Friday, November 14, 2025

Latest Posts

ಧಮ್ಮಿದ್ದರೆ RSS ಬ್ಯಾನ್ ಮಾಡಲಿ : ಆರ್. ಅಶೋಕ್ ಸವಾಲ್

- Advertisement -

Kalaburagi News: ಕಲಬುರಗಿ : ಧಮ್ಮು-ತಾಕತ್ತು ಇದ್ದರೆ ಆರ್ಎಸ್ಎಸ್ (RSS) ಅನ್ನು ಕಾಂಗ್ರೆಸ್ ಬ್ಯಾನ್ ಮಾಡಲಿ ನೋಡೋಣ ಎಂದು ಕಾಂಗ್ರೆಸ್ಸಿಗರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಸವಾಲ್ ಹಾಕಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದಲೇ ಆರ್ಎಸ್ಎಸ್ ಬ್ಯಾನ್ ಮಾಡಲು ಆಗಲಿಲ್ಲ. ಇನ್ನು ಇವರೆಲ್ಲಾ ಬಚ್ಚಾ ಎಂದು ಗುಡುಗಿದ್ದಾರೆ.

ಕರ್ನಾಟಕದಲ್ಲಿ ಗುಂಡಾಗಿರಿ ಹೆಚ್ಚಾಗಿದ್ದು, ಈ ಗೂಂಡಾಗಿರಿ ಸರ್ಕಾರ ಬಹಳ ದಿನ ಇರಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶ್ರೀನಿವಾಸ ಸರಡಗಿ‌‌ ಗ್ರಾಮದ ಮೂಕ ತಾಂಡದ ತೊಗರಿ ಬೆಳೆಯುವ ಪ್ರದೇಶದಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿ, ರೈತರೊಂದಿಗೆ ಚರ್ಚೆ ನಡೆಸಿ ಸಾಂತ್ವನ ಹೇಳಿದರು. ಶಾಸಕ ಬಸವರಾಜ್ ಮತ್ತಿಮೂಡ, ಶರಣು ಸಲಗಾರ, ಮುಖಂಡರುಗಳು ಹಾಗೂ ಇತರರಿದ್ದರು.

ಮನೆಯಲ್ಲಿ ಬಿರಿಯಾನಿ ತಿಂದ 17 ಜನರು ಅಸ್ವಸ್ಥ

ಎಚ್‌ಡಿಕೆ ಜತೆ ಸಿದ್ದರಾಮಯ್ಯ ಕೂಡಾ ದತ್ತಪೀಠಕ್ಕೆ ಬರಲಿ ಎಂದ ಸಿ.ಟಿ ರವಿ

ಛತ್ರಪತಿ ಶಿವಾಜಿಯ ಫೋಟೋ ಎಡಿಟ್ ಮಾಡಿ, ಅವಹೇಳನ ಮಾಡಿದ ಪುಂಡರು ಅರೆಸ್ಟ್

- Advertisement -

Latest Posts

Don't Miss