Movie News: ಅನ್ನಪೂರ್ಣಿ ಸಿನಿಮಾದಲ್ಲಿ ರಾಮ ಕೂಡ ವನವಾಸದಲ್ಲಿದ್ದಾಗ, ಮಾಂಸಾಹಾರ ಸೇವಿಸುತ್ತಿದ್ದ ಎಂಬ ಡೈಲಾಗ್ ಹೇಳಲಾಗಿತ್ತು. ಈ ಬಗ್ಗೆ ರಾಮಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ನೆಟ್‌ಫ್ಲಿಕ್ಸ್ ವಿರುದ್ಧ ದೂರು ದಾಖಲಿಸಿದ್ದರು. ಈ ಕಾರಣಕ್ಕೆ ನೆಟ್ ಫ್ಲಿಕ್ಸ್‌ನವರು, ತಮ್ಮ್ ಆ್ಯಪಿನಿಂದ ಅನ್ನಪೂರ್ಣಿ ಸಿನಿಮಾ ಡಿಲೀಟ್ ಮಾಡಿದ್ದರು. ಇದೀಗ ಮೊದಲ ಬಾರಿ, ಈ ಚಿತ್ರದ ನಟಿ ನಯನತಾರಾ ಮೌನ ಮುರಿದಿದ್ದು, ಡೈಲಾಗ್ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಇನ್‌ಸ್ಟಾಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಯನತಾರಾ, ಮೊದಲಿಗೆ ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ನಾನು ಭಾರವಾದ ಹೃದಯದಿಂದ ಈ ಬರಹವನ್ನು ಬರೆಯುತ್ತಿದ್ದೇನೆ. ನಮ್ಮ ಸಿನಿಮಾವಾದ ಅನ್ನಪೂರ್ಣಿಯ ವಿವಾದದ ಬಗ್ಗೆ ಹೇಳಲು ಬಯಸುತ್ತೇನೆ. ಸಿನಿಮಾ ಬರೀ ಆರ್ಥಿಕ ಲಾಭಕ್ಕಷ್ಟೇ ಮಾಡುವುದಲ್ಲ. ಬದಲಾಗಿ ಜನರಿಗೆ ಒಂದು ಸಂದೇಶ ನೀಡಲು, ಎಂದಿಗೂ ಕೈ ಚೆಲ್ಲಬೇಡಿ ಎಂದು ತಿಳಿಹೇಳಲು ಸಿನಿಮಾ ಮಾಡಿರುತ್ತೇವೆ.
ಸೆನ್ಸಾರ್ ಆದ ನಮ್ಮ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ, ಓಟಿಟಿಯಲ್ಲಿ ಬಿಡುಗಡೆಯಾಯಿತು. ಆದರೆ ಓಟಿಟಿಯಿಂದ ಇಷ್ಟು ಬೇಗ ನಮ್ಮ ಸಿನಿಮಾವನ್ನು ತೆಗೆಯುತ್ತಾರೆಂದು ನಾವು ಅಂದುಕೊಂಡಿರಲಿಲ್ಲ. ಈ ಸಿನಿಮಾ ಎಲ್ಲರಿಗೂ ಉತ್ತಮ ಸಂದೇಶ ನೀಡಲು ಮಾಡಿರುವುದೇ ಹೊರತು, ಯಾರ ಮನಸ್ಸನನ್ನೂ ನೋಯಿಸಲಿಕ್ಕಲ್ಲ. ಆದರೆ ಇದರಲ್ಲಿನ ಡೈಲಾಗ್‌ನಿಂದ ಯಾರಿಗಾದರೂ ನೋವಾಗಿದ್ದರೆ, ನಮ್ಮ ತಂಡ ಕ್ಷಮೆಯಾಚಿಸುತ್ತದೆ ಎಂದು ನಯನತಾರಾ ಬರೆದುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ನಯನತಾರಾ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳಾಗಿರುತ್ತಾಳೆ. ಆದರೆ ಅವಳು ಶೆಫ್ ಆದಾಗ, ಅವಳಿಗೆ ಮಾಂಸಾಹಾರ ತಯಾರಿಸುವ ಸಂದರ್ಭ ಬರುತ್ತದೆ. ಆ ವೇಳೆ ನಟಿ ಹಿಂಜರಿಯುವಾಗ, ನಟ ಶ್ರೀರಾಮ ಕೂಡ ವನವಾಸದಲ್ಲಿ ಮಾಂಸಾಹಾರ ಸೇವನೆ ಮಾಡಿದ್ದನೆಂದು ಹೇಳಿ, ನಟಿಗೆ ಮಾಂಸಾಹಾರ ತಯಾರಿಸಲು ಪ್ರೇರೇಪಿಸುತ್ತಾನೆ.
ಬ್ಯಾಚುಲರ್ ಪಾರ್ಟಿ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್: ಇದು ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರ
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ನಾಮ ನಿರ್ದೇಶನ ಅನೌನ್ಸ್