ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಅವರಿಂದ ಐತಿಹಾಸಿಕ ಕಾರ್ಯಕ್ರಮ…

Political News: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ರಾಜ್ಯದಲ್ಲಿ ಇತಿಹಾಸವನ್ನ ಸೃಷ್ಠಿ ಮಾಡಿದ್ದಾರೆ.. ರಾಜ್ಯದ ಯಾವ ಕಾರ್ಮಿಕ ಸಚಿವರು ಮಾಡದಂತ ಕಾರ್ಯಕ್ರಮವನ್ನ ಇಂದು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಿಶೇಷ ಚೆತನರಿಗೆ 550 ತ್ರಿಚಕ್ರ ವಾಹನವನ್ನ ಕೊಡುವುದರ ಜೊತೆಗೆ ಬಡ ಕಾರ್ಮಿಕರ ಪರವಾಗಿ ಜನಪರ ಯೋಜನೆಯನ್ನ ಸಂತೋಷ ಲಾಡ ಅವರು ಸದ್ಯ ಲಾಡ್ ಅವರ ಪ್ರಯತ್ನ ದಿಂದ ಸದ್ಯ ನೂರಾರು ಬಡ ಕುಟುಂಬಗಳಿಗೆ ಆಸರೆಯಾದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಸಿಡಿ ಮೈದಾನದಲ್ಲಿ ಬಾಗಿಯಾಗಿದ್ದರು ಈ ಕುರಿತು ಜಿಲ್ಲಾ ಉಸ್ತವಾರಿ ಸಚಿವರಾದ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡಸಿ ಕಾರ್ಯಕ್ರಮದ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ. ಹಾಗೂ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎನ್ ಕಾರ್ಮಿಕ ಅಧಿಕಾರಿಗಳು, ಅಂಗವಿಕಲ ಕಲ್ಯಾಣಾಧಿಕಾರಿಗಳು, ಕೆಸಿಡಿ ಮೈದಾನದಲ್ಲಿ ಬೀಡು ಬಿಟ್ಟಿದ್ದು, ಕಾರ್ಯಕ್ರಮದ ಸಿದ್ಧತೆಯನ್ನ ನಡೆಸಿದ್ದಾರೆ ವಿಶೇಷ ಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳ ವಿತರಣೆ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಹಾಗೂ ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

126 ವಿವಿಧ ಕಂಪನಿಗಳು ತಮ್ಮ ಸಿಎಸ್‍ಆರ್ ಅನುದಾನದಡಿ 525 ತ್ರಿಚಕ್ರ ವಾಹನ ಹಾಗೂ ಸಂತೋಷ್ ಲಾಡ್ ಫೌಂಡೇಶನ್‍ನಿಂದ 25 ವಾಹನಗಳನ್ನು ವಿತರಿಸಲಾಗಿದೆ ತ್ರಿಚಕ್ರ ವಾಹನ ಪ್ರಾಯೋಜಿಸಿದ ಕಂಪನಿಗಳ ಪ್ರತಿನಿಧಿಗಳಿಗೂ ಸಹ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಗೌರವ ಸಮರ್ಪಿಸಲಾಯಿತು.ವಿಶೇಷ ಚೇತನರಿಗೆ ಒಂದೇ ವೇದಿಕೆಯಲ್ಲಿ 550 ತ್ರಿಚಕ್ರ ವಾಹನಗಳನ್ನು ನೀಡುತ್ತಿರುವುದು ಇತಿಹಾಸದಲ್ಲೇ ಇದೇ ಪ್ರಥಮ ವಾಗಿದೆ ಜೊತೆಗೆ 3 ಲಕ್ಷ ಕಾರ್ಮಿಕರಿಗೆ ವಿಮೆ ಸೌಲಭ್ಯ,ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‍ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‍ಕಾರ್ಟ್, ಬಿಗ್‍ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ನಂತ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೂ ಸರ್ಕಾರ ವಿಮೆ ಘೋಷಿಸಿದೆ. ವಿವಿಧ ಕಂಪನಿಗಳ ಡಿಲೇವರಿ ಕಾರ್ಮಿಕರಾಗಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ 2 ಲಕ್ಷ ಅಪಘಾತ ವಿಮೆ ಹಾಗೂ 2 ಲಕ್ಷ ಜೀವವಿಮೆಯನ್ನು ಸರ್ಕಾರವು ನೆರವು ನೀಡುತ್ತಿದೆ..

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್.56,000 ಕೋಟಿ ಹಣವನ್ನ‌ ಖರ್ಚು ಮಾಡಿ, ರಾಜ್ಯದ ಜನರಿಗೆ ಗ‌್ಯಾರಂಟಿ ಯೋಜನೆಗಳ ಮುಖಾಂತರ ಮುಟ್ಟುತ್ತಿದೆ, ಪ್ರತಿಯೊಂದು ಕುಟುಂಬಕ್ಕೆ 5 ಸಾವಿರ ಮುಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆಗಳು ಜನರಿಗೆ ತಲುಪುತ್ತಿದೆ..ನಾನು ಇವತ್ತು 550 ವಿಶೇಷ್ ಚೇತನರಿಗೆ ತ್ರಿಚಕ್ರ ವಾಹನವನ್ನ ನೀಡುತ್ತಿದ್ದೆವೆ ಕಾರ್ಮಿಕ ಇಲಾಖೆಯಿಂದ ನಾವು ಬಡವರ ಪರವಾಗಿ ಇವತ್ತು ವಾಹನಗಳನ್ನ ನೀಡಲಾಗುತ್ತಿದೆ..

ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದು ಕಾರ್ಯಕ್ರಮವನ್ನ‌ ಜಿಲ್ಲಾ ಆಡಳಿತದಿಂದ ಏರ್ಪಾಡ ಮಾಡಿದ್ದಾರೆ ನಾನು ಈ ಕಾರ್ಯಕ್ರಮವನ್ನ ಸಂತೋಷದಿಂದ ಉದ್ಘಾಟನೆ ಮಾಡಿದ್ದೆನೆ, ಲಾಡ್ ಒಬ್ಬ ಉತ್ಸಾಹಿ ಸಚಿವರು, ಬಡ ಜನರ ಬಗ್ಗೆ ಕಾರ್ಮಿಕರ ಬಗ್ಗೆ ಅಪಾರವಾದ ಕಾಳಜಿ ಇಟ್ಟುಕ್ಕೊಂಡವರು, ಇಡಿ ದೇಶದಲ್ಲಿ ದೇಶದ ಸಂಪತ್ತನ್ನ ಉತ್ಪಾದನೆ ಮಾಡುವ ಕಾಯಕ ಜೀವಿಗಳಿಗೆ ಆಸರೆಯಾಗಿದ್ದಾರೆ. ಅಸಮಾನತೆ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಶಾಂತಿ ಇರಲ್ಲ, ಎಲ್ಲರೂ ಮುಖ್ಯವಾಹಿನಿಗೆ ಬರಬೇಕು, ಸಿ ಎಸ್ ಆರ್ ಫಂಡ್ ನಿಂದ ವಿಶೇಷ್ ಚೇತನರಿಗೆ ಮೋಟಾರು ಸೈಕಲ್ ಕೊಡಲಾಗುತ್ತಿದೆ,4 ಸಾವಿರ ಜನರಿಗೆ ತ್ರಿಚಕ್ರ ವಾಹನವನ್ನ ಕೊಟ್ಟಿದ್ದೆವೆ..

ಪತ್ರಿಕಾ ವಿತರಕರಿಗೆ ಬಜಟ್ ನಲ್ಲಿ ವಿಶೇಷ ಪ್ಯಾಕೇಜ್ ನೀಡಲಾಗುವುದು..ರೈತರನ್ನ ಬಿಟ್ರೆ ಕಾರ್ಮಿಕರು ಸದ್ಯ ದೇಶವನ್ನ ಕಟ್ಟುತ್ತಿದ್ದಾರೆ, ನಮ್ಮ‌ ಸರಕಾರ ಬಡವರ ಪರವಾಗಿ, ಜಾತಿ ಧರ್ಮ, ಯಾವುದೆ ಬೇದ ಭಾವವಿಲ್ಲದೆ ಕೆಲಸವನ್ನ ಮಾಡುತ್ತಿದೆ..ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 50 ರಿಂದ 60 ಸಾವಿರ ಹಣ ಸಿಗುವ ಯೋಜನೆಗಳನ್ನ ನೀಡುತ್ತಿದೆ..ನಾಲ್ಕು ಕೋಟಿ ಬಡ ಜನರಿಗೆ ಅನೂಕೂಲ ವಾಗುವಂತ ಯೋಜನೆಯನ್ನ ನೀಡಲಾಗುತ್ತಿದೆ..ನಿರುದ್ಯೂಗಿ ಯುವಕರಿಗೆ ಮುಂದಿನ ತಿಂಗಳು ಯುವನಿಧಿ ಯೋಜನೆಯನ್ನ ಚಾಲನೆ ನೀಡುತ್ತೆವೆ ಒಟ್ಟಿನಲ್ಲಿ ಧಾರವಾಡದಲ್ಲಿ ಈ ಕಾರ್ಮಿಕ ಇಲಾಖೆ ಮಾಡಿರುವ ಈ ಕಾರ್ಮಿಕರಿಗೆ ಅನೂಕೂಲವಾಗಿದೆ…ಲಾಡ ಮಾಡಿರುವ ಈ ಯೋಜನಯನ್ನ ನಾನು ಗೌರವಿಸುತ್ತೆನೆ ಎಂದು ಲಾಡ್ ಅವರನ್ನ ಹೊಗಳಿ ಮಾತನಾಡಿದರು..

ಒಟ್ಟಿನಲ್ಲಿ ಇಂದು ಧಾರವಾಡದಲ್ಲಿ ನಡೆದ ಈ ಕಾರ್ಮಿಕ ಇಲಾಖೆಯ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸವನ್ನೆ ಸೃಷ್ಟಿ ಮಾಡಿದೆ..ಇನ್ನು ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ನೀಡಿ ಎಲ್ಲ ಫಲಾನುಭವಿಗಳಿಗೆ ಕೀ ನೀಡುವುದರ ಮುಖಾಮಂತರ ಕಾರ್ಯಕ್ರಮವನ್ನ ಅದ್ದೂರಿಯಾಗಿ ಏರ್ಪಟ್ಟಿದೆ..ಇದಕ್ಕೆ ಪ್ರಮುಖ ಕಾರಣ ಸಚಿವ ಸಂತೋಷ ಲಾಡ್ ಅವರ ಉತ್ಸಾಹದಿಂದ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು..ಇನ್ನು ಕಾರ್ಮಿಕ ಸಚಿವರು ಸದ್ಯ ಈ ಕಾರ್ಯಕ್ರಮ ಉಳಿದೆಲ್ಲ ಸಚಿವರಿಗೆ ಮಾದರಿಯಾಗಿದೆ..

ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ ನಿರ್ಭಂದ: ಆದರೂ ಭೇಟಿಯಾದ್ರಾ ಬಿಜೆಪಿಗರು..?

‘ಈ ರೀತಿಯ ಆಡಂಬರ ನನಗೆ ಇಷ್ಟ ಆಗುವುದಿಲ್ಲ. ನಾನು ಇಂತಹುದಕ್ಕೆ ಪ್ರಚೋದನೆ ಕೊಡುವುದೂ ಇಲ್ಲ’

ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆ

About The Author