International News: ಇಸ್ರೇಲ್- ಹಮಾಸ್ ನಡುವಿನ ಯುದ್ಧದ ಬಗ್ಗೆ ಹಲವು ರಾಷ್ಟ್ರಗಳು ಕದನ ವಿರಾಮ ತೆಗೆದುಕೊಳ್ಳಲು ಹೇಳಿದರೂ ಕೂಡ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಯಾವುದೇ ಕಾರಣಕ್ಕೂ ಕದನ ವಿರಾಮ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅಲ್ಲದೇ, ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವುದೇ ನಮ್ಮ ಪಾಲಿನ ಕದನ ವಿರಾಮ ಎಂದಿದ್ದಾರೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿ, ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದ್ದ ಹಮಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು, ಇಸ್ರೇಲ್ ಕೂಡ ಪ್ರತೀ ದಾಳಿ ಮಾಡಿತ್ತು. ಇವರಿಬ್ಬರ ಯುದ್ಧದ ನಡುವೆ ಪ್ಯಾಲೆಸ್ತಿನ್ ನಾಗರಿಕರು ಸಾವನ್ನಪ್ಪಿದರು. ಈಗಲೂ ಗಾಜಾದ ಜನರ ಪರಿಸ್ಥಿತಿ ಹೀನಾಯವಾಗಿದೆ. ಆದರೂ ಕೂಡ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು, ನಾವು ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಅಲ್ಲದೇ, ಎಲ್ಲಿಯವರೆಗೂ ಈ ಯುದ್ಧ ನಡೆಯುತ್ತದೆಯೋ, ಅಲ್ಲಿಯವರೆಗೂ ನಮ್ಮ ಸೇನೆ ಯುದ್ಧ ಮಾಡಲು ರೆಡಿ ಎಂದಿದ್ದಾರೆ.
ಭಾರತ ಸೇರಿ ಹಲವು ದೇಶಗಳು, ಈ ಯುದ್ಧ ಬಿಟ್ಟು ಶಾಂತಿ ಮಾತುಕತೆ ಮಾಡಿರಿ ಎಂದು ಸಲಹೆ ನೀಡಿದರೂ ಕೂಡ, ಅದನ್ನು ಬೆಂಜಮಿನ್ ನೇತನ್ಯಾಹು ತಳ್ಳಿ ಹಾಕಿದ್ದಾರೆ. ನಾವು ನಮ್ಮಷ್ಟಕ್ಕೆ ಇದ್ದೆವು, ಆದರೆ ನಮ್ಮ ಸುದ್ದಿಗೆ ಬಂದಿರುವ ಹಮಾಸ್, ದೊಡ್ಡ ತಪ್ಪು ಮಾಡಿದೆ. ನಾವು ಯುದ್ಧ ಆರಂಭಿಸದೇ ಇರಬಹುದು, ಆದರೆ ಈ ಯುದ್ಧದ ಅಂತ್ಯವನ್ನು ನಾವೇ ಮಾಡುತ್ತೇವೆ ಎಂದು ಬೆಂಜಮಿನ್ ಹೇಳಿದ್ದಾರೆ.
ಹಮಾಸ್ ಉಗ್ರರು 12ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಅದರಲ್ಲಿ 6 ಜನ ಅಮೇರಿಕನ್ನರಿದ್ದಾರೆ. ಕದನ ವಿರಾಮ ಘೋಷಿಸಿದರೆ, ಅವರನ್ನು ಬಿಡುವುದಾಗಿ ಹೇಳಿದ್ದಾರೆ. ಆದರೆ ಅವೆಲ್ಲವೂ ಊಹಾಪೋಹಗಳು. ಅವರು ಅಪಹರಿಸಿದ್ದವರನ್ನು ಬಿಡುವವರೆಗೂ, ನಾವು ಕದನ ವಿರಾಮ ಘೋಷಿಸುವುದಿಲ್ಲವೆಂದು ಬೆಂಜಮಿನ್ ನೇತನ್ಯಾಹು ಸ್ಪಷ್ಟನೆ ನೀಡಿದ್ದಾರೆ.
ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಇಸ್ರೇಲ್, ರಾಕೇಟ್ ಧ್ವಂಸ, ಹಲವರ ಸಾವು
ಗಾಜಾದಲ್ಲಿ ಯುದ್ಧವಾಗುತ್ತಿದ್ದರೂ, 57 ಮುಸ್ಲಿಂ ರಾಷ್ಟ್ರಗಳ ಶೃಂಗಸಭೆಗೆ ಕರೆ..
ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು




