‘ಹಾಸನಾಂಬ ಹೆಸರು ಹೇಳಿಕೊಂಡು ನಮ್ಮ ರೈತರ ಮನೆ ಹಾಳ್ಮಾಡ್ಬೇಡಿ’

Hassan Political News: ಹಾಸನ: ಹಾಸನದ ಸಂಸದರ ನಿವಾಸದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾಧಿಕಾರಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಜಿಲ್ಲಾಧಿಕಾರಿ ನೀವು ದಯಮಾಡಿ ನಿಮ್ಮ ಕಚೇರಿ ಕೆಲಸ ನಿಲ್ಲಿಸಿ. ಬೇರೆ ಯಾವುದಾದರೂ ಕೆಲಸ ಇದ್ರೆ ಆಮೇಲೆ ಮಾಡಿಕೊಳ್ಳಿ ರೈತರ ಜೊತೆ ಆಟ ಆಡೋಕೆ ಹೋಗ್ಬೇಡಿ. ತಾಲೂಕು ಅಧಿಕಾರಿಗಳನ್ನೆಲ್ಲ, ರಾತ್ರಿ 8 ಗಂಟೆಯವರೆಗೂ ಆಫೀಸಿನಲ್ಲಿ ಕೂರಿಸಿಕೊಂಡರೆ, ಇಲ್ಲಿ ಕೆಲಸ ಮಾಡುವವರು ಯಾರು..? ವಾರದಲ್ಲಿ ನಾಲ್ಕು ದಿನ ಕೂರಿಸಿಕೊಂಡು ಕುಳಿತರೆ ಹೇಗೆ..? ರಾತ್ರಿ 10 ಗಂಟೆ ಅವರಿಗೆ ಏನು ಕೆಲಸ ಮಾಡಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.

ಇದು ಈ ಜಿಲ್ಲೆಯ ದುರಾದೃಷ್ಟಕರ ಅಂತ ಹೇಳಬೇಕಾಗುತ್ತೆ. ಒಂದು ಕಡೆ ಬರ ಅಂತೀರಾ. ಅಧಿಕಾರಿಗಳ ಕೇಳಿದ್ರೆ ಹಾಸನದಲ್ಲಿ DC ಆಫೀಸ್ ಅಲ್ಲಿ ಕೆಲ್ಸ ಇದೆ ಅಂತಾರೆ. ಯಾವಾಗ ಕೇಳಿದ್ರು ಡಿಸಿ ಕಚೇರಿ ಅಂತಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ. ಈತರ ಆದ್ರೆ ನಾನು ಸಹಿಸಕ್ಕಾಗಲ್ಲ. ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಯಾರೀ ಮುಚ್ಚೋಕೆ ಹೇಳಿದ್ದು ಅವ್ರಿಗೆ..? ಎಸ್ಪಿಗೆ ಹೇಳ್ತೀನಿ. ಇಲ್ಲ ನಾನೇ  ನಿಲ್ಲಿಸಿಕೊಂಡು ತೆಗೆಸುತ್ತೀನ್ರಿ. ಟ್ರಾಫಿಕ್ ಪೊಲೀಸರ ಇರೋದು ಯಾಕೆ..? ಈ ಜಿಲ್ಲೆಯಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲಾ. ರೂಲಿಂಗ್ ಪಾರ್ಟಿ ಇದ್ದೆ ಅಂಥ ಮನಸೋ ಇಚ್ಛೆ ಮಾಡೋದು ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಲೂಟಿಕೋರರ ಕೈ ಸೇರಿದೆ. ಅಧಿಕಾರಿಗಳಿಗೆ ರಾತ್ರಿ ಹೊತ್ತು ಕೇಳಿದ್ರೆ 10 ಗಂಟೆಗೆ ಕೇಳಿದ್ರೆ ಡಿಸಿ ಆಫೀಸ್ ಅಂಥವರೇ. ಆಮೇಲೆ ಡಿಸಿ ಆಫೀಸ್ ಅಲ್ಲೂ ಹೆಣ್ಣುಮಕ್ಕಳೇ ರಾತ್ರಿ ಹತ್ತು ಗಂಟೆವರೆಗೂ ಕೆಲಸ ಏನು ಮಾಡ್ತಾರೆ. ಅವರ ಮನೆ ಗಂಡಂದಿರಿಗೆ ಅಡುಗೆ ಮಾಡೋದು ಯಾರು. ನಾನೂ ಹೇಳೋದು ಕಂದಾಯ ಇಲಾಖೆ ಹಾಸನಾಂಬ ಕೆಲ್ಸಕ್ಕೆ ಕರ್ಕೊಬಾರದು. ಹಾಸನಾಂಬ ಹೆಸರು ಹೇಳಿಕೊಂಡು ನಮ್ಮ ರೈತರ ಮನೆ ಹಾಳ್ಮಾಡ್ಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ.ರೇವಣ್ಣ, ಸರ್ ಜೆಡಿಎಸ್ ಕಟ್ಟಿದು ಅವರೇ ಅಂತೆ..? ಎಲ್ಲಿ ಕಟ್ಟಿದ್ರು, ಯಾವಾಗ ಅದೇನು ಗೊತಿಲ್ಲಪ್ಪ. ಒಂದು ಸ್ವಲ್ಪ ದಿನ ಕಾಲವೇ ನಿರ್ಧರಿಸುತ್ತೆ. ದೇವೇಗೌಡ್ರು ತೀರ್ಮಾನ ಮಾಡ್ತಾರೆ .ನೀವು ತಲೆ ಯಾಕೆ ಕೆಡಿಸಿಕೊಳ್ಳುತ್ತೀರಿ. ಬುದ್ಧಿವಾದ ಹೇಳೋದು ಅಷ್ಟೇ ದೇವೇಗೌಡರು. ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿತ್ತು.? ಎಂದು ಮರುಪ್ರಶ್ನಿಸಿದ್ದಾರೆ.

ಸರ್ ರಾಜ್ಯ ಜೆಡಿಎಸ್ ಇಬ್ಭಾಗ ಆಗುತ್ತೆ ಅಂತೆ..? ಹೆಂಗೆ ಇಬ್ಭಾಗ ಆಗ್ತದೆ ನೋಡೋಣ ಬಿಡ್ರಿ. ನಾವು 19 ಜನ ಎಂಎಲ್ಎಗಳು ಇಲ್ವಾ ಅದು ಹೆಂಗ್ರಿ. ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಹೋಗಿದ್ರಿಂದ ಅಭ್ಯಂತರ ಇಲ್ಲ. ಗೊತ್ತಿಲ್ಲ ಬಿಡ್ರಿ, ರಾಜ್ಯದಲ್ಲಿ ಒರಿಜಿನಲ್ ಕಾಂಗ್ರೆಸ್ ಇಲ್ಲ ಇವತ್ತು ಇರೋರು ಎಂತಾ ಕಾಂಗ್ರೆಸ್ ಇರೋದು ಹೇಳಿ . ನೆಹರೂ ಗಾಂಧಿ ಕಾಂಗ್ರೆಸ್ ಈವಾಗ ಇಲ್ಲ. ಕಾಂಗ್ರೆಸ್ ಕುಂತ್ರತ್ರಕ್ಕೆ ಹೆದರೋದಿಲ್ಲ.  ಎಲ್ಲವೂ ಟೈಂ ಬಂದಾಗ ಹೇಳ್ತೀನಿ ಎಂದು ರೇವಣ್ಣ ಹೇಳಿದ್ದಾರೆ.

ಐಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇವಣ್ಣ,  ಐಟಿ ಪಾಟಿ ನಮಗೆ ಗೊತ್ತಿಲ್ಲ ಬಿಡ್ರಿ. ಒಂದೇ ಮನೆ ಲೀ 40 ಕೋಟಿ ದುಡ್ಡು ಇಟ್ಟಕೊಳ್ಳಬಹುದ ಏನ್ರೀ..? ನಮ್ಮ ಹಣಕಾಸು ಸಚಿವರೇ ಹೇಳ್ಬೇಕು . ಅವರೂ(ಅಂಬಿಕಾಪತಿ)  ಶಿವಲಿಂಗೆಗೌಡಏನಾದ್ರೂ ಪರಿಚಯ ಇದ್ರು ಇರಬಹಹುದು. ಕೆಲವು ಕಾಂಟ್ರಾಕ್ಟ್ ಗಳು ವಿಷ ತಗೋತಾ ಇದಾರಲ್ರಿ..? ಹೇಳೋರು ಕೇಳೋರು ಇಲ್ಲ ಎಂದಿದ್ದಾರೆ.

Kolara: ಒಕ್ಕಲಿಗರಿಂದ ಪ್ರೊ. ಭಗವಾನ್ ವಿರುದ್ದ ಪ್ರತಿಭಟನೆ ;ಗಡಿಪಾರಿಗೆ ಆಗ್ರಹ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಗೌರವ ಡಾಕ್ಟರೇಟ್

ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಲಘು ಶಸ್ತ್ರ ಚಿಕಿತ್ಸೆ..

About The Author