Political News: ಬೆಂಗಳೂರು: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ, ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುತ್ತಿಗೆದಾರರ ಆವಾಗ ಏನು ಕ್ಯಾಂಪೇನಪ್ಪ..? ಆವಾಗ ನಿರಾಧಾರ ಆರೋಪಗಳನ್ನು ಮಾಡಿದರು. ಇವಾಗ ಗುತ್ತಿಗೆದಾರರು ಗವರ್ನರ್ ಗೆ ದೂರು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಏನು ಅಂತಾ ಅವರ ವ್ಯಕ್ತಿತ್ವದಿಂದಲೇ ಗೊತ್ತಾಗುತ್ತದೆ. ಅವರ ಟ್ರ್ಯಾಕ್ ರೆಕಾರ್ಡ್ ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದು ಅಶ್ವತ್ಥ್ ನಾರಾಯಣ್, ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.
ಅಲ್ಲದೇ, ಬೆಂಗಳೂರು ಅಭಿವೃದ್ಧಿ ಸಚಿವರು ನೈಜತೆ ಬಗ್ಗೆ ಚೆಕ್ ಮಾಡೋಕೆ ಇಷ್ಟು ದಿನ ಬೇಕಾ..? ಇಡೀ ಯೋಜನೆ 6000 ಕೋಟಿ ಇದೆಯೆಲ್ಲ, ಅದಕ್ಕೆ ಕಮಿಷನ್ ನ್ನು ಇವರು ಕೇಳ್ತಿರೋದು. ಅವರಿಗೆ ಎಷ್ಟು ಟ್ಯಾಲೆಂಟ್ ಇದೆ ನೋಡಿ. 10 ರಿಂದ 15 ಕಮಿಷನ್ ಕೇಳ್ತಿದ್ದಾರೆ. ಬಿಲ್ ಪೇಮೆಂಟ್ ಗೆ ಅವರು ಕಮಿಷನ್ ಕೇಳ್ತಿರೋದು. ಕೆಲಸ ಶುರು ಮಾಡೋಕೆ 10 ಪರ್ಸೆಂಟ್ ಕಮಿಷನ್ ಅಂತೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಅಶ್ವತ್ಥ್ ನಾರಾಯಣ ಆರೋಪ ಮಾಡಿದ್ದಾರೆ.
ಯಾವ ದೂರುಗಳು ಬಂದಿಲ್ಲ, ಇವರೇ ಸಚಿವರ ಪತ್ರದ ಮೇಲೆ ತನಿಖೆ, ಆಮೇಲೆ ತಜ್ಞರ ಸಮಿತಿ ಅಂತೆ, ಇದೆಲ್ಲ ಏನ್ರೀ..? ಸ್ಪೆಷಲ್ ಕಮಿಷನ್ ಅನುಮೋದನೆ ಆಗಿರೋದನ್ನು ತಡೆ ಹಿಡಿದ್ರೆ ಯಾವ ರೀತಿ ಉತ್ತರ ಕೊಡೋದು ಅಂತಾ ಹೇಳ್ತಿದ್ದಾರೆ. ಎಲ್ಲೋ ಏನೋ ಚಿಂಚೋಳಿಯಲ್ಲಿ ಆಗಿದೆ. ಇಲ್ಲಿ ರಾಜಕಾರಣಿಗಳು ಎಲ್ಲರನ್ನು ಶಿವಕುಮಾರ್ ಅಂತಾ ಹೇಳೋಕೆ ಆಗುತ್ತದೆ. ಶಿವಕುಮಾರ್ ಶಿವಕುಮಾರೇ, ಅಶ್ವಥ್ ನಾರಾಯಣ್ ಅಶ್ವಥ್ ನಾರಾಯಣೇ.
ಏನೋ ಹೇಳಿ ಹಿಟ್ ಅಂಡ್ ರನ್ ಕೆಲಸ ಮಾಡಬೇಡಿ. ಜನರ ಬದುಕಿನ ಜೀವನ ಜೊತೆ ನೀವು ಆಟ ಆಡಬೇಡಿ. ಗುತ್ತಿಗೆದಾರರು ಇವಾಗ್ಲೇ ಸುಸ್ತು ಆಗಿದ್ದಾರೆ. ಲೋಕಯುಕ್ತಕ್ಕೆ ತನಿಖೆ ಮಾಡಲಿಕ್ಕೆ ಸರ್ಕಾರ ವರ್ಗಾವಹಿಸಬೇಕು. ಸೋಮವಾರ ನಾವು ರಾಜ್ಯಪಾಲರ ಭೇಟಿ ಮಾಡಿ ಒತ್ತಾಯ ಹಾಕ್ತೀವಿ. ನಾವು ಪ್ರಾಮಾಣಿಕ ಪ್ರಾಮಾಣಿಕ ಅಂತಾ ಸಿಎಂ ಹೇಳ್ತಾರೆ. ನಿಮಗೆ ಕಿಂಚತ್ತು ಕಾಳಜಿ ಇದ್ದರೆ ಲೋಕಯುಕ್ತಕ್ಕೆ ವಹಿಸಿ ಎಂದು ಅಶ್ವತ್ಥ್ ನಾರಾಯಣ್ ಆಗ್ರಹಿಸಿದ್ದಾರೆ.
ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?
‘ಅವರು ಕಮಿಷನ್ ದರವನ್ನು 40% ನಿಂದ 15% ಗೆ ಇಳಿಸಿರುವುದು ಸಂತೋಷದ ವಿಷಯ’