Thursday, April 17, 2025

Latest Posts

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 2

- Advertisement -

Spiritual Story: ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ 3 ಸತ್ಯಗಳನ್ನು ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ ಮೂರು ಸತ್ಯದ ಬಗ್ಗೆ ತಿಳಿಯೋಣ ಬನ್ನಿ..

ನಾಲ್ಕನೇಯ ಸತ್ಯ. ಶ್ರೀವಿಷ್ಣುವಿನ ವಾಹನವಾದ ಶೇಷನಾಗ, ಪ್ರತೀ ಅವತಾರದಲ್ಲೂ ಶ್ರೀವಿಷ್ಣುವಿಗೆ ಸಾಥ್ ಕೊಟ್ಟಿದ್ದಾನೆ. ಅದೇ ರೀತಿ ರಾಮಾಯಣ ಕಾಲದಲ್ಲಿ ವಿಷ್ಣು ರಾಮನಾದರೆ, ಶೇಷ ಲಕ್ಷ್ಮಣನಾಗಿದ್ದ. ಆದರೆ ಶ್ರೀವಿಷ್ಣುವಿನ ಬಳಿ ದೂರು ಹೇಳಿದ ಶೇಷನಾಗ, ನೀವು ಯಾವಾಗಲೂ ನನ್ನ ಅಣ್ಣನಾಗಿರುತ್ತೀರಿ. ನನ್ನ ಮಾತನ್ನು ನೀವು ಕೇಳುವುದೇ ಇಲ್ಲ. ಮುಂದಿನ ಅವತಾರದಲ್ಲಿ ನಾನು ನಿಮ್ಮ ಅಣ್ಮನಾಗಬೇಕು. ನೀವು ನನ್ನ ಮಾತು ಕೇಳಬೇಕು ಎನ್ನುತ್ತಾನೆ. ಈ ಕಾರಣಕ್ಕಾಗಿಯೇ ಶ್ರೀಕೃಷ್ಣನ ರೂಪದಲ್ಲಿ ಶ್ರೀವಿಷ್ಣು ತಮ್ಮನಾಗಿ ಜನಸಿದರೆ, ಬಲರಾಮನ ರೂಪದಲ್ಲಿ ಶೇಷನಾಗ ಅಣ್ಣನಾಗಿ ಜನಿಸುತ್ತಾನೆ. ಆದರೆ ಶ್ರೀಕೃಷ್ಣನ ಮಾತೇ ಶಾಸನವಾಗಿರುತ್ತಿತ್ತು. ಅಣ್ಣನಾಗಿದ್ದರೂ, ಬಲರಾಮ ತಮ್ಮನ ಮಾತಿಗೆ ಬೆಲೆ ಕೊಡುತ್ತಿದ್ದ.

ಐದನೇಯ ಸತ್ಯ. ಶ್ರೀಕೃಷ್ಣ ನೋಡಲು ಅದೆಷ್ಟು ಸುಂದರವಾಗಿದ್ದಾನೆ. ಕೈಯಲ್ಲಿ ಕೊಳಲು, ರೇಷ್ಮೆ ಬಟ್ಟೆ, ಒಡವೆ, ನಾಮ, ನವಿಲುಗರಿ, ಹೀಗೆ ಶ್ರೀಕೃಷ್ಣ ಅಲಂಕಾರ ಭೂಷಿತನೆಂದು ನಾವು ಹೇಳುತ್ತೇವೆ. ಹಾಗಾದರೆ ಶ್ರೀಕೃಷ್ಣ ಹೇಗೆ ಕಾಣುತ್ತೇವೆ ಎಂದು ನಮಗೆ ಹೇಗೆ ಗೊತ್ತು..? ಹಿಂದಿನ ಕಾಲದಿಂದಲೂ ಶ್ರೀಕೃಷ್ಣನ ರೂಪ ಲಾವಣ್ಯವನ್ನು ನಾವು ಇದೇ ರೀತಿ ವರ್ಣಿಸುತ್ತ ಬಂದಿದ್ದೇವೆ. ಇದಕ್ಕೆ ಕಾರಣ, ಉತ್ತರೆ.

ಅರ್ಜುನನ ಪುತ್ರ, ಅಭಿಮನ್ಯುವಿನ ಪತ್ನಿ ಉತ್ತರೆ, ಶ್ರೀಕೃಷ್ಣನ ರೂಪ ಲಾವಣ್ಯವನ್ನು ವಿವರಸಿದ್ದಳು. ಅದರದ್ದೇ ಆಧಾರದ ಮೇಲೆ ನಮ್ಮ ಪೂರ್ವಜರು, ಶ್ರೀಕೃಷ್ಣನ ಚಿತ್ರ ಬರೆದಿದ್ದಾರೆ. ಇನ್ನು ಉತ್ತರೆಗೆ ಹೇಗೆ ಶ್ರೀಕೃಷ್ಣನ ರೂಪ ಲಾವಣ್ಯದ ಬಗ್ಗೆ ಗೊತ್ತು ಎನ್ನುವುದಕ್ಕೆ ಉತ್ತರ, ವಜ್ರನಾಭಿ. ವಜ್ರನಾಭಿ ಎಂದರೆ, ಶ್ರೀಕೃಷ್ಣನ ಮರಿ ಮೊಮ್ಮಗನೆಂದು ಪುರಾಣ ಕಥೆಯಲ್ಲಿ ಉಲ್ಲೇಖವಾಗಿದೆ. ವಜ್ರನಾಭಿ ಯಾವ ರೀತಿ ತನ್ನ ಅಜ್ಜ ಶ್ರೀಕೃಷ್ಣನ ರೂಪವನ್ನು ಹೇಳಿದ್ದಾನೋ, ಅದೇ ರೀತಿ ಉತ್ತರೆ, ಶ್ರೀಕೃಷ್ಣನ ಜೀವನ ವಿವರಿಸಿದ್ದಳು. ವಜ್ರನಾಭಿಯೇ ಮೊದಲನೇಯದಾಗಿ ಶ್ರೀಕೃಷ್ಣನ ಚಿತ್ರ ಬಿಡಿಸಿದ್ದ.

ಆರನೇಯ ಸತ್ಯ. ಯುದ್ಧದ ಸಮಯದಲ್ಲಿ ಶ್ರೀಕೃಷ್ಣ ವಜ್ರದಂತೆ ಗಟ್ಟಿಯಾಗುತ್ತಿದ್ದರು. ವಜ್ರ ಎಂದರೆ, ಕಲ್ಲಿಗಿಂತ ಗಟ್ಟಿಯಾದ ಲೋಹ. ಅದೇ ರೀತಿ ಶ್ರೀಕೃಷ್ಣ ನೋಡಲು ಆಕರ್ಷಕವಾಗಿ, ಸೌಮ್ಯವಾಗಿ, ಸದಾಕಾಲ ಮಂದಸ್ಮಿತರಾಗಿರುತ್ತಿದ್ದರೋ, ಯುದ್ಧದ ಸಮಯ ಬಂದಾಗ, ವಜ್ರದಂತೆ ಕಠೋರವಾಗಿರುತ್ತಿದ್ದರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

- Advertisement -

Latest Posts

Don't Miss