Friday, November 28, 2025

Latest Posts

ಈ ಫಲಿತಾಂಶದಿಂದ ಕಾಂಗ್ರೆಸ್ ಶೋಕದಲ್ಲಿದೆ : ಆರ್. ಅಶೋಕ್

- Advertisement -

Political News: ಬೆಳಗಾವಿ : ಈ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಶೋಕದಲ್ಲಿದೆ. ಇನ್ನೇನಿದ್ದರೂ ಮೋದಿ ಕಾಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಭಾರತ ವಿಶ್ವಗುರುವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್. ಅಶೊಕ್ ಗುಡುಗಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ತೆಲಂಗಾಣ ಗೆಲುವಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಸೋತಿರುವ ಬಗ್ಗೆ ಮಾತನಾಡುತ್ತಿಲ್ಲ. ಬಿಆರ್ಎಸ್ ಸೋಲಲು ಅಲ್ಲಿನ ಸಿಎಂ ರೆಸಾರ್ಟ್ ನಲ್ಲಿದ್ದು ಆಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕಾರಣಕ್ಕೆ ಸೋತಿದೆ ಎಂದು ಹೇಳಿದರು.

ಪಂಚರಾಜ್ಯ ಚುನಾವಣಾ ಫಲಿತಾಂಶ ಸೆಮಿ ಫೈನಲ್ ಅಂತ ಹೇಳಿದ್ದರು. ಲೋಕಸಭಾ ಚುನಾವಣೆ ಫೈನಲ್ ಅಂತ ಹೇಳಿದ್ದರು. ಅವರು ತೆಲಂಗಾಣ ಗೆದ್ದಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ. ತೆಲಂಗಾಣದಲ್ಲಿ ಜನರು ಬಿಆರ್ಎಸ್ ಪಾರ್ಟಿ ವಿರುದ್ಧ ಇದ್ದರು. ಬಿಆರ್ಎಸ್‌ನ ರೆಸಾರ್ಟ್ ರಾಜಕಾರಣ ಅವರನ್ನು ಸೋಲಿಸಿದೆ, ಹಾಗಾಗಿ, ಕಾಂಗ್ರೆಸ್ ಅಲ್ಲಿ ಗೆದ್ದಿದೆ ಎಂದು ವ್ಯಾಖ್ಯಾನಿಸಿದರು.

ಮೋದಿ‌ ಅಧಿಕಾರ ಇದ್ದರೆ ದೇಶ ಸುಭದ್ರ

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ, ಜನರಿಗೆ ಗೊತ್ತಾಗಿದೆ. ಪ್ರಧಾನಿ ಮೋದಿ‌ ನೇತೃತ್ವದಲ್ಲಿ ಅಧಿಕಾರ ಇದ್ದರೆ ದೇಶ ಸುಭದ್ರ, ಮೋದಿ ಜೊತೆ ಹೋದರೆ ಧರ್ಮ ಸುಭದ್ರ, ಮೋದಿ ಜೊತೆ ಹೋದರೆ ದೇಶ ಅಭಿವೃದ್ಧಿ ಪಥದಲ್ಲಿ ಇರುತ್ತದೆ ಎಂದು ಎಂದು‌ ಆರ್. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

‘ಕಾಂಗ್ರೆಸ್‌ನ ಸವಾಲಿಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಜೆಡಿಎಸ್ ಹಾಗೂ ಬಿಜೆಪಿ ಒಕ್ಕೂಟಕ್ಕೆ ಇದೆ’

8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನು ನೆನಪು ಮಾತ್ರ

ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss