2023 Special story: 2023ರಲ್ಲಿ ಪ್ರಪಂಚದಲ್ಲಿ ಅತ್ಯುತ್ತಮ ಘಟನೆಗಳು ನಡೆದಿದೆ. ಈ ವರ್ಷ ಭಾರತದ ಪಾಲಿಗೆ ಅತ್ಯದ್ಭುತ ವರ್ಷ. ಆದರೆ ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ಪಾಲಿಗೆ ಮಾತ್ರ, ಈ ವರ್ಷ ಕರಾಳ ವರ್ಷ . ಅದರಲ್ಲೂ ಹಮಾಸ್- ಇಸ್ರೇಲ್ ಮಧ್ಯೆ ನಡೆದ ಯುದ್ಧದಲ್ಲಿ ಪ್ಯಾಲೇಸ್ತಿನ್ ನಾಗರಿಕರು ಬಲಿಪಶುಗಳಾದರು ಅಂದರೂ ತಪ್ಪಾಗಲಿಕ್ಕಿಲ್ಲ. 2023ರಲ್ಲಿ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಯುದ್ಧವಿದು.
ಅಕ್ಟೋಬರ್ 7ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಿಂತಿಲ್ಲ. ಹಮಾಸ್ ಉಗ್ರರು ಇಸ್ರೇಲ್‌ನ ಗಾಜಾದ ಮೇಲೆ ದಾಳಿ ಮಾಡಿ, ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದರು. ಅಲ್ಲದೇ, ಗಾಜಾವನ್ನು ತಮ್ಮ ವಶ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಈ ಮೂಲಕ ಯುದ್ಧ ಶುರುವಾಗಿದ್ದು, ಪ್ರಪಂಚದ ಯಾವ ಮೂಲೆಯಲ್ಲೂ ಹಮಾಸ್ ಉಗ್ರರಿದ್ದರೂ, ಅವರನ್ನು ಹಿಡಿದು ಕೊಲ್ಲುುದೇ ನಮ್ಮ ಗುರಿ ಎಂದು ಇಸ್ರೇಲ್ ಪಣ ತೊಟ್ಟಿತ್ತು. ಅದರಂತೆ ಹಲವು ಹಮಾಸ್ ಉಗ್ರರನ್ನು ಕೂಡ ಇಸ್ರೇಲ್ ಹೊಡೆದುರುಳಿಸಿದೆ. ಆದರೆ ಇವರಿಬ್ಬರ ಯುದ್ಧದ ಮಧ್ಯೆ ಪ್ಯಾಲೆಸ್ತಿನ್ ನಾಗರಿಕರು ಮಾತ್ರ ಬಲಿಪಶುಗಳಾಗುತ್ತಿದ್ದಾರೆ. ಈ ವರೆಗೆ ಸಾವನ್ನಪ್ಪಿದ ಪ್ಯಾಲೆಸ್ತಿನ್ ನಾಗರಿಕರ ಸಂಖ್ಯೆ 20 ಸಾವಿರ ದಾಟಿದೆ.
ಗಾಜಾದ ಆಸ್ಪತ್ರೆಗಳಲ್ಲಿ ಸುರಂಗ ಮಾರ್ಗ ನಿರ್ಮಿಸಿದ್ದ ಉಗ್ರರು, ಅಲ್ಲಿರುವ ವೈದ್ಯರು, ನರ್ಸ್‌ಗಳು, ರೋಗಿಗಳು, ಆಸ್ಪತ್ರೆ ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಷ್ಟೋ ಶಿಶುಗಳು, ರೋಗಿಗಳು ಸರಿಯಾಗಿ ವಿದ್ಯುತ್ ಸೌಲಭ್ಯವಿಲ್ಲದೇ, ಚಿಕಿತ್ಸೆ ಕೊರತೆಯಿಂದ ಸಾವನ್ನಪ್ಪಿದ್ದರು.
ಇನ್ನು ಗಾಜಾ ನಿರಾಶ್ರಿತರ ಪರಿಸ್ಥಿತಿಯಂತೂ ಹೇಳತೀರದಂತಿತ್ತು. 50 ಸಾವಿರ ನಿರಾಶ್ರಿತರಿಗೆ ನಾಲ್ಕೇ ನಾಲ್ಕು ಟಾಯ್ಲೇಟ್, ನಾಲ್ಕು ತಾಸಷ್ಟೇ ನೀರು. ಅಷ್ಟರೊಳಗೆ ತಮಗೆ ಜೀವಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಇಂಥ ನರಕ ಸದೃಷ ಪರಿಸ್ಥಿತಿ ಯಾರಿಗೂ ಬರುವುದು ಬೇಡ ಅನ್ನುವಂತಿತ್ತು ಎಂದು, ಅಲ್ಲಿನ ನರ್ಸ್ ಒಬ್ಬರು ವಿವರಿಸಿದ್ದರು.
ಇನ್ನು ಒಂದು ವಾರಗಳ ಕಾಲ, ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದ ನಡುವೆ ಕದನ ವಿರಾಮ ಸಿಕ್ಕಿತ್ತು. ಆ ಕದನ ವಿರಾಮದಲ್ಲಿ ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕು ಮತ್ತು ಪ್ಯಾಲೇಸ್ತಿನ ಖೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು ಎಂದು ಒಪ್ಪಂದವಾಗಿತ್ತು. ಆದರೆ ಹಮಾಸ್ ಈ ಒಪ್ಪಂದದ ರೂಲ್ಸ್‌ನ್ನು ಬ್ರೇಕ್ ಮಾಡಿದ್ದ ಕಾರಣ, ಮತ್ತೆ ಯುದ್ಧ ಶುರುವಾಯಿತು. ಇಂದಿಗೂ ಯುದ್ಧ ಮುಂದುವರಿದಿದೆ.
2023 ಪ್ಯಾಲೇಸ್ತೇನಿಗರ ಪಾಲಿಗೆ ಕರಾಳ ವರ್ಷ ಎಂದರೂ ತಪ್ಪಾಗಲಾರದು. ಏಕೆಂದರೆ, ಪ್ರಪಂಚದೆಲ್ಲೆಡೆ, ಕ್ರಿಸ್‌ಮಸ್ ನ್ಯೂಇಯರ್ ಹಬ್ಬದ ಸೆಲೆಬ್ರೆಷನ್ ಜೋರಾಗಿದೆ. ಆದರೆ ಕ್ರೈಸ್ತನ ಜನ್ಮ ಭೂಮಿಯಾದ ಪ್ಯಾಲೇಸ್ತೇನಿನ ಬೇತಲ್‌ಹೆಮ್‌ನಲ್ಲಿಯೇ ಹಬ್ಬದ ಸಂಭ್ರಮವಿಲ್ಲ. ಬರೀ ಸೂತಕದ ಛಾಯೆ. ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಕ್ರಿಸ್‌ಮಸ್ ಟ್ರೀ ಇರಬೇಕಾದ ಜಾಗದಲ್ಲಿ ಹೆಣಗಳ ರಾಶಿ. ಇಷ್ಟು ವರ್ಷ ಕ್ರಿಸ್‌ಮಸ್ ಹಬ್ಬದಂದು, ಖುಷಿ ಖುಷಿಯಾಗಿ ಪ್ರಾರ್ಥಿಸುತ್ತಿದ್ದ ಪ್ಯಾಲೇಸ್ತೇನಿಗರು, ಈ ವರ್ಷ ಜೀವ ಭಿಕ್ಷೆ ಕೊಡು ದೇವರೇ ಎಂದು ಬೇಡಬೇಕಾಗಿದೆ.
ಹಮಾಸ್ ಉಗ್ರರು ಬಚ್ಚಿಟ್ಟುಕೊಂಡಿದ್ದ ಸುರಂಗಕ್ಕೆ ಸಮುದ್ರ ನೀರು ಹರಿಸಿದ ಇಸ್ರೇಲ್




