Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಬಳಿಕ, ಸ್ಪರ್ಧಿಗಳ ಪರಸ್ಪರ ಭೇಟಿಯಾಗುತ್ತಿದ್ದಾರೆ. ಇದೀಗ ನಟಿ ತನೀಶಾ ಒಡೆತನದ ಹೊಟೇಲ್‌ಗೆ ವರ್ತೂರು ಸಂತೋಷ್ ಭೇಟಿ ನೀಡಿದ್ದಾರೆ.
ನಟಿ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ತನೀಶಾ ಬರೀ ನಟನೆಯಷ್ಟೇ ಅಲ್ಲ, ಬದಲಾಗಿ ತಮ್ಮದೇ ಒಡೆತನದ ರೆಸ್ಟೋರೆಂಟ್ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಅಪ್ಪೂಸ್ ರೆಸ್ಟೋರೆಂಟ್ ಎಂಬ ಹೆಸರಿನ ನಾನ್‌ವೆಜ್ ರೆಸ್ಟೋರೆಂಟ್ ಇದೆ. ಈ ಹೊಟೇಲ್‌ಗೆ ವರ್ತೂರು ಸಂತೋಷ್ ಭೇಟಿ ನೀಡಿದ್ದು, ತನಿಶಾ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಾರೆ.
ಬಿಗ್‌ಬಾಸ್ ಶೋ ಮುಗಿದ ಬಳಿಕ ಇಬ್ಬರೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇಬ್ಬರೂ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದು, ಈ ಬಗ್ಗೆ ತನೀಷಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಸ್ಟೇಟಸ್ ಹಾಕಿದ್ದಾರೆ. ಇನ್ನು ಇದೇ ಫೋಟೋ ತೆಗೆದು, ತನಿಷಾ ಫ್ಯಾನ್ ಪೇಜ್‌ನಲ್ಲಿ ಅಪ್ಲೋಡ್ ಮಾಡಿದ್ದು, ಜೋಡಿ ಚೆನ್ನಾಗಿದೆ. ಮದುವೆ ಯಾವಾಗ..? ದೃಷ್ಟಿ ತೆಗೆಸಿಕೊಳ್ಳಿ. ಗುಡ್ ನ್ಯೂಸ್ ಯಾವಾಗ ಕೊಡ್ತೀರಾ..? ಮದುವೆ ಊಟ ಯಾವಾಗ ಅಂತೆಲ್ಲಾ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಕೋಟಿ ಕೋಟಿ ಬೆಲೆಬಾಳುವ ಮನೆಯಲ್ಲಿ ನೀರು ಲಿಕೇಜ್ ಸಮಸ್ಯೆ, ಕೋರ್ಟ್ ಮೆಟ್ಟಿಲೇರಿದ ನಟಿ ಪ್ರಿಯಾಂಕಾ
ಐಸಿಸ್ ಉಗ್ರ ಚಟುವಟಿಕೆಗಾಗಿ ಯುವಕರನ್ನು ಸೆಳೆಯುತ್ತಿದ್ದವನಿಗೆ 10 ವರ್ಷ ಜೈಲು ಶಿಕ್ಷೆ