Thursday, November 7, 2024

Latest Posts

ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ ಶಾಸಕ ಯತ್ನಾಳ್!

- Advertisement -

Political News: ವಿಜಯಪುರ: ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಬಿಜೆಪಿಯಲ್ಲಿ ಪದಾಧಿಕಾರಿಗಳ ಆಯ್ಕೆಯ ಕುರಿತು ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ಕೆಜೆಪಿ ಇತ್ತಲ್ಲ‌, ಈಗ ಕೆಜೆಪಿ ಪಾರ್ಟ್ – 2 ಆಗಿದೆ. ಕೆಜಿಎಫ್‌ ಪಾರ್ಟ್ 1, ಪಾರ್ಟ್ 2 ಇದ್ದಂತೆ ಬಿಜೆಪಿಯಲ್ಲಿ ಕೆಜೆಪಿ ಯಡಿಯೂರಪ್ಪಂದು 1, ಕೆಜೆಪಿ 2 ವಿಜಯೇಂದ್ರನದ್ದು, ಅವರ ಮೊಮ್ಮಗನದ್ದು ಕೆಜೆಪಿ 3 ಎಂದು ಕುಟುಂಬ ರಾಜಕಾರಣದ ಆರೋಪ ಮಾಡಿದರು.

ಸ್ಥಾನಮಾನಗಳ ಆಯುಷ್ಯ ಕೇವಲ ಲೋಕಸಭಾ ಚುನಾವಣೆ 2024ವರೆಗೆ ಮಾತ್ರ ಇದೆ. 28 ಸೀಟ್ ತರುತ್ತೇವೆ ಎಂದು ಹೇಳಿದ್ದಾರೆ. ಒಂದೇ ಒಂದು ಸೀಟ್ ಕಡಿಮೆಯಾದ್ರೂ ಇವರನ್ನು ಕೆಳಗೆ ಇಳಿಸಲಾಗುತ್ತದೆ. ಸಿಗರೇಟ್ ಪ್ಯಾಕೇಟ್ನಿಂದ ಆಟವಾಡಲು ಜೋಡಿಸಿದ ಗೋಪುರ ಬೀಳುವಂತೆ ಬಿದ್ದು ಬಿಡುತ್ತೆ ಎಂದು ಭವಿಷ್ಯ ನುಡಿದರು.

ಹಲ್ಕಾ ಕೆಲಸ ಮಾಡ್ತಾರೆ

ಸ್ಥಾನಮಾನ ಹಂಚಿಕೆ ವಿಚಾರದಲ್ಲಿ ನನಗೇನು ನಿರಾಸೆ ಆಗಿಲ್ಲ ಎಂದ ಯತ್ನಾಳ್, ಪಕ್ಷದಲ್ಲಿ ಲಪುಟರದ್ದೇ ಜಾಸ್ತಿ ಆಗಿದೆ. ಮೌಲ್ಯಾಧಾರಿತ ರಾಜಕಾರಣ ಇಲ್ಲ. ಹಲ್ಕಾ ಕೆಲಸ ಮಾಡ್ತಾರೆ, ಕಳ್ಳರೆ ಲಫಂಗರೆ ಹೆಚ್ಚು ಸೇರುತ್ತಿದ್ದು, ಒಳ್ಳೆಯವರಿಗೆ ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಾರ್ವಜನಿಕವಾಗಿ ಕೆಲಸ

ನಾನು ಒಳ್ಳೆ ಕೆಲಸ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಲೋಕಸಭೆ ಚುನಾವಣೆ ಬಳಿಕ ಹೊಸ ತಿರುವು ಸಿಗಲಿದೆ. 2024 ಲೋಕಸಭೆ ಚುನಾವಣೆ ಬಳಿಕ ಮೇಜರ್ ಆಫರೇಶನ್ ಮಾಡದೆ ಇದ್ದರೆ, ಮುಂದಿನ ನಿರ್ಣಯ ಮಾಡಲಾಗುತ್ತದೆ. ರಾಜಕೀಯ ಬಿಟ್ಟು ಸಾರ್ವಜನಿಕವಾಗಿ ಕೆಲಸ ಮಾಡಬಹುದು. ನನ್ನ ಸಂಸ್ಥೆಗಳಿದ್ದು, ನಾನು ಕೆಲಸ ಮಾಡಬಹುದು ಎಂದು ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದರು.

ಡೈರೆಕ್ಟ್ ಟರ್ನ್

ಈಗಲೇ ನಿವೃತ್ತಿ ಅಲ್ಲ, ಇನ್ನೊಂದು ಎಲೆಕ್ಷನ್ ಇದೆ. 2028 ರ‌ ಚುನಾವಣೆ ಬಳಿಕ ನಿರ್ಧಾರ ಮಾಡುವೆ. ಯೂ ಟರ್ನ್ ಹೊಡೆದ ಯತ್ನಾಳ್ ಅನ್ನಬೇಡಿ, ಡೈರೆಕ್ಟ್ ಟರ್ನ್ ಎಂದು ತಮ್ಮ ಮಾತುಗಳಿಗೆ ಮರುಕ್ಷಣವೇ ಸ್ಪಷ್ಟನೆ ನೀಡಿದರು.

2028ರಲ್ಲಿ ಲೋಕಸಭಾ ಕ್ಷೇತ್ರ ವಿಜಯಪುರ ಮೂರು ಆಗಲಿವೆ. ನಾನು‌ ಕೇಂದ್ರಕ್ಕೆ‌ ಹೋಗಲ್ಲ. ನಾನು ಸಿಎಂ ಆಗೋದಿದ್ದರೇ ಯಾರು ತಪ್ಪಿಸಲು ಆಗಲ್ಲ. ನಾನು ಆಗದೆ ಇದ್ದರೆ ಹತಾಶೆ ಇಲ್ಲ ಎಂದು ಹೇಳಿದರು.

ಮಾಜಿ ಸಿಎಂಗಳಿಗೆ ಯತ್ನಾಳ್ ಸವಾಲು

ಸಿಎಂ ಆದವರು ಈಗ ಎಲ್ಲಿದ್ದಾರೆ? ಕೆಲ‌ ಮಾಜಿ ಸಿಎಂಗಳನ್ನ ಯಾರಾದ್ರೂ ಮಾತನಾಡಿಸ್ತಾರಾ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡಿದರು. ಕರ್ನಾಟಕದ ಕೆಲ ಮಾಜಿ ಸಿಎಂಗಳಿಗೆ 100 ಜನರನ್ನ ಸೇರಿಸೋಕೆ ಹೇಳಿ ಎಂದು ಸವಾಲು ಹಾಕಿದರು.

ಕಳ್ಳರ ಕೈಯಲ್ಲಿ ಕೀ

ಯಡಿಯೂರಪ್ಪ‌ ಕೇಂದ್ರದವರನ್ನ ಅಂಜಿಸಿದ್ದು, ಮಗನ ಉದ್ಧಾರ ಮಾಡದೇ ಇದ್ದರೆ ಲೋಕಸಭೆಯಲ್ಲಿ ಕೆಲಸ ಮಾಡಲ್ಲ ಎಂದು ಹೇಳಿದ್ದು, ಹಾಳಾಗಿ ಹೋಗಲಿ ಎಂದು ಅಧಿಕಾರ ಕೊಟ್ಟಿದ್ದಾರೆ. ಹೈಕಮಾಂಡ್ ಕಳ್ಳರ‌ ಕೈಯ್ಯಲ್ಲಿ ಕೀಲಿ ಕೊಟ್ಟಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು

ಕಳ್ಳನಿಗೆ ಕೀ ಕೊಟ್ರೆ ಅವನು ಹೇಗೆ ಕಳ್ಳತನ ಮಾಡುತ್ತಾನೆ.ಈ ಕೀ 2024 ವರೆಗೆ ಮಾತ್ರ ಇರಲಿದೆ ಎಂದು ಹೇಳುವ ಮೂಲಕ ವಿಜಯೇಂದ್ರ ಅಧಿಕಾರವಾಧಿ ಲೋಕಸಭಾ ಚುನಾವಣೆ ಬಳಿಕ ಹೋಗಲಿದೆ ಎಂದು ಭವಿಷ್ಯ ನುಡಿದರು.

ಲೋಕಸಭೆಗೆ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ – ಸಚಿವ ಸಂತೋಷ್ ಲಾಡ್

ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?

ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್

- Advertisement -

Latest Posts

Don't Miss