Tuesday, July 22, 2025

Latest Posts

ಆರೋಪ ಸಾಬೀತಾದರೆ ಸಂತೋಷ್ ವರ್ತೂರ್ಗೆ ಎಷ್ಟು ವರ್ಷ ಶಿಕ್ಷೆ? ಇಲ್ಲಿದೆ ಮಾಹಿತಿ

- Advertisement -

Bengaluru: ವರ್ತೂರು ಸಂತೋಷ್  ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಬಂದ ಅರಣ್ಯಾಧಿಕಾರಿಗಳು ಅವರನ್ನು ಕರೆದೊಯ್ದಿದ್ದಾರೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗಿರುವುದು ಇದೇ ಮೊದಲು. ಸದ್ಯ ಸಂತೋಷ್ ಅವರ ಬಳಿ ಇದ್ದಿದ್ದು ಹುಲಿ ಉಗುರು ಹೌದು ಎಂಬುದು ಸಾಬೀತಾದರೆ ಅವರಿಗೆ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹುಲಿ ಉಗುರು ಇರುವ ಲಾಕೆಟ್ ಹಾಕಿಯೇ ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು ಸಂತೋಷ್. ಈ ಲಾಕೆಟ್ ಎಲ್ಲರ ಕಣ್ಣು ಕುಕ್ಕಿತ್ತು. ಅನೇಕರಿಗೆ ಇದು ಹುಲಿ ಉಗುರು ಇರಬಹುದು ಎನ್ನುವ ಅನುಮಾನ ಮೂಡಿತ್ತು. ಈ ಕಾರಣದಿಂದಲೇ ಅರಣ್ಯಾಧಿಕಾರಿಗಳು ಬಿಗ್ ಬಾಸ್​ಗೆ ತೆರಳಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಇವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಸದ್ಯ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ‘ನಾನು ವ್ಯಕ್ತಿಯೊಬ್ಬನಿಂದ ಹುಲಿ ಉಗುರು ಖರೀದಿಸಿದ್ದೆ’ ಎಂದು ಅವರು ಅರಣ್ಯಾಧಿಕಾರಿಗಳ ಎದುರು ಹೇಳಿದ್ದಾರಂತೆ. ಈ ಮೂಲಕ ತಮಗೆ ಹುಲಿ ಉಗುರು ಸಿಕ್ಕಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ. ಪ್ರಕರಣ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರ್ತೂರು ಸಂತೋಷ್ ಅವರು ರೈತನಾಗಿ ಗುರುತಿಸಿಕೊಂಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಗೆ ಒಳಗಾಗಿದ್ದು ಇದೆ. ಬಿಗ್ ಬಾಸ್ಗೆ ಹೋದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಈಗ ಹುಲಿ ಉಗುರು ಪ್ರಕರಣದಲ್ಲಿ ಅವರಿಗೆ ಸಂಕಷ್ಟ ಎದುರಾಗಿದೆ.

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

‘400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ’

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ: ವಿನಯ್ ಕುಲಕರ್ಣಿ

- Advertisement -

Latest Posts

Don't Miss