Wednesday, April 16, 2025

Latest Posts

Yathindra Siddaramaiah : ಒಂದೆರಡೇ ದಿನದಲ್ಲಿ ಉಲ್ಟಾ ಹೊಡೆದ ಯತೀಂದ್ರ

- Advertisement -

Political News : ವಿಧಾನಸಭಾ ಚುನಾವಣೆಗೂ ಮುನ್ನ ವರುಣಾ ಕ್ಷೇತ್ರದ ಮಡಿವಾಳ ಸಮುದಾಯದವರಿಗೆ ಐರನ್ ಬಾಕ್ಸ್ ಮತ್ತು ಕುಕ್ಕರ್‌ಗಳನ್ನು ಹಂಚಿದ್ವಿ ಅಂತ ಯತೀಂದ್ರ ಸಿದ್ದರಾಮಯ್ಯ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಇದೀಗ ಈ ವಿವಾದ ಮೈಮೇಲೆ ಬರುತ್ತಿದ್ದಂತೆಯೇ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ವಿಡಿಯೋ ವೈರಲ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಕುಕ್ಕರ್, ಐರಾನ್ ಬಾಕ್ಸ್ ಯಾವಾಗ ಹಂಚಿಕೆ ಮಾಡಲಾಯ್ತು? ಏಕೆ ಹಂಚಿಕೆ ಮಾಡಲಾಗಿತ್ತು ಎನ್ನುವ ಬಗ್ಗೆ ವಿವರಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಗೋಸ್ಕರ ಸಿದ್ದರಾಮಯ್ಯನವರು ಕುಕ್ಕರ್ ಕೊಟ್ಟಿದ್ದಾ ಎಂದು ಹೇಳಿಲ್ಲ. ಆದರೂ ಮಾತಾಡುವಾಗ ನಾನು ಸರಿಯಾಗಿ ಮಾತಾಡದೇ ಇರಬಹುದು. ನನ್ನ ಹೇಳಿಕೆ ಆ ರೀತಿಯ ಅರ್ಥವನ್ನು ಕೊಟ್ಟಿರಬಹುದು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಮೊದಲೇ ಈ ಘಟನೆ ನಡೆದಿದೆ. ನನ್ನ ತಂದೆ ಸ್ವತಃ ಕೈಯಿಂದ ಕುಕ್ಕರ್ ಹಾಗೂ ಐರನ್ ಬಾಕ್ಸ್ ಕೊಟ್ಟಿಲ್ಲ. ಇದರ ಬಗ್ಗೆ ನಾನು ಮಾತನಾಡಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

 

ಜಾತಿ ಗಣತಿ ವರದಿ ಕುರಿತು ಸಿಎಂಗೆ ಪತ್ರ: ಡಿಸಿಎಂ ನಿರಾಕರಣೆ

Rajanna : ಮೂವರು ಡಿಸಿಎಂ ಮಾಡದಿದ್ರೆ ಶೀಘ್ರವೇ ಸರ್ಕಾರ ಪತನ : ರಾಜಣ್ಣ

‘ಅಬ್ಬಕ್ಕ, ಓಬವ್ವ,ರಾಣಿ ಚೆನ್ನಮ್ಮಂಥವರ ರಾಜ್ಯದಿಂದ ನಾನು ಬಂದಿದ್ದೇನೆ’

- Advertisement -

Latest Posts

Don't Miss