Movie News: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪವಿತ್ರ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾವು, ದರ್ಶನ್ ಮತ್ತು ಪುತ್ರ ವಿನೀಶ್ ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಇದಕ್ಕೆ ಫ್ಯಾಮಿಲಿ ಈಸ್ ಎವ್ರಿಥಿಂಗ್ ಎಂದು ಬರೆದುಕೊಂಡಿದ್ದರು.
ಕೆಲ ಹೊತ್ತಿನ ಬಳಿಕ ಪವಿತ್ರ ಗೌಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ, ಈ ಸಂಬಂಧಕ್ಕೆ ಹತ್ತು ವರ್ಷ, ಇದು ಹೀಗೆ ಮುಂದುವರಿಯುತ್ತದೆ ಎಂದು ಬರೆದುಕೊಂಡು, ತಮ್ಮ ಮತ್ತು ದರ್ಶನ್ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಇದಾದ ಬಳಿಕ ಮತ್ತೆ ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಚೆನ್ನಾಗಿ ಬೈದಿದ್ದಾರೆ.
ಬೇರೆಯವರ ಗಂಡನ ಜೊತೆ ಫೋಟೋ ಪೋಸ್ಟ್ ಮಾಡುವ ಮುನ್ನ ಈ ಮಹಿಳೆಗೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ. ತನ್ನ ವೈಯಕ್ತಿಕ ಲಾಭಗಳಿಗಾಗಿ ಅವಳು ಓರ್ವ ಪುರುಷ ವಿವಾಹಿತನೆಂದು ತಿಳಿದಿದ್ದರೂ, ಮತ್ತೆ ಮತ್ತೆ ಅವನಿಗೆ ಹತ್ತಿರವಾಗುತ್ತಾಳೆ.
ಈ ಚಿತ್ರಗಳು ಖುಷಿಗೌಡ, ಸಂಜಯ್ ಗೌಡ ಮತ್ತು ಪವಿತ್ರ ಗೌಡರ ಮಗಳು ಎಂಬುದು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಷಯಗಳನ್ನು ಹೇಳಲು ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ. ಆದರೆ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡುವವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ ಎಂದು ವಿಜಯಲಕ್ಷ್ಮೀ ಪೋಸ್ಟ್ ಮಾಡಿದ್ದಾರೆ.
Bigg Boss season 17: ಫಿನಾಲೆ ವಾರದಲ್ಲಿ ಎಲಿಮಿನೇಟ್ ಆದ ಪತಿ: ಬೇಸರ ವ್ಯಕ್ತಪಡಿಸಿದ ಅಂಕಿತಾ
ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ