Political News: ರಾಜ್ಯಸಭೆಯಲ್ಲಿ ವಿದಾಯ ಭಾಷಣದ ವೇಳೆ ನಟಿ, ಸಮಾಜವಾದ ಪಕ್ಷದ ಸಂಸದೆ ಜಯಾ ಬಚ್ಚನ್ ಕೈ ಮುಗಿದು ಕ್ಷಮೆ ಕೇಳಿದ್ದಾರೆ.
ಈ ಕ್ಷಮೆಯಾಚನೆಗೆ ಕಾರಣವೇನು ಅಂದ್ರೆ, ಸಂಸತ್ ಬಜೆಟ್ ಮಂಡನೆ ವೇಳೆ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಇಂದು ವಿದಾಯ ಭಾಷಣದ ವೇಳೆ ಕೈ ಮುಗಿದು ಕ್ಷಮೆಯಾಚಿಸಿದ ಜಯಾ ಬಚ್ಚನ್, ತನಗೆ ಸಿಟ್ಟು ಜಾಸ್ತಿ. ಆದರೆ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನ್ನದಲ್ಲ ಎಂದಿದ್ದಾರೆ.
ಅಲ್ಲದೇ, ನನಗ್ಯಾಕೆ ಅಷ್ಟು ಸಿಟ್ಟು ಅಂತಾ ಹಲವರು ಪ್ರಶ್ನಿಸಿದ್ದಾರೆ. ನನಗೆ ಗೊತ್ತಿಲ್ಲ. ಅದು ನನ್ನ ಸ್ವಭಾವ. ನಾನು ಇರುವುದೇ ಹೀಗೆ. ನನಗೆ ಇಷ್ಟವಾಗದ ವಿಷಯವಿದ್ದಾಗ, ಆ ಬಗ್ಗೆ ನಾನು ತಕ್ಷಣ ಕೋಪಗೊಳ್ಳುತ್ತೇನೆ. ಹಾಗಾಗಿ ನಾನು ನಿಮ್ಮಲ್ಲಿ ಯಾರೊಂದಿಗಾದರೂ ಸಿಟ್ಟಿನಿಂದ ನಡೆದುಕೊಂಡಲ್ಲಿ, ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಜಯಾಬಚ್ಚನ್ ಬಾಲಿವುಡ್ ಮಂದಿಯ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋದಾಗ, ಅಲ್ಲಿ ಪಾಪರಾಜಿಗಳು ಅವರ ಸೊಸೆ ಐಶ್ವರ್ಯಾ ರೈ ಎಲ್ಲಿ ಎಂದು ಕೇಳಿದ್ದರು. ಆಗ ಜಯಾ ಬಚ್ಚನ್ ಕೋಪಗೊಂಡು ಸಿಟ್ಟಿನಿಂದ ಉತ್ತರಿಸಿದ್ದರು. ಈ ರೀತಿ ಐಶ್ವರ್ಯಾ ಬಗ್ಗೆ ಕೇಳಿದಾಗ, ಜಯಾ ಬಚ್ಚನ್ ಹಲವು ಬಾರಿ ಕೋಪಗೊಂಡ ಉದಾಹರಣೆಗಳಿದೆ.
ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ
3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್
ರಾಜ್ಯಕ್ಕೆ ಕೇಂದ್ರದಿಂದ ಆದ ಅನ್ಯಾಯ ವಿರೋಧಿಸುವುದು ತಪ್ಪೇ?: BSY ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ..