಗೆ 100 ನಂಬರ್ ಬಸ್ ಪಾಸ್ ಇಲ್ಲದಿರುವುದರಿಂದ ತೊಂದರೆ ಆಗುತ್ತಿದೆ. ನಾವು ಹುಬ್ಬಳ್ಳಿಯಿಂದ ಧಾರವಾಡಕ್ಕೆ ವಿದ್ಯಾರ್ಥಿಗಳು ಹೋಗಬೇಕಾದರೆ ಅದರಲ್ಲಿ ಅನುಕೂಲ ಇಲ್ಲ ಆದ್ದರಿಂದ 100 ನಂಬರಿನ ಬಸ್ಸಿಗೂ ವಿದ್ಯಾರ್ಥಿಗಳ ಪಾಸ್ ಅನುಕೂಲ ಮಾಡಿಕೊಟ್ಟರೆ ನಮಗೆ ಸಮಯದ ಉಳಿತಾಯ ಆಗುತ್ತದೆ ಎಂದು ವಿದ್ಯಾರ್ಥಿಗಳು ಅಹವಾಲು ಸಲ್ಲಿಸಿದರು.
ವೀಕ್ಷಣೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಬಿ ಆರ್ ಟಿ ಎಸ್ ಹೇಗೆ ಇದೆ ಎಂದು ತಿಳಿಯಲಿಕ್ಕೆ ಬಸ್ ನಲ್ಲಿ ಸಂಚಾರ ಮಾಡಿ ಅವರ ತೊಂದರೆಗಳನ್ನು ಪ್ರಯಾಣಿಕರೊಂದಿಗೆ ತಿಳಿದುಕೊಂಡಿದ್ದು, ಇದನ್ನು ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ರಿವ್ಯೂ ಮೀಟಿಂಗ್ ನಲ್ಲಿ ಇದರ ಬಗ್ಗೆ ಗಮನ ಸೆಳೆಯುತ್ತೇನೆ ಮತ್ತು ನಾವು ಜನರಿಗೆ ಆದಷ್ಟು ಅನುಕೂಲ ಮಾಡಿಕೊಡಬೇಕು ಮತ್ತು ಅನಾನುಕೂಲತೆ ಬಗ್ಗೆ ಕೂಡ ನಾವು ಒಬ್ಬರೇ ತಿರುಗಾಡಿದಾಗ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
Poison : ಪೋಷಕರ ಮೇಲಿನ ದ್ವೇಷಕ್ಕೆ ಮಕ್ಕಳಿಗೆ ವಿಷ ಉಣಿಸಿದ ಪಾಪಿಗಳು…?!