Political News: ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದು, ಈ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, 7 ಕೋಟಿ ಜನರ ಕಿವಿಗೆ ಹೂವು ಇಟ್ಟಿದ್ದಾರೆಂದು ಹೇಳಿದ್ದಾರೆ.
ಕಳೆದ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುವ ವೇಳೆ, ಸಿದ್ದರಾಮಯ್ಯನವರು ಕಿವಿಗೆ ಹೂವಿಟ್ಟುಕೊಂಡು ಬಂದಿದ್ದರು. ಈಗ ಅದೇ ಹೂವನ್ನು 7 ಕೋಟಿ ಕನ್ನಡಿಗರ ಕಿವಿಗಿಟ್ಟಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ, ಈ ಬಜೆಟ್ ನಾಳೆ ಬಾ ಸರ್ಕಾರದ್ದು ಎಂದು ಕುಮಾರಸ್ವಾಮಿ ತಮಾಷೆ ಮಾಡಿದ್ದಾರೆ.
ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಹೀಗೆ 15 ಬಾರಿ ಬಜೆಟ್ ಮಂಡಿಸಿದವರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅಷ್ಟು ಆಡಳಿತ ಅನುಭವ ಇದೆ ಅವರಿಗೆ. ಆದರೆ ಇಂದು ಬಜೆಟ್ ಮಂಡನೆ ಮಾಡುವಾಗ, ಅವರಲ್ಲಿ ವಿಶ್ವಾಸ ಕಾಣಲಿಲ್ಲ. ಏಕೆಂದರೆ ಈ ಸರ್ಕಾರ ಇನ್ನೂ ಗ್ಯಾರಂಟಿಯ ಗುಂಗಿನಿಂದ ಹೊರ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅಲ್ಲದೇ, ಇಂದಿನ ಬಜೆಟ್ ನೋಡಿ ಜನ, ಯಾಕಾದರೂ ನಾವು ಇವರನ್ನು ಗೆಲ್ಲಿಸಿದೆಯೋ, ಇವರನ್ನು ಗೆಲ್ಲಿಸಿ ತಪ್ಪು ಮಾಡಿಬಿಟ್ಟೆವು ಎಂದುಕೊಳ್ಳುತ್ತಿದ್ದಾರೆ. ಕೇಂದ್ರ ಬಜೆಟ್ ಮಂಡನೆಯಾದಾಗ, ಇದೇ ಸಿದ್ದರಾಮಯ್ಯನವರು ಇದು ಅಮೃತಕಾಲ ಅಲ್ಲ ವಿನಾಶಕಾಲ ಅಂದಿದ್ದರು. ಇವರ ಬಜೆಟ್ ನೋಡಿದರೆ, ವಿನಾಶಕಾಲಕ್ಕೆ ಬುನಾದಿ ಹಾಕಿದಂತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ದಿಗ್ಗಜರು
ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಡಾಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ ಕಾಂಗ್ರೆಸ್ ಮುಖಂಡ ಅರೀಫ್ ದೇಸಾಯಿ
ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಪತಿ ಆತ್ಮಹತ್ಯೆಗೆ ಶರಣು..!