ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

International News: ಶುಕ್ರವಾರದಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ನಿನ್ನೆ ಒಟ್ಟು 24 ಇಸ್ರೇಲಿ ನಾಗರಿಕರನ್ನು ಹಮಾಸ್ ರಿಲೀಸ್ ಮಾಡಿತ್ತು. ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ರಿಲೀಸ್ ಮಾಡಿದೆ. ಇದರಲ್ಲಿ 13 ಇಸ್ರೇಲ್ ಪ್ರಜೆಗಳು ಮತ್ತು 4 ಥಾಯ್ ಪ್ರಜೆಗಳು ಸೇರಿದ್ದಾರೆ. ಇವರಲ್ಲಿ 6 ಮಹಿಳೆಯರು, 7 ಮಕ್ಕಳು ಮತ್ತು ಯುವಕರು ಸೇರಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ರಾಕೇಟ್ ದಾಳಿ ಮಾಡುವ ಮೂಲಕ, ಸಾವಿರಕ್ಕೂ ಹೆಚ್ಚು ಜನರನ್ನು ಕೊಂದು, ಯುದ್ಧ ಶುರು ಮಾಡಿತ್ತು. ಇದಕ್ಕೆ ಪ್ರತಿದಾಳಿಯಾಗಿ ಇಸ್ರೇಲ್ ಕೂಡ ಯುದ್ಧ ಮುಂದುವರಿಸಿ, ಹಮಾಸ್ ಉಗ್ರರು ಸೇರಿ, 13 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತಿನ್ ನಾಗರಿಕರನ್ನು ಹತ್ಯೆ ಮಾಡಿತ್ತು. ಈ ಮೂಲಕ ದ್ವೇಷ ಶುರುವಾಗಿತ್ತು.

ಇನ್ನು ಈ ಯುದ್ಧದ ಬಗ್ಗೆ ಹಲವಾರು ಅಭಿಪ್ರಾಯ ಕೊಡುತ್ತಿರುವ ಜನ, ಕದನ ವಿರಾಮ ಮೊದಲೇ ತೆಗೆದುಕೊಂಡಿದ್ದರೆ, ಅದೆಷ್ಟೋ ನಾಗರಿಕರ ಪ್ರಾಣ ಉಳಿಯುತ್ತಿತ್ತು. ದ್ವೇಷ ಸಾಧಿಸಿದ್ದಕ್ಕೆ, ಕಂದಮ್ಮಗಳು ಸೇರಿ, ರೋಗಿಗಳು, ಸಾವಿರಾರು ರೋಗಿಗಳು ಪ್ರಾಣ ಬಿಡಬೇಕಾಯಿತು ಎಂದು ಅಸಾಮಧಾನ ಹೊರಹಾಕಿದ್ದಾರೆ.

Israel-Hamas War: 13 ಥಾಯ್ ಒತ್ತೆಯಾಳುಗಳು ಸೇರಿ 24 ಜನರನ್ನು ಬಿಡುಗಡೆ ಮಾಡಿದ ಹಮಾಸ್

ಇಸ್ರೇಲ್- ಹಮಾಸ್ ಯುದ್ಧ: ಇಂದಿನಿಂದ 4 ದಿನಗಳ ಕದನ ವಿರಾಮ

ಭಾರತಕ್ಕೆ ಇಸ್ರೇಲ್ ಬೆಂಬಲ: ಮುಂಬೈ ಸ್ಪೋಟದ ರೂವಾರಿ ಲಷ್ಕರ್ ಉಗ್ರ ಸಂಘಟನೆ ನಿಷೇಧ

About The Author