ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆದ ಮಹಿಳೆ..!

Bagalakote: ಬಾಗಲಕೋಟೆಯ ಕಲಾದಗಿಯಲ್ಲಿ ರಂಭಾಪುರಿ ಶ್ರೀಗಳ ಕಾರು ಹೋಗುವಾಗ, ಮಹಿಳೆಯೊಬ್ಬಳು, ತಮ್ಮ ಕಾಲಿನ ಚಪ್ಪಲಿ ತೆಗೆದು, ಕಾರಿಗೆ ಎಸೆದಿದ್ದಾಳೆ. ಈ ದೃಶ್ಯ ಅಲ್ಲೇ ಇದ್ದ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.

ಶ್ರೀಗಳು ಕಾರ್ಯಕ್ರಮವೊಂದಕ್ಕೆ ತೆರಳುವಾಗ, ಜನ ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಅಲ್ಲಿರುವ ಮಹಿಳೆಯರು ಶ್ರೀಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಆ ಮಹಿಳೆಯರ ಗುಂಪಲ್ಲಿ ಒಬ್ಬರು, ಚಪ್ಪಲಿ ಎಸೆದಿದ್ದಾರೆ. ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಯಾಕೆ ಜನರಿಗೆ ಶ್ರೀಗಳ ಮೇಲೆ ಇಷ್ಟು ಕೋಪ ಎಂಬುದರ ಹಿಂದೆ ಒಂದು ಕಾರಣವಿದೆ. ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ್, ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ, ಅವರ ಉತ್ತರಾಧಿಕಾರಿಯನ್ನು ರಂಭಾಪುರಿ ಶ್ರೀಗಳು ತಮ್ಮದೇ ಪೀಠದ ಗಂಗಾಧರ ಸ್ವಾಮೀಜಿಯನ್ನು ನೇಮಕ ಮಾಡಿದ್ದರು.

ಈ ಕಾರಣಕ್ಕಾಗಿ ಗ್ರಾಮಸ್ಥರಿಗೆ ಸಿಟ್ಟಿತ್ತು. ತಮ್ಮ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಳ್ಳದೇ, ತಾವು ತಾವೇ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು. ಈ ಕಾರಣಕ್ಕಾಗಿಯೇ ಗ್ರಾಮದಲ್ಲಿ ಪರ ವಿರೋಧ ಬಣಗಳು ಕೂಡ ಹುಟ್ಟಿಕೊಂಡಿದೆ. ಶ್ರೀಗಳು ಆಸ್ತಿ ಹೊಡೆಯಲು, ಈ ರೀತಿ ತಾವೇ ನಿರ್ಧಾರ ತೆಗೆದುಕೊಂಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗೆಗಿನ ವಿವಾದ ಕೋರ್ಟ್‌ನಲ್ಲಿದೆ. ಹೀಗಿರುವಾಗಲೇ, ಶ್ರೀಗಳ ಕಾರಿಗೆ ಚಪ್ಪಲಿ ಎಸೆದು, ಆಕ್ರೋಶ ಹೊರಹಾಕಲಾಗಿದೆ.

ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದವರ ಬಂಧನ

ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ

ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

About The Author