Movie News: ಯೋಗರಾಜ್ ಭಟ್ , ಸೂರಿ ಸಿನಿಮಾಗಳ ಖಾಯಂ ಪಾತ್ರದಾರಿ , ಪ್ರತಿಭಾನ್ವಿತ ನಟ, ರಂಗಭೂಮಿ ಹಿನ್ನೆಲೆಯ ಬಹುಮುಖ ಪ್ರತಿಭೆ ಪ್ರಶಾಂತ್ ಸಿದ್ದಿ, ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನ ಪರಿಚಯಿಸಿದ್ದಾರೆ. ಪೃಥ್ವಿ ಅಂಬರ್ ಅಭಿನಯದ ದೇವರಾಜ್ ಪೂಜಾರಿ ನಿರ್ದೇಶನದ ಮತ್ಸ್ಯಗಂಧ ಚಿತ್ರಕ್ಕೆ ಸಂಗೀತ ಸಂಯೋಜಿಸೋ ಮೂಲಕ ಸಂಗೀತ ನಿರ್ದೇಶಕನಾಗಿದ್ದಾರೆ.
ಇತ್ತೀಚೆಗಷ್ಟೇ ಮತ್ಸ್ಯಗಂಧ ಚಿತ್ರದ ಭಾಗೀರಥಿ ಅನ್ನೋ ಡ್ಯಾನ್ಸಿಂಗ್ ನಂಬರ್ ನ ರಿಲೀಸ್ ಮಾಡಿರೋ ಚಿತ್ರತಂಡಕ್ಕೆ ಸಿನಿಪ್ರಿಯರಿಂದ ಈ ಹಾಡಿಗೆ ಅತತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಭಾಗೀರಥಿ ಹಾಡು ರಿಲೀಸ್ ಆದ ಮೊದಲನೇ ದಿನವೇ ಹಾಡು ಯೂಟ್ಯೂಬ್ ಟ್ರೆಂಡಿಂಗ್ ಲಿಸ್ಟಿಗೆ ಬಂದಿದ್ದು, ಮೂರೇ ದಿನದಲ್ಲಿ ಏಳು ಲಕ್ಷ ವೀವ್ಸ್ ದಾಟಿದ್ದು ಒಂದು ಮಿಲಿಯನ್ ವೀವ್ಸ್ ನತ್ತ ಮುನ್ನುಗ್ಗುತ್ತಿದೆ.
ಚಿತ್ರದ ಬಗ್ಗೆ ಪ್ರಶಾಂತ್ ಸಿದ್ದಿ ಹೇಳಿದ್ದಿಷ್ಟು. ತಮ್ಮ ಮನೆ ಪರಿಸರ ಬದುಕೇ ಸಂಗೀತ ನಾಟಕದಿಂದ ಕೂಡಿತ್ತು. ಹುಟ್ಟಿನಿಂದಲೇ ಮೈಯೊಳಗಿದ್ದ ರಿದಮ್ ಮತ್ತು ಅಮ್ಮನ ಹಾಡುಗಾರಿಕೆ ತಮ್ಮನ್ನ ಇಲ್ಲಿಯವರೆಗೂ ತಂದಿದೆ ಎಂದೂ ತಮ್ಮ ಸಂಗೀತ ಪ್ರತಿಭೆಯ ಹಿಂದಿನ ವಿಚಾರವನ್ನ ಹಂಚಿಕೊಂಡರು. ಹಾಗೆ ಮತ್ಸ್ಯಗಂಧ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ, ತಮ್ಮ ವೃತ್ತಿ ಬದುಕಿಗೆ ಹೊಸ ಮೈಲಿಗಲ್ಲಾಗಿ, ಹೊಸ ದಾರಿಯಾಗಲಿದೆ ಎಂದರು.
ಅಂದ್ಹಾಗೆ ಭಾಗೀರಥಿ ಹಾಡು ಕೇಳೋದಕ್ಕೆ ಸಖತ್ ಕ್ಯಾಚಿಯಾಗಿರೋ ಈ ಹಾಡನ್ನ ಪ್ರಶಾಂತ್ ದೇಸಿ ಪೆಪ್ಪಿ ಸ್ಟೈಲಲ್ಲಿ ಕಂಪೋಸ್ ಮಾಡಿದ್ದಾರೆ. ದೇವರಾಜ್ ಪೂಜಾರಿ ಸಾಹಿತ್ಯ ಈ ಹಾಡಿಗಿದ್ದು, ಇಂದು ನಾಗರಾಜ್ ಹಾಗೂ ಪ್ರಶಾಂತ್ ಸಿದ್ದಿ ಮತ್ತು ಸಂಗಡಿಗರು ಹಾಡಿದ್ದಾರೆ.
ಈ ಹಾಡಲ್ಲಿ ಅಂಜಲಿ ಪಾಂಡೆ ಮೈ ಬಳುಕಿಸಿ, ಕುಲುಕಿಸಿದ್ರೆ, ಪೃಥ್ವಿ ಅಂಬರ್, ನಾಗರಾಜ್ ಬೈಂದೂರು ಜೊತೆಗೆ ಹೆಜ್ಜೆ ಹಾಕಿದ್ದಾರೆ. ಧನಂಜಯ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.
ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಹಾಡಿನೊಂದಿಗೆ ಪ್ರಚಾರ ಕಾರ್ಯ ಆರಂಭಿಸಿರೋ ಚಿತ್ರತಂಡ, ಫೆಬ್ರುವರಿಗೆ ಪ್ರೇಕ್ಷಕರೆದುರಿಗೆ ಬರಲಿದೆ.
ಬಾಲಿವುಡ್‌ನ್ನೇ ಇಲ್ಲಿ ಕರೆಸೋಣ ಎಂದಿದ್ದ ಮಾತನ್ನು ನಿಜ ಮಾಡಿದ್ರಾ ಯಶ್..?
ನನಗಾಗಿ ಒಂದು ಸಿನಿಮಾ ಮಾಡಿ ಎಂದು ಕೇಳಿದ ಶಾರುಖ್‌ಗೆ, ಮಣಿರತ್ನಂ ಹೇಳಿದ್ದೇನು ಗೊತ್ತಾ..?
ರಾಮ ಮಾಂಸಾಹಾರಿ ಎಂಬ ಡೈಲಾಗ್ ವಿವಾದ: ಸಿನಿಮಾ ಡಿಲೀಟ್ ಮಾಡಿದ ನೆಟ್‌ಫ್ಲಿಕ್ಸ್