Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಉಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದ್ದು, ಈಗಾಗಲೇ ರಾಜ್ಯದಲ್ಲಿ ಅನಾವೃಷ್ಟಿ ಬಂದಿದೆ. ಇಂತಹ ಸಮಯದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಯತ್ನ ಮಾಡಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಹಿತಾಸಕ್ತಿ ಬಗ್ಗೆ ಗಮನಹರಿಸಬೇಕು. ಇವತ್ತಿನ ದಿನಮಾನಗಳಲ್ಲಿ ರಾಜಕೀಯ ಬಗ್ಗೆ ಕಡಿಮೆ ಮಾತನಾಡಬೇಕೆಂದು ನನಗೆ ಅನಿಸ್ತಾ ಇದೆ. ಕಮಿಂಟ್‌ಮೆಂಟ್ ಅನ್ನೋದು ಯಾರ ಬಳಿಯೂ ಇಲ್ಲ. ನಾವು ಯಾರನ್ನ ಪ್ರತಿನಿಧಿಸುತ್ತೇವೆ ಎನ್ನುದನ್ನೋ ನೆನಪು ಮಾಡಿಕೊಳ್ಳಬೇಕು. ಇವರನ್ನ ಅವರು ಬಯ್ಯೋದು, ಅವರನ್ನ ಇವರ ಬಯ್ಯೋದು ಆಗ್ತಾ ಇದೆ. ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷ ಇರಲಿ ಟೀಕೆ ಟಿಪ್ಪಣಿಗಳನ್ನ ಮಾಡುವುದನ್ನು ಬಿಟ್ಟು ಜನರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ಕಠಿಣವಾದ ಪರಿಸ್ಥಿತಿಯಲ್ಲಿ ನಾವು ಇದ್ದೇವೆ, ಅಭಿವೃದ್ಧಿ ಕಡೆ ಗಮನಹರಿಸಬೇಕು. ಈಗಿನ ದಿನಮಾನಗಳಲ್ಲಿ ರಾಜಕೀಯ ಕಲುಷಿತವಾಗಿದೆ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆಗಬೇಕು. ನಾನು ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಡಿಸೆಂಬರ್ 6 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂಬ ತಾತ್ವಿಕವಾಗಿ ಒಪ್ಪವಾಗಿದೆ.
400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ. ನಾನು ಹಿಂದೆ 13 ಇಲಾಖೆಗಳು ಇಲ್ಲಿ ಬರಬೇಕೆಂದು ಒತ್ತಾಯ ಮಾಡಿದ್ದೆ. ಕೆಲವು ಇಲಾಖೆಗಳು ಬಂದಿವೆ, ಇನ್ನೂ ಹಲವು ಇಲಾಖೆಗಳು ಬರಬೇಕಿವೆ. ಹದಿನೈದು ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೊರಟ್ಟಿ ಹೇಳಿದ್ದಾರೆ.
ಅಲ್ಲದೇ, ಶಿಕ್ಷಣ ವ್ಯವಸ್ಥೆ ಇವತ್ತು ಸರಿಯಾದ ವ್ಯವಸ್ಥೆಯಲ್ಲಿ ಇಲ್ಲ. ಅವಾಗ ರಜಾ ದಿನಗಳು ಫಿಕ್ಸ್ ಆಗಿ ಇತ್ತು. ಜ್ಞಾನ ಇಲ್ಲದ ಅಧಿಕಾರಿಗಳು ತಮಗೆ ಹೇಗೆ ಬೇಕೋ ಹಾಗೆ ರಜಾ ದಿನಗಳ ನಿಗದಿ ಮಾಡಿದ್ದಾರೆ, ಇದು ಸರಿಯಾದ ಕ್ರಮ ಇಲ್ಲ. ನಾನು ಈ ಸಲುವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಈ ಹಿಂದೆ ಇದ್ದಂತಹ ಪದ್ದತಿಯನ್ನ ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ. .
ರಜಾ ದಿನಗಳನ್ನ ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ, ಫೋನ್ ಮಾಡಿ ಹೇಳಿದ ಹೊರಟ್ಟಿ, ಮಕ್ಕಳ ಹಿತದೃಷ್ಟಿಯಿಂದ ನವೆಂಬರ್ 1 ವರೆಗೂ ರಜೆ ವಿಸ್ತರಣೆ ಮಾಡಿ ಎಂದು ವಿನಂತಿಸಿದ್ದಾರೆ.
ವೇದಿಕೆ ಮೇಲೆ ಬೇಲೂರು ಶಾಸಕ-ಅರಸಿಕೆರೆ ಶಾಸಕರ ಜಗಳ: ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ
‘ಬಿಜೆಪಿ ಹಾಗೂ ಜನತಾದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ. ಅವರು ಏನಾದ್ರೂ ಹುಡುಕ್ತಾ ಇರ್ತಾರೆ’