ಕಾಂಟ್ರಾಕ್ಟರ್ ಕಿಡ್ನಾಪ್ ಯತ್ನ ಕೇಸ್ ; ಕೋಲಾರದ ಆಂತರಿಕ ಭದ್ರತೆ ಇನ್ಸ್ಪೆಕ್ಟರ್ ಸೇರಿ 6 ಮಂದಿ ಬಂಧನ..!

Hassan News: ಹಾಸನ :  ಕಾಂಟ್ರಾಕ್ಟರ್ ಕಿಡ್ನಾಪ್ ಯತ್ನ ಕೇಸ್ನಲ್ಲಿ ಕೋಲಾರದ ಆಂತರಿಕ ಭದ್ರತೆ ಇನ್ಸ್ಪೆಕ್ಟರ್ ಸೇರಿ 6 ಮಂದಿ ಬಂಧನವಾಗಿದೆ. ಹಾಸನ ಪೊಲೀಸರಿಂದ ಬಹುದೊಡ್ಡ ಕಾರ್ಯಾಚರಣೆ ನಡೆದಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ , ಬೆಂಗಳೂರು ಕುಡಿಯುವ ನೀರು ಸರಬರಾಜು ಏಜೆನ್ಸಿಯ ಸತೀಶ್, ತೇಜಸ್ವಿ, ಅರವಿಂದ್, ಚನ್ನರಾಯಪಟ್ಟಣದ ಎಸ್ಟೇಟ್ ಏಜೆಂಟ್ ಮುರುಗನ್, ಬೆಂಗಳೂರಿನ LIC ಏಜೆಂಟ್ ಮಧುಸೂದನ್ ಬಂಧಿತ ಆರೋಪಿಗಳು.

ಸುಲಿಗೆಗಾಗಿ ಕಾಂಟ್ರಾಕ್ಟರ್ ಅಶ್ವಥ್ನಾರಾಯಣಗೌಡ ಅಪಹರಣಕ್ಕೆ ಯತ್ನಿಸಿದ್ದರು.  ಅಶ್ವಥ್ ನಾರಾಯಣಗೌಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಪ್ತ ಕಾಂಟ್ರಾಕ್ಟರ್ ಆಗಿದ್ದಾರೆ.  ಬೆಂಗಳೂರಿನ ಲೋಹಿತ್ ಕುಮಾರ್, ಪ್ರವೀಣ್ ನೇಪಾಳಿ ಎಸ್ಕೇಪ್ ಆಗಿದ್ದರು. ಇನ್ಸ್ಪೆಕ್ಟರ್ ಅಶೋಕ್ ಕಿಡ್ನಾಪ್ ತಂಡದ ಮಾಸ್ಟರ್ ಮೈಂಡ್ ಆಗಿದ್ದು, ಒಂದು ತಿಂಗಳ ಹಿಂದೆಯೇ ಕಾಂಟ್ರಾಕ್ಟರ್ ಕಿಡ್ನಾಪ್ಗೆ ಸ್ಕೆಚ್ ಹಾಕಿದ್ದರು.

ತೇಜಸ್ವಿ, ಅರವಿಂದ್ ಕಾಂಟ್ರಾಕ್ಟರ್ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಅಶ್ವಥ್ ನಾರಾಯಣಗೌಡ ಅವರು ಅಕ್ಟೋಬರ್ 10ರಂದು ಚನ್ನರಾಯಪಟ್ಟಣದಲ್ಲಿರುವ ತಮ್ಮ ನಿವಾಸದಿಂದ ಮನೆಯಿಂದ ಹೊರಗಡೆ ಹೋಗಿದ್ದರು. ಸೂರನಹಳ್ಳಿ ಬಳಿ ಗೌಡರ ವಾಹನ ಅಡ್ಡಗಟ್ಟಿ ಕಾರಿನ ಮೇಲೆ ಅಟ್ಯಾಕ್ ಮಾಡಲಾಗಿದ್ದು, ಅಶ್ವಥ್ ನಾರಾಯಣಗೌಡ ಪ್ಲಾನ್ ಮಾಡಿ ವೇಗವಾಗಿ ಹಿಂದಕ್ಕೆ ಕಾರ್ ಚಲಿಸಿದ್ದರು. ಸಿಕ್ಕಿ ಬೀಳೋ ಭೀತಿಯಿಂದ ಫಾರ್ಚುನರ್ ವಾಹನದಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.  ಕಾಂಟ್ರಾಕ್ಟರ್ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಎಸ್ಪಿ ಮೊಹ್ಮದ್ ಸುಜಿತಾ ಆರೋಪಿಗಳ ಪತ್ತೆ 6 ವಿಶೇಷ ತಂಡ ರಚನೆ ಮಾಡಿದ್ದರು. ASP ತಮ್ಮಯ್ಯ ಮಾರ್ಗದರ್ಶನ, DySPಗಳಾದ ಡಿ.ಅಶೋಕ್, ರವಿಪ್ರಸಾದ್ ನೇತೃತ್ವದ ವಿಶೇಷ ತನಿಖಾ ತಂಡವು  10 ದಿನದಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಿದೆ.ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಯತ್ನ ಕೇಸ್ನ ಇಬ್ಬರು ಶಾಮೀಲು ಆಗಿದ್ದಾರೆ. ಆರೋಪಿಗಳಿಂದ 3 ಕಾರು, 8 ಮೊಬೈಲ್, 2 ಕಬ್ಬಿಣದ ರಾಡ್, ಕುಡುಗೋಲು ವಶಕ್ಕೆ ಪಡೆಯಲಾಗಿದೆ. ಈ ಕುಖ್ಯಾತ ಗ್ಯಾಂಗ್ ಶ್ರೀಮಂತರನ್ನೇ ಅಪಹರಿಸಿ ಸುಲಿಗೆ ಮಾಡುತ್ತಿದ್ದರು.

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

‘400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ’

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ: ವಿನಯ್ ಕುಲಕರ್ಣಿ

About The Author