National News: ತಾನು ಗಟ್ಟಿಮುಟ್ಟಾಗಿರಬೇಕು, ಆರೋಗ್ಯವಂತರಾಗಿರಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಅದಕ್ಕೆ ಹಣ್ಣುೂ, ತರಕಾರಿ, ಮೊಟ್ಟೆ, ಮಾಂಸ, ಹಾಲು ಇತ್ಯಾದಿಗಳನ್ನು ಜನ ಸೇವನೆ ಮಾಡುತ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿ ತಾನು ಗಟ್ಟಿಮುಟ್ಟಾಗಿರಬೇಕು. ಕಬ್ಬಿಣದಂತೆ ತನ್ನ ದೇಹವಿರಬೇಕು ಎನ್ನುವ ಕಾರಣಕ್ಕೆ ನಾಣ್ಯ ಮತ್ತು ಆಯಸ್ಕಾಂತವನ್ನು ಸೇವಿಸಿದ್ದಾನೆ.
ದೆಹಲಿಯಲ್ಲಿ ಈ ಘಟನೆ ನಡೆದಿದ್ದು, 26 ವರ್ಷದ ವ್ಯಕ್ತಿ ಈ ಕೆಲಸ ಮಾಡಿದ್ದಾನೆ. ಈ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, 35ಕ್ಕೂ ಹೆಚ್ಚು ನಾಣ್ಯ ಮತ್ತು ಆಯಸ್ಕಾಂತವನ್ನು ನುಂಗಿದ್ದಾನೆ. ಈ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿ ಬೇಧಿ ಶುರುವಾಗಿದೆ. ಏನಾಗಿದೆ ಎಂದು ವೈದ್ಯರು ಪರೀಕ್ಷಿಸಿದಾಗ, ಹೊಟ್ಟೆಯಲ್ಲಿ ನಾಣ್ಯವಿರುವುದು ಕಂಡುಬಂದಿದೆ. ಆಪರೇಶನ್ ಮಾಡಿ, ನಾಣ್ಯ, ಆಯಸ್ಕಾಂತವನ್ನು ತೆಗೆಯಲಾಗಿದೆ.



