International News: ನಿನ್ನೆಯಿಂದ ಪ್ರಧಾನಿ ನರೇಂದ್ರ ಮೋದಿ ಅರಬ್ ಕಂಟ್ರಿ ಪ್ರವಾಸದಲ್ಲಿದ್ದಾರೆ. ದುಬೈ ರಾಜನನ್ನು ಭೇಟಿಯಾಗಿ ಹಲವು ಒಪ್ಪಂದಗಳಿಗೆ ಸಹಿ ಹಾಕಿರುವ ಪ್ರದಾನಿ ಮೋದಿ, ಇಂದು ಅಬುದಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನವನ್ನು ಉದ್ಘಾಟಿಸಿದ್ದಾರೆ.
ಈ ದೇಗುಲ ಅಕ್ಷರಧಾಮವೆಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು, ಇದು ಗುರು ನಾರಾಯಣಸ್ವಾಮಿ, ಕೃಷ್ಣ, ರಾಮ, ಶಿವ, ಗಣಪತಿ, ದುರ್ಗೆ ಎಲ್ಲರ ದೇವಸ್ಥಾನವನ್ನೂ ಒಳಗೊಂಡಿದೆ. ವಿಶ್ವದ 3ನೇ ಅತೀ ದೊಡ್ಡ ಹಿಂದೂ ದೇಗುಲ ಇದಾಗಿದ್ದು, 700 ಕೋಟಿ ರೂಪಾಯಿ ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಈ ದೇಗುಲ ಉದ್ಘಾಟನೆಗೂ ಮುನ್ನ ದೇವಸ್ಥಾನದೊಳಗೆ ಗಂಗಾಜನ ಸಿಂಪಡನೆ ಮಾಡಿದ್ದಾರೆ. ಇವರೊಂದಿಗೆ ಉದ್ಘಾಟನೆಯಲ್ಲಿ ಮಹಾಂತ್ ಸ್ವಾಮೀಜಿ ಕೂಡ ಭಾಗಿಯಾಗಿದ್ದು, ಇಬ್ಬರೂ ಸೇರಿ, ಹಲವು ಸಂತರೊಂದಿಗೆ ದೇಗುಲ ಉದ್ಘಾಟಿಸಿದ್ದಾರೆ. ಬಳಿಕ ಮೋದಿಗೆ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು. ಇನ್ನು ಇಂದಿನ ವಿಶೇಷ ಏನಂದ್ರೆ, ಇಲ್ಲಿ ಏಕಕಾಲದಲ್ಲಿ ಗ್ಲೋಬಲ್ ಆರತಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲೂ ಮೋದಿ ಭಾಗಿಯಾಗಿದ್ದರು.




