National Political News: ಜಾಧವ್ಪುರದ ಸಂಸದೆ ಮಿಮಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಯಕತ್ವದಲ್ಲಿ ಭಿನ್ನಾಭಿಪ್ರಾಯವಿದ್ದ ಕಾರಣ ಮಿಮಿ ರಾಜೀನಾಮೆ ನೀಡಿದ್ದರೆನ್ನಲಾಗಿದೆ.
ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ನಟಿ, ಸಂಸದೆಯಾಗಿರುವ ಮಿಮಿ, ತನಗೆ ಎಲ್ಲಿ ನೆಮ್ಮದಿ ಸಿಗುತ್ತೆದಯೋ, ಅಲ್ಲೇ ತಾನಿರುವುದಾಗಿ ಹೇಳಿದ್ದಾರೆ. ಅಂದರೆ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ತನಗೆ ಮಾನಸಿಕ ನೆಮ್ಮದಿ ಸಿಗುತ್ತಿಲ್ಲ. ಭಿನ್ನಾಭಿಪ್ರಾಯದ ಕಾರಣಕ್ಕಾಗಿ, ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಿಮಿ ಹೇಳಿದ್ದಾರೆ.
ಅಲ್ಲದೇ, ಮಿಮಿ ಜನರ ಬಳಿ ಹೋದಾಗ, ಆಕೆ ನಟಿಯಾಗಿದ್ದ ಕಾರಣ, ಸಂಸದೆಯ ಸ್ಥಾನವನ್ನನು ಉತ್ತಮವಾಗಿ ನಿಭಾಯಿಸಬಲ್ಲಳು ಎಂಬ ನಂಬಿಕೆ ತಮಗಿಲ್ಲವೆಂಬಂತೆ, ಜನರು ಮಾತನಾಡಿದ್ದರಂತೆ. ಹಾಗಾಗಿ ಬೇಸರ ವ್ಯಕ್ತಪಡಿಸಿದ್ದ ನಟಿ, ಈ ರೀತಿ ಮಾತನಾಡುವುದು ಸುಲಭ. ಆದರೆ ನನ್ನ ಸ್ಥಾನದಲ್ಲಿ ನಿಂತು ನೋಡಿದಾಗ ಎಲ್ಲವೂ ಅರ್ಥವಾಗುತ್ತದೆ ಎಂದಿದ್ದಾರೆ.
ನಾನು ಜಾಧವಪುರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದರೆ ನನ್ನನ್ನು ರಾಜಕೀಯ ನಾಯಕಿಯಾಗಿ ಯಾರೂ ಸ್ವೀಕರಿಸಲು ಸಿದ್ಧರಿಲ್ಲ. ನಾನು ಈಗಾಗಲೇ ಸಿಎಂಗೆ ರಾಜೀನಾಮೆ ಸಲ್ಲಿಸಿದ್ದು, ಅವರಿನ್ನೂ ಅದನ್ನು ಅಂಗೀಕರಿಸಿಲ್ಲ. ರಾಜೀನಾಮೆ ಅಂಗೀಕರಿಸಿದ ಬಳಿಕ, ನಾನು ರಾಜ್ಯಪಾಲರಿಗೆ ರಾಜೀನಾಮೆ ನೀಡಲಿದ್ದೇನೆ ಎಂದಿದ್ದಾರೆ.
ನಾಳೆ ಮಂಡಿಸಲಾಗುವ ಬಜೆಟ್ ಹೊಸ ದಿಕ್ಸೂಚಿ ಆಗಲಿದೆ ಮತ್ತು ಆಶಾದಾಯಕವಾಗಿರಲಿದೆ: DCM
ಅಬುದಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟನೆ: ಸಂಸದೆ ಸುಮಲತಾ ಅಂಬರೀಷ್ ಭಾಗಿ
ಇಸ್ಪಿಟ್ ಅಡ್ಡೆ ಮೇಲೆ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣನವರ್ ನೇತೃತ್ವದಲ್ಲಿ ದಾಳಿ: 6 ಮಂದಿ ಬಂಧನ




