ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಮೇರಿ ಕೋಮ್

Sports News: ಪ್ರಸಿದ್ಧ ಬಾಕ್ಸರ್ ಮೇರಿಕೋಮ್ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 6 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡು, ಒಲಂಪಿಕ್ ಪದಕ ವಿಜೇತರಾಗಿದ್ದ ಮೇರಿಕೋಮ್, ಬಾಕ್ಸಿಂಗ್‌ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ಬಾಕ್ಸಿಂಗ್‌ ನಿಯಮದ ಪ್ರಕಾರ ಬಾಕ್ಸಿಂಗ್‌ನಲ್ಲಿ 40 ವರ್ಷ ತುಂಂಬುವವರೆಗೂ ಯಾವುದೇ ಸಾಧನೆ ಮಾಡಲು ಅವಕಾಶವಿರುತ್ತದೆ. ಆದರೆ 40 ವರ್ಷ ವಯಸ್ಸಾದ ಬಳಿಕ, ನಿವೃತ್ತಿಯಾಗಬೇಕು. ಮೇರಿ ಕೋಮ್‌ಗೆ ಇದೀಗ 41 ವರ್ಷ ವಯಸ್ಸಾಗಿದ್ದು, ಅವರು ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಾಕ್ಸರ್ ಮೇರಿ ಕೋಮ್, ನನಗೆ ಬಾಕ್ಸಿಂಗ್‌ನಲ್ಲಿ ಇನ್ನೂ ಸಾಧನೆ ಮಾಡುವ ಹಸಿವಿದೆ. ಆದರೆ ವಯಸ್ಸಿನ ಮಿತಿ ಇರುವ ಕಾರಣ, ನಾವು ನಿವೃತ್ತಿ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ. ಹೀಗೆ ನಿವೃತ್ತಿ ತೆಗೆದುಕೊಂಡ ಬಳಿಕ ನಾನು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಜೀವನದಲ್ಲಿ ನಾನು ಎಲ್ಲವನ್ನೂ ಸಾಧಿಸಿದ್ದೇನೆ. ಆದರೆ ಬಹಳ ದುಃಖದಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಮೇರಿ ಕೋಮ್ ಹೇಳಿದ್ದಾರೆ.

ಭಾರತೀಯರಿಗೆ ರಾಮಮಂದಿರದ ಶುಭಾಶಯ ತಿಳಿಸಿದ ದಕ್ಷಿಣ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್

ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ

ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್

About The Author