Movie News: ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೊನೆಯುಸಿರೆಳೆದಿದ್ದು, ಚಿತ್ರರಂಗ, ರಾಜಕೀಯ ಗಣ್ಯರು ಬಂದು ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಗಾಯಕ ವಿಜಯ್ ಪ್ರಕಾಶ್, ವಿಜಿ ಅವರನ್ನ ಭೇಟಿ ಮಾಡೋಕೆ ಬಹಳ ಕಷ್ಟ ಆಯ್ತು. ಅವರನ್ನ ಭೇಟಿ ಆದಾಗೆಲ್ಲಾ ನಗುಮುಖ ವಿಶ್ವಾಸದಿಂದ ಇರ್ತಿದ್ರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಖಃ ತಡೆದುಕೊಳ್ಳುವ ಶಕ್ತಿ ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಹೇಳಿದರು.
ಇನ್ನು ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದ್ದು, ಕೆಲವು ಸಮಯದಲ್ಲಿ ಹೇಗೆ ರಿಯಾಕ್ಟ್ ಮಾಡಬೇಕು ಅನ್ನುವುದು ಗೊತ್ತಾಗಲ್ಲ. ತುಂಬಾ ಕಷ್ಟ ಆಗ್ತಿದೆ.. ಆಗಿದ್ದೆಲ್ಲ ಮರಿಯೋಕೆ ಆಗಲ್ಲ. ದೇವರು ಅವರಿಗೆ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಪ್ರಪಂಚದಲ್ಲಿ ಈ ರೀತಿ ದಿನಾ ನಡೆಯುತ್ತೆ. ತುಂಬಾ ಹತ್ತಿರದವರು ಅಂದಾಗ ನೋವಾಗತ್ತೆ. ರಾಘು ನಾವೆಲ್ಲಾ ಒಟ್ಟಿಗೆ ಬೆಳೆದವ್ರು. ರಾಘುನ ನೋಡೋಕೆ ಆಗ್ತಿಲ್ಲ.. ಅವನಿಗೆ ಏನ್ ಹೇಳೋದು ಗೊತ್ತಾಗ್ತಿಲ್ಲ. ಕುಟುಂಬಸ್ಥರಿಗೆ ದೇವರು ಶಕ್ತಿ ತುಂಬಲಿ ಎಂದು ಹೇಳಿದರು.
ಇನ್ನು ನಟಿ ಸುಧಾರಾಣಿ ಕೂಡ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದಿದ್ದು, ವಿಜಯ್ ರಾಘವೇಂದ್ರಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ, ಈ ವೇಳೆ ಮಾತನಾಡಿದ ಅವರು, ತುಂಬಾ ಬೇಜಾರ ಆಗ್ತಿದೆ. ರಾಘು ಅವರಿಗೆ ದೇವರು ಶಕ್ತಿ ನೀಡಲಿ. ಲಾಸ್ಟ್ ಒಂದು ತಿಂಗಳ ಹಿಂದೆ ಭೇಟಿಯಾದೆ. ಒಳ್ಳೆ ಹುಡುಗಿ. ಮಾತಿನಲ್ಲಿ ಮೃದು. ಈ ವಿಚಾರ ನಿಜಾಕ್ಕೂ ನಂಬೋಕ್ಕೆ ಆಗ್ತಿಲ್ಲ. ತುಂಬಾ ಬೇಸರದ ಸಂಗತಿ. ಸ್ಪಂದನಾ ವಿಜಯ ರಾಘವೇಂದ್ರ ಅವರದ್ದು ತುಂಬಾ ಸಂಸ್ಕೃತಿ ಇರುವ ಕುಟುಂಬದವರು. ಅವರ ಕುಟುಂಬದ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮಗನ ಬಗ್ಗೆ ಏನು ಹೇಳೋದು ಗೊತ್ತಾಗ್ತಿಲ್ಲ. ನಾನು ಸ್ಪಂದನಾ ಭೇಟಿ ಮಾಡಿದಾಗೆಲ್ಲ ತುಂಬಾ ಚೆನ್ನಾಗಿ ಮಾತಾಡ್ತಿದ್ವಿ. ಮಿತಭಾಷಿ ಸ್ಪಂದನಾ. ಹೀಗೆ ಆಗಿರೋದು ನಂಬೋದಕ್ಕೆ ಆಗ್ತಿಲ್ಲ ಎಂದು ಸುಧಾರಾಣಿ ಹೇಳಿದ್ದಾರೆ.
Siddaramaiah tweet: ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Spandana Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ