Movie News: ಹುಬ್ಬಳ್ಳಿ: ನಾನು ಸುನಿ ಅವರು ಒಂದು ಸರಳ ಪ್ರೇಮ ಕಥೆಯನ್ನು ಮಾಡಿದ್ದೇವೆ. ಫೆ.೮ ರಂದು ಚಿತ್ರ ತೆರೆ ಕಾಣಲಿದೆ ಎಂದು ನಟ ವಿನಯಕುಮಾರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರದಲ್ಲಿ ವಿಶೇಷವಾಗಿ ಅಭಿನಯಿಸಿದ್ದಾರೆ. ಪ್ರಮೋಶನ್ ಇಲ್ಲಿ ಒತ್ತು ನೀಡಲಾಗಿದೆ. ಅತೀಶ ಪ್ರಮೋಶನ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಸಾಧು ಕೋಕಿಲ ನಟಿಸಿದ್ದಾರೆ. ಮಲ್ಲಿಕಾ ಸಿಂಗ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ ಎಂದರು.
ಚಿತ್ರೀಕರಣ ಚಿಕ್ಕಪೇಟೆ, ಬೆಂಗಳೂರು, ರಾಜಸ್ಥಾನ, ಬಾಂಬೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾಡಲಾಗಿದೆ. ಸಂಗೀತ ನಿರ್ದೇಶನ ವೀರ ಸಮರ್ಥ ಮಾಡಿದ್ದಾರೆ. ಕಾರ್ತಿಕ ಛಾಯಾಗ್ರಹಣ ಮಾಡಿದ್ದಾರೆ ಎಂದು ತಿಳಿಸಿದರು.
ನಿರ್ದೇಶಕ ಸುನಿ ಮಾತನಾಡಿ, ಒಂದು ಸರಳ ಪ್ರೇಮ ಕಥೆ ಪ್ರೀತಿಯ ಕಥಾಹಂದರವನ್ನೊಳಗೊಂಡ ಚಲನಚಿತ್ರವಾಗಿದೆ. ಸಿನಿಮಾ ಮೊದಲ ಟೀಸರ್ ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಇಂದು ಮೂರನೇ ಹಾಡನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ, ನಿರ್ದೇಶಕ ಸುನಿ, ನಿರ್ಮಾಪಕ ರಮೇಶ, ಮಂಜುನಾಥ ಇದ್ದರು.
ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ
ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ