Hubballi News: ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಸೇರಿದಂತೆ ನಾಲ್ಕು ಜನ ಸೇರಿಕೊಂಡು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಆತನ ಮಗಳ ಮೈ ಮೇಲಿನ ಬಟ್ಟೆ ಹರಿದು ಜೀವ ಬೆದರಿಕೆ ಹಾಕಿದ ಆರೋಪಡದಿಯಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನರ ಮೇಲೆ ಇದೀಗ ಪ್ರಕರಣ ದಾಖಲಾಗಿದೆ.
ಹೀಗೆ ಆಸ್ಪತ್ರೆಯಲ್ಲಿ ಮಲಗಿರೋ ಈತನ ಹೆಸರು ಗುರುಸಿದ್ದಪ್ಪ ಗೌರಿ ರಿಯಲ್ ಎಸ್ಟೇಟ್ ಉದ್ಯಮಿ ರವಿವಾರ ಸಂಜೆ ಬಿಡ್ನಾಳದಲ್ಲಿನ ತುಷಾರ್ ಎಂಬುವರಿಗೆ ಸೇರಿದ ಆಫೀಸ್ ನಲ್ಲಿ ಹಣಕಾಸಿನ ಮಾತುಕತೆ ನಡೆಸುತ್ತಿದ್ದಾಗ. ಶಿವರಾಜ ಗೌರಿ, ತುಷಾರ್ ಹಾಗೂ ಅಜರುದ್ದೀನ ಎಂಬುವರು ಸೇರಿ ಹಲ್ಲೆಯನ್ನು ನಡೆಸಿದ್ದಾರೆ. ಆಗ ತಂದೆಯ ಮೇಲೆ ಆಗುತ್ತಿದ್ದ ಹಲ್ಲೆ ಬಿಡಿಸಲು ಬಂದಿದ್ದ ಅನ್ನಪೂರ್ಣಳ ಮೇಲೆ ಕೂಡಾ ಹಲ್ಲೆ ನಡೆಸಿದ್ದಾರೆ.
ಕಳೆದ ಹಲವು ದಿನಗಳಿಂದ ಗುರುಸಿದ್ದಪ್ಪನ ಕುಟುಂಬಕ್ಕೆ ಈ ರೀತಿಯಾದ ತೊಂದರೆಗಳನ್ನು ಮೇಲಿಂದ ಮೇಲೆ ಕೊಡುತ್ತಿದ್ದು,ನಮಗೆ ಜೀವನವೇ ಬೇಸರವಾಗಿದೆ ನಮಗೆ ಬದುಕಲು ಇವರು ಬಿಡುತ್ತಿಲ್ಲ ಹೀಗಾಗಿ ನಮಗೆ ನೀವೆ ನ್ಯಾಯ ಕೊಡಿಸಿ ಎಂದು ಮಾಧ್ಯಮದ ಮುಂದೆ ಗುರುಸಿದ್ದಪ್ಪನ ಹೆಂಡತಿ ಸುಮಿತ್ರಾ ಅಳಲು ತೋಡಿಕೊಂಡಿದ್ದಾರೆ.
ಶಿವರಾಜ ಗೌರಿ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿಯ ತಮ್ಮ ಹೀಗಾಗಿ ನಮ್ಮಂತ ಅಮಾಯಕರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಹಲವು ದಿನಗಳಿಂದ ಈ ರೀತಿಯಾದ ಕಾಟವನ್ನು ಕೊಡುತ್ತಿದ್ದಾರೆ. ನಮ್ಮ ಜೀವಕ್ಕೆ ಏನಾದ್ರು ಹೆಚ್ಚು ಕಡಿಮೆ ಆದ್ರೆ ಅದಕ್ಕೆ ನೆರಹೊಣೆ ಶಿವರಾಜ ಗೌರಿಯೇ ಅಂತಾ ಗುರುಸಿದ್ದಪ್ಪನ ಕುಟುಂಬ ಆರೋಪ ಮಾಡ್ತಿದೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತಪ್ಪಿತ್ತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸವನ್ನು ಮಾಡ್ತಾರೋ ಅಥವಾ ರಾಜಕೀಯ ಪ್ರಭಾವಕ್ಕೆ ಮಣಿತಾರೋ ಎಂಬುದನ್ನು ಕಾದು ನೋಡಬೇಕಿದೆ.
‘ಈಗ ಜೈ ಶ್ರೀರಾಮ್ ಅಂದಿದ್ದಾರೆ. ಇನ್ನಷ್ಟು ದಿನ ಹೋದ್ರೆ ರಾಮನ ಗುಡಿಗೆ ಕಸ ಹೊಡಿಯೋಕು ಬರ್ತಾರೆ’
ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್