I am sorry.. ತಪ್ಪಾಯಿತು ನಂದು. ನೀವೇ ನನ್ನ ಶಕ್ತಿ: ಸಂಸದ ಡಾ.ಉಮೇಶ್ ಜಾಧವ್ ಕ್ಷಮೆಯಾಚನೆ

Kalaburagi News: ಕಲಬುರಗಿ: ಕಲಬುರಗಿಯಲ್ಲಿ ಬಿಜೆಪಿ ಸಂಸದ ಡಾ.ಉಮೇಶ್ ಸುದ್ದಿಗೋಷ್ಠಿ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಅವರು ಮಾಧ್ಯಮದವರ ಬಳಿ ಕ್ಷಮೆ ಕೇಳಿದ್ದಾರೆ. ಚೇಲಾಗಳು ಎಂಬ ಪದ ಬಳಸಿದ್ದಕ್ಕೆ, ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಅವರಿಂದು ಕ್ಷಮೆ ಕೇಳಿದ್ದಾರೆ.

ಸಚಿವ ಪ್ರಿಯಾಂಕ ಖರ್ಗೆಗೆ ನಾನು ಏನು ಹೇಳಿದ್ದೇನೆ ಎಂಬುದು ನೀವು ಕೇಳಿದ್ದೀರಿ. ನಿಮ್ಮ ಚೇಲಾಗಳು ಎಲ್ಲಾ ಕಡೆ ಇರುತ್ತಾರೆ ಎಂದು ನಾವು ಮಾತನಾಡಿರುವುದನ್ನು ನೀವು ಕೇಳಿರುತ್ತೀರಿ. I am sorry..ನಿಮಗೆ ಹೇಳಿಲ್ಲ . I am very sorry. ತಪ್ಪಾಯಿತು ನಂದು. ನನಗೆ ಪತ್ರಕರ್ತರ ಬಗ್ಗೆ ಅಭಿಮಾನ ಇದೆ. ನನಗೆ ನಿಮ್ಮದೆ ಶಕ್ತಿ ಇದೆ. ನನಗೆ ಯಾರ ಶಕ್ತಿಯೂ ಇಲ್ಲ. ಚೇಲಾಗಳು ಹೊರಗಿನವರು ಇರ್ತಾರೆ ನಮ್ಮವರೆ. ನಮ್ಮ ಜೊತೆಗೆ ಇರುವವರೆ ಇರ್ತಾರೆ ಎಂದು ಸಂಸದ ಜಾಧವ್ ಸ್ಪಷ್ಟನೆ ನೀಡಿದ್ದಾರೆ.

ನನ್ನ ಹತ್ರ ಬೇರೆ ಶಕ್ತಿ ಇಲ್ಲ. ಐಟಿಬಿಟಿ ಮಿನಿಷ್ಟ್ರಿ ಇಲ್ಲ. ಹಣ  ಇಲ್ಲ. ನನಗೆ ಬಲ ಇರೋದು ಕಲಬುರಗಿ ಜನರ ಬಲ, ಪತ್ರಕರ್ತರ ಬಲ ಎಂದು ಜಾಧವ್ ಸ್ಪಷ್ಟಪಡಿಸಿದ್ದಾರೆ.

ವೇದಿಕೆ ಮೇಲೆ ಬೇಲೂರು ಶಾಸಕ-ಅರಸಿಕೆರೆ ಶಾಸಕರ ಜಗಳ: ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ

‘ಬಿಜೆಪಿ ಹಾಗೂ ಜನತಾದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ. ಅವರು ಏನಾದ್ರೂ ಹುಡುಕ್ತಾ ಇರ್ತಾರೆ’

About The Author