ಅಣ್ಣಿಗೇರಿ : ಇಂದಿನ ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜನರ ಅಹವಾಲು, ಸಮಸ್ಯೆಗಳನ್ನು ಸಹನೆ, ಕಾಳಜಿಯಿಂದ ಆಲಿಸಿ, ಜನರ ಪ್ರತಿಯೊಂದು ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿ, ಉತ್ತಮ ಆಡಳಿತ ಮತ್ತು ಸಮಸ್ಯೆ ಪರಿಹಾರದ ಭರವಸೆ ಮೂಡಿಸುದರು. ಶಾಸಕ ಎನ್.ಎಚ್.ಕೋನರಡ್ಡಿ ಅವರು ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿ, ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಸಲಹೆ, ಸೂಚನೆ ನೀಡಿದರು.
ಜನತಾ ದರ್ಶನದಲ್ಲಿ ಭದ್ರಾಪುರ, ನಲವಡಿ, ಶಲವಡಿ, ಹಳ್ಳಿಕೇರಿ, ಅಡ್ನೂರ, ಕಿತ್ತೂರ, ಬಸಾಪುರ, ಮಜ್ಜಿಗುಡ್ಡ ಸೇರಿದಂತೆ ಅಣ್ಣಿಗೇರಿ ತಾಲೂಕಿನ ಸುಮಾರು 12 ಹಳ್ಳಿಗಳ ಸಾರ್ವಜನಿರು ಭಾಗವಹಿಸಿ ತಮ್ಮ ವಯಕ್ತಿಕ ಹಾಗೂ ಗ್ರಾಮದ ಸಮಸ್ಯೆಗಳ ಕುರಿತು ಅಹವಾಲು, ಮನವಿಗಳನ್ನು ಸಲ್ಲಿಸಿದರು.

ಜನತಾ ದರ್ಶನದಲ್ಲಿ ಸುಮಾರು 40 ಕ್ಕೂ ಹೆಚ್ಚು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ಥಳಿಯವಾಗಿ ಪರಿಹರಿಸಿದರು. ಸಲ್ಲಿಕೆಯಾದ ಉಳಿದ ಅಹವಾಲುಗಳನ್ನು ನಿಯಮಾನುಸಾರ ಪರಿಶೀಲಿಸಿ, ಹಂತಹಂತವಾಗಿ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜನತಾ ದರ್ಶನದಲ್ಲಿ ಸಾರ್ವಜನಿಕರ ಅರ್ಜಿಗಳ ವಿಲೇವಾರಿ: ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಮಾರು 105 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದರು. ಅದರಲ್ಲಿ ಕಂದಾಯ ಇಲಾಖೆ, ಪುರಸಭೆ ಹಾಗೂ ಇತರ ಇಲಾಖೆಗಳಿಗೆ ಸಂಭಂದಿಸಿದ ಅರ್ಜಿಗಳಿದ್ದವು.. ಸಾರ್ವಜನಿಕ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಕಳಿಹಿಸಿ, ಅವರಿಂದ ಉತ್ತರ ಪಡೆದು ಜನತಾ ದರ್ಶನದಲ್ಲಿ ನೀಡಲಾಯಿತು. ಸರಕಾರದ ಮಟ್ಟದಲ್ಲಿ ನಿರ್ಣಯವಾಗಬೇಕಾದ ಅರ್ಜಿಗಳನ್ನು ಸೂಕ್ತ ಶಿಪಾರಸ್ಸುಗಳೊಂದಿಗೆ ಸರಜಾರದ ಸಂಬಂಧಿಸಿದ ಇಲಾಖೆಗೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
IPGRS( integrated public grevenencees readdress system) ಮೂಲಕ ನೋಂದಣಿ
ಇಂದಿನ ಅಣ್ಣಿಗೇರಿ ತಾಲೂಕು ಮಟ್ಟದ ಜನತಾದರ್ಶನದಲ್ಲಿ ವಿವಿಧ ಇಲಾಖೆಗಳ ಕುಂದುಕೊರತೆಗಳ ಅರ್ಜಿಗಳನ್ನು IPGRS ಮೂಲಕ ನೋಂದಣಿ ಮಾಡಿಸಿಕೊಳ್ಳಲಾಯಿತು. ನೋಂದಣಿ ಮಾಡಿಸಿಕೊಂಡ ಬಳಿಕ ಅರ್ಜಿದಾರರ ಮೊಬೈಲ್ ನಂಬರಿಗೆ ಅರ್ಜಿಯ ಸಂಖ್ಯೆ ಹಾಗೂ ಇತರ ಮಾಹಿತಿಯ ಸಂದೇಶ ಬರುತ್ತದೆ. ಮುಂದಿನ 24 ಗಂಟೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಲಾಗಿನ್ ಗೆ ಅಹವಾಲುದಾರರ ಅರ್ಜಿ ತಲುಪುತ್ತದೆ.
ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ, ಸಮಸ್ಯೆ ಬಗೆಹರಿಸಲು, ಪರಿಹರಿಸಲು ಕ್ರಮವಹಿಸುವರು. ಈ ಕುರಿತು ಮಾಹಿತಿಯ ಸಂದೇಶವು ಅಹವಾಲುದಾರ ದೂರವಾಣಿ ಸಂಖ್ಯೆಗೆ ಬರುತ್ತದೆ. ಸಾರ್ವಜನಿಕ ಅಹವಾಲು ಸ್ವೀಕರಿಸಲು ತಹಸಿಲ್ದಾರ ಶಿವಾನಂದ ಹೆಬ್ಬಳ್ಳಿ ಅವರ ನೇತ್ರತ್ವದಲ್ಲಿ ವಿವಿಧ ಅಧಿಕಾರಿ ಸಿಬ್ಬಂದಿಗಳು ಆನ್ ಲೈನ್ ಎಂಟ್ರಿ ಹಾಗೂ ಆಯಾ ಇಲಾಖೆ ಅಧಿಕಾರಿಗಳಿಗೆ ತಲುಪಿಸಲು ಕ್ರಮವಹಿಸಿದ್ದರು.
ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅಹವಾಲುಗಳ ಅರ್ಜಿ: *ಅಕ್ರಮ ಮದ್ಯಮಾರಾಟ ತಡೆಗೆ ಮನವಿ:*ಅಣ್ಣಿಗೇರಿ ಪಟ್ಟಣ ಹಾಗೂತಾಲಣುಕಿನ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದನ್ನು ತಕ್ಷಣ ತಡೆಯಲು ಕ್ರಮವಹಿಸಲು ಹಸಿರು ಸೇನೆ ಮಹಿಳಾ ಘಟಕದ ಸದಸ್ಯರು ಮನವಿ ಸಲ್ಲುಸಿದರು. ಈ ಕುರಿತು ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿ, ಸಂಭಂದಿಸಿದ ಅಕ್ರಮ ಮದ್ಯ ಮಾರಾಟಗಾರ ಮೇಲೆ ಎಪ್.ಐ.ಆರ್ ದಾಖಲಿಸಿ, ಮದ್ಯ ಪೂರೈಕೆ ಮಾಡಿದ ಅಂಗಡಿ ಗುರುತಿಸಿ, ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಅವರು ಹೇಳಿದರು. ಮತ್ತು 3 ದಿನಗಳಲ್ಲಿ ಪುರಸಭೆಯವರು ಪಟ್ಟಣದ ಚರಂಡಿ ಸ್ವಚ್ಚತಾ ಕಾರ್ಯ ನಿರ್ವಹಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ, ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ರೈಲು ನಿಲುಗಡೆ ಮನವಿ: ಅಣ್ಣಿಗೇರಿ ರೈಲ್ವೆ ನಿಲ್ದಾಣದಿಂದ ಸಾರ್ವಜನಿಕರಿಗೆ ಪ್ರಯಾಣ ಅನಕೂಲಕ್ಕಾಗಿ ಇಲ್ಲಿಂದ ಚಲಿಸುವ ಎಲ್ಲ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಸಾರ್ವಜನಿಕರ ಮನವಿ ಆಲಿಸಿದ ಜಿಲ್ಲಾಧಿಕಾರಿಗಳು, ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮವಹಿಸಲಾಗುವುದು ಎಂದರು.
ವಿಕಲಚೇತನರ ಸೌಲಭ್ಯ: ಅಣ್ಣಿಗೇರಿ ಪಟ್ಟಣದ ವಿಕಲಚೇತನ ಮಹಿಳೆ ಮಾತನಾಡಿ, ಅಂಗವಿಕಲರಿಗೆ ಸೀಗುವ ಸೌಲಭ್ಯಗಳನ್ನು ಮತ್ತು ಮನೆ, ಉದ್ಯೋಗ ನಿಯಮಾನುಸಾರ ನೀಡಲು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಮಾತನಾಡಿ, ವಿಕಲಚೇತನರಿಗೆ ಮೀಸಲಿರುವ ಅನುದಾನ, ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮವಹಿಸಲು ಸೂಚನೆ ನೀಡಿದರು.
ಸರ್ಕಾರಿ ಶಾಲೆ ಅಭಿವೃದ್ಧಿಗೆ ಮನವಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2 ಇದು ಮಳೆಗಾಲದಲ್ಲಿ ದೊಡ್ಡ ಸಮಸ್ಯೆ ಎದುರಿಸುತ್ತಿದ್ದೇವೆ. ಶಾಲೆಯನ್ನು ಅಭಿವೃದ್ಧಿ ಪಡಿಸಬೇಕಿದೆ. 420 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಟ್ಟಡದ ಮೇಲ್ಛಾವಣಿಗೆ ತಗಡು ಹಾಕಲು ಶಾಸಕರಾದ ಎನ್.ಎಚ್.ಕೋನರೆಡ್ಡಿ ಅವರು ಧನ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪಂಪ ಸ್ಮಾರಕ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಶುಲ್ಕವನ್ನು ಕಡಿಮೆ ಮಾಡಬೇಕಾಗಿದೆ. ಸಚಿವರಾದ ಎಚ್.ಕೆ.ಪಾಟೀಲ ಅವರು ಭವನಕ್ಕೆ ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಭೋವಿ ಸಮಾಜಕ್ಕೆ ಶೌಚಾಲಯ ನಿರ್ಮಾಣಕ್ಕೆ ಮನವಿ:
ಪಟ್ಟಣದಲ್ಲಿ ಭೋವಿ ಸಮಾಜಕ್ಕೆ ಶೌಚಾಲಯ ನಿರ್ಮಿಸಿ ಕೊಡಬೇಕಾಗಿದೆ. ಶೀಘ್ರವಾಗಿ ಶೌಚಾಲಯ ಕಟ್ಟಿಸಿ ಕೊಡಲಾಗುವುದು ಎಂದು ಶಾಸಕರು ತಿಳಿಸಿದರು.
ಜೀವನಾಂಶ ಕೊಡಿಸುವಂತೆ ಮನವಿ:
ಆರ್.ಬಿ.ಶಿವನಗೌಡರ ಅವರು ವಾರ್ಸಾ ಪತ್ರ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಯಾವುದೇ ರೀತಿಯ ದೌರ್ಜನ್ಯ ಎಸಗುವ ಕಾರ್ಯಗಳು ಆಗಬಾರದು. 26 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆಸ್ಪತ್ರೆ ಅಭಿವೃದ್ಧಿ ಪಡಿಸುವಂತೆ ಮನವಿ: ಪಟ್ಟಣದ ಆಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳಿವೆ. ಅಲ್ಲದೇ ವೈದ್ಯಾಧಿಕಾರಿಗಳು ಸರಿಯಾಗಿ ಆಸ್ಪತ್ರೆಗೆ ಬರಬೇಕು. ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಅರ್ಜಿದಾರರು ತಿಳಿಸಿದರು. ನೂತನ ತಾಲೂಕುಗಳಿಗೆ ತಾಲೂಕು ಆಸ್ಪತ್ರೆ ಆರಂಭಿಸಬೇಕು ಎಂಬ ಯೋಜನೆ ಸರ್ಕಾರದ ಹಂತದಲ್ಲಿದೆ. ಅಲ್ಲದೇ ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ಶಾಸಕರು ಪ್ರತ್ಯುತ್ತರ ನೀಡಿದರು.
ಬಸ್ ದರ ಕಡಿಮೆ ಹಾಗೂ ನಿಲುಗಡೆ ಮಾಡುವಂತೆ ಮನವಿ: ವೇಗ ದೂತ ಬಸ್ ಗಳನ್ನು ಅಣ್ಣಿಗೇರಿ ಪಟ್ಟಣದಲ್ಲಿ ನಿಲ್ಲಿಸಬೇಕು. ಅಲ್ಲದೇ ಬಸ್ ದರವನ್ನು ಕಡಿಮೆ ಮಾಡಿ, ಬಸ್ ಡಿಪೋ ಆರಂಭಿಸಬೇಕು. ತಲೆ ಬರುಡೆ ದೊರೆತ ಸ್ಥಳ ಅಭಿವೃದ್ಧಿ ಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡರು. ಈ ಕುರಿತಂತೆ ಡಿಪೋ ಮ್ಯಾನೇಜರ್ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿ.ಎ.ಕೊಪ್ಪದ ಅವರು ಗ್ರಾಮ ಚವಡಿ ಅಭಿವೃದ್ಧಿ , ಕಳಸಾ ಬಂಡೂರಿ ಯೋಜನೆಯನ್ನು ಟೆಂಡರ್ ಕರೆದು ಯೋಜನೆ ಪ್ರಾರಂಭಿಸಬೇಕು. ರೈತರಿಗೆ ಮಧ್ಯಂತರ ಬರ ಪರಿಹಾರವನ್ನು ವಿತರಿಸಬೇಕು. ಬಸ್ ಗಳ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಬಗೆಹರಿಸಲಾಗುವುದು. ಸರ್ಕಾರಿ ಇಲಾಖೆಗಳ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಚರಂಡಿ ಸ್ವಚ್ಛತೆ ಮಾಡುವಂತೆ ಮನವಿ: ಚರಂಡಿ ಸ್ವಚ್ಛತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಶೋಕ ಬೆಟಸೂರ ಅವರು ತಿಳಿಸಿದರು. ಚರಂಡಿ ಸಮಸ್ಯೆ ಸ್ವಚ್ಛತೆ, ಚಿಗರಿ ಹಾವಳಿ ತಪ್ಪಿಸಲು ಕ್ರಮ ವಹಿಸಲಾಗುವುದು. ಈ ಕುರಿತು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸ್ಪಂದಿಸಿದರು.
ವೈಜ್ಞಾನಿಕ ರಸ್ತೆ ಹಂಪ್ ನಿರ್ಮಿಸುವಂತೆ ಮನವಿ:
ಜನರಿಗೆ ಅನುಕೂಲವಾಗುವಂತೆ ರಸ್ತೆ ಹಂಪ್ ಗಳನ್ನು ನಿರ್ಮಿಸುವಂತೆ ಮನವಿ ಸಲ್ಲಿಸಿದರು. ಅಣ್ಣಿಗೇರಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಅರ್ಜಿದಾರರಾದ ಮಹಾಂತೇಶ ನಾವಳ್ಳಿ ತಿಳಿಸಿದರು. ವೈಜ್ಞಾನಿಕ ರಸ್ತೆ ಹಂಪ್ ಹಾಗೂ ಅಮೃತ ಯೋಜನೆಯಡಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕರು ಸ್ಪಂದಿಸಿದರು.
ವೃದಾಪ್ಯ ವೇತನ ಕೊಡಿಸುವಂತೆ ಮನವಿ
ಬಸವರಾಜ ಕುರಹಟ್ಟಿ ಅವರು ವೃದಾಪ್ಯ ವೇತನ ಕೊಡಿಸಬೇಕು. ಶಲವಡಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು. ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ವೃದ್ಧಾಪ್ಯ ವೇತನ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
*ಹಳ್ಳಿಕೇರಿ ಆಶ್ರಯ ಬಡಾವಣೆ ನಿರ್ಮಾಣ ಮತ್ತು ಹಳ್ಳಿಕೇರಿ ನಿವಾಸಿಗಳಿಗೆ ಸೂಕ್ತ ನಿವೇಶನ ನೀಡಲು ಮನವಿ* ಹಳ್ಳಿಕೇರಿ ನಿವಾಸಿಗಳಿಗೆ ಸೂಕ್ತ ನಿವೇಶನ ನೀಡುವಂತೆ ನಿವಾಸಿಗಳು ಮನವಿ ಮಾಡಿಕೊಂಡರು. ನವೆಂಬರ್ ಅಂತ್ಯದೊಳಗೆ ಸಮಸ್ಯೆ ಇತ್ಯರ್ಥ ಪಡಿಸಬೇಕು. ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
MTB Nagaraj : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮತ್ತೆ ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?
ಜೀನಿಯಿಂದ ನನ್ನ ಕೈ ಕಾಲಿಗೆ ಶಕ್ತಿ ಬಂದಿದೆ: ಇದು ಜೀನಿ ಬಳಸಿದವರ ಮಾತು..




