Kerala News: ಪ್ರತೀ ವರ್ಷ ವೃತಾಚರಣೆ ಮಾಡಿ, ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೈಗೆ ಹೋಗಿ, ಅಯ್ಯಪ್ಪನ ದರ್ಶನ ಮಾಡಿ ಬರುತ್ತಿದ್ದ ಮಾಲಾಧಾರಿಗಳು ಈ ಬಾರಿ, ಅಯ್ಯಪ್ಪನ ದರ್ಶನ ಮಾಡದೇ, ಹಾಗೆ ಮರಳಿ ಬರುವಂತಾಗಿದೆ.
ಕೇರಳ ಪೊಲೀಸರು ಮತ್ತು ದೇವಸ್ಥಾನದ ಆಡಳಿತ ಮಂಡಳಿ, ಭಕ್ತರಿಗೆ ಸರಿಯಾದ ರೀತಿಯಲ್ಲಿ ದರ್ಶನ ಮಾಡಲು, ಅಲುಕೂಲ ಮಾಡಿ ಕೊಡಲಾಗದೇ, ವಿಫಲವಾಗಿದೆ. ಈ ಬಗ್ಗೆ ಪ್ರಶ್ನಿಸಿದವರಿಗೆ, ಪೊಲೀಸರು ಹೊಡೆದಿದ್ದು, ಟ್ವೀಟ್‌ರಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ಕೇರಳ ಸರ್ಕಾರದ ವಿರುದ್ಧ ಮತ್ತು ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾದ ಕಾರಣ, ಕರ್ನಾಟಕ, ಆಂಧ್ರ ಸೇರಿ ಹಲವು ರಾಜ್ಯದ ಮಾಲಾಧಾರಿಗಳು ಅಯ್ಯಪ್ಪನ ದರ್ಶನ ಸಿಗದೇ, ವಾಪಸ್ ತೆರಳುವಂತಾಯಿತು. ಈ ಬಗ್ಗೆ ಸಿಟಿ ರವಿ ಕೂಡ ಟ್ವೀಟ್ ಮಾಡಿದ್ದು, ದೇವರ ನಾಡು ಎಂದು ಕರೆಯಿಸಿಕೊಳ್ಳುವ ಕೇರಳದಲ್ಲಿ, ಹಿಂದೂಗಳಿಗೆ ಈ ರೀತಿ ನಡೆಸಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವರು ವೀಡಿಯೋವೊಂದನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಇದರಲ್ಲಿ ಅಪ್ಪನಿಂದ ತಪ್ಪಿಸಿಕೊಂಡ ಬಾಲಕ, ತನ್ನ ತಂದೆಯನ್ನು ಹುಡುಕಿ ಕೊಡುವಂತೆ, ಕಣ್ಣೀರಿಟ್ಟು, ಪೊಲೀಸರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದಾನೆ. ಕೆಲ ಹೊತ್ತಿನಲ್ಲೇ ಬಾಲಕನ ತಂದೆ ಅವನ ಬಳಿ ಬಂದಿದ್ದಾರೆ.
ಲೋಕಸಭೆಯಲ್ಲಿ ನಮ್ಮ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿಗೆ ಸಂಸದೆ ಸುಮಲತಾ ವಿನಂತಿ