Tumakuru News: ತುಮಕೂರು: ತುಮಕೂರಿನಲ್ಲಿ ಅಬಕಾರಿ ಅಧಿಕಾರಿಗಳು, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು ನಾಶ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಅಬಕಾರಿ ನಿರೀಕ್ಷಕ ರಾಮಮೂರ್ತಿ ನೇತೃತ್ವದಲ್ಲಿ ಮದ್ಯ ನಾಶ ಮಾಡಲಾಗಿದೆ.
ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸ್ವಾಧೀನತೆ, ಸಾಗಾಣಿಕೆ ಮಾರಾಟ ಇತ್ಯಾದಿಗಳಲ್ಲಿ ಈ ಮದ್ಯಗಳನ್ನು ಜಪ್ತು ಮಾಡಲಾಗಿತ್ತು. ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಕೊಂಡಿರುವ 977.850 ಲೀಟರ್ ಮದ್ಯ ಮತ್ತು 23.330 ಲೀಟರ್ ಬಿಯರ್ ಹಾಗೂ 124 ಲೀಟರ್ ಸೇಂದಿಗಳನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ.
ಪಟ್ಟಣದ ಹೊರವಲಯದಲ್ಲಿರುವ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಮದ್ಯ ನಾಶ ಪಡಿಸಿದ್ದು, ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ವೀರರೆಡ್ಡಿ ಅಬಕಾರಿ ಉಪಅಧೀಕ್ಷಕ ಚಂದ್ರಪ್ಪ, ಶಿರಸ್ತದಾರ್ ರಮೇಶ್, ಅಬಕಾರಿ ಪೇದೆಗಳಾದ ಶರಣಪ್ಪ, ಲಿಂಗಣ್ಣ, ರಮೇಶ್ ಕೌಶಿಕ್ ಖಾನ್ ಹಾಜರಿದ್ದರು.
ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು
‘ಪ್ರಧಾನಿ ಮೋದಿಯವರ ಈ ನಡೆಯನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು?’
‘ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು’




