ಗಾಜಾದ ನಿರಾಶ್ರಿತರ ಮೇಲೆ ಇಸ್ರೇಲ್ ದಾಳಿ: 90 ಮಂದಿ ಸಾವು

International News: ಗಾಜಾದ ಜಾಬಾಲಿಯಾ ನಿರಾಶ್ರಿತರ ಮೇಲೆ ಇಸ್ರೇಲ್ ಪಡೆ ದಾಳಿ ನಡೆದಿದ್ದು, 90 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಜನ, ಗಾಯಗೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಈ ದಾಳಿಯಲ್ಲಿ ಪ್ಯಾಲೆಸ್ತಿನ್ ಜಿಹಾದ್ ಗುಂಪಿನ ವಕ್ತಾರ ದಾವೂದ್ ಶೇಹಾಬ್ ಪುತ್ರನೂ ಇದ್ದಾನೆ ಎಂದು ಮೂಲಗಳು ತಿಳಿಸಿದೆ. ಗಾಜಾದ ಇನ್ನೊಂದು ಭಾಗದಲ್ಲಿ, ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ.

ಅಕ್ಚೋಬರ್ 7ಕ್ಕೆ ಶುರುವಾದ ಇಸ್ರೇಲ್ ಹಮಾಸ್ ಯುದ್ಧದಲ್ಲಿ ಈವರೆಗೂ ಪ್ಯಾಲೆಸ್ತಿನ್‌ನಲ್ಲಿ 19 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇನ್ನು ಕೂಡ ಗಾಜಾದಲ್ಲಿ ಯುದ್ಧ ಮುಂದುವರಿದಿದ್ದು, ಜನ ಯುದ್ಧದ ಕಾರಣದಿಂದಾಗಿ, ಗಾಜಾ ತೊರೆದು, ಬೇರೆ ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ವಾರಣಾಸಿಯ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ

ಕೋಲಾರದ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’

About The Author