Thursday, April 17, 2025

Latest Posts

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 4

- Advertisement -

Spiritual Story: ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳ ಬಗ್ಗೆ ನಾವು ನಿಮಗೆ ಮೂರು ಭಾಗಗಳಲ್ಲಿ ವಿವರಿಸಿದ್ದೇವೆ. ನಾಲ್ಕನೇ ಭಾಗದಲ್ಲಿ ಶ್ರೀಕೃಷ್ಣನ ಜೀವನದ ಒಂಭತ್ತನೇಯ ಸತ್ಯ ಸಂಗತಿ ತಿಳಿಯೋಣ..

ಒಂಭತ್ತನೇಯ ಸತ್ಯ. ಶ್ರೀಕೃಷ್ಣನಿಗೆ ಜಯದೇವ ಎಂಬ ಪರಮಭಕ್ತನಿದ್ದ. ಅವನೇ ಗೀತ ಗೋವಿಂದ ಎಂಬ ಪುಸ್ತಕ ಬರೆದಿದ್ದು. ಈ ಪುಸ್ತಕದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ ಪ್ರೇಮಕಥೆ ಬರೆಯಲಾಗಿದೆ. ಜಯದೇವ ಶ್ರೀಕೃಷ್ಣನ ಜೀವನ ಚರಿತ್ರೆ ಬರೆಯುವಾಗ, ಒಂದು ಸತ್ಯ ಬರೆಯ ಬೇಕಿತ್ತು. ರಾಧೆ ಶ್ರೀಕೃಷ್ಣನಿಗಾಗಿ ಕಾಯುತ್ತ ಕುಳಿತಾಗ, ಶ್ರೀಕೃಷ್ಣ ರಾಧೆಯ ಬಳಿ ಬರುತ್ತಾನೆ. ರಾಧೆ ಶ್ರೀಕೃಷ್ಣನ ಎದೆಯ ಮೇಲೆ ಒಂದು ಸ್ತ್ರೀಯ ಕೂದಲನ್ನು ಕಂಡು, ದುಃಖಿತಳಾಗಿ, ಇನ್ನೆಂದಿಗೂ ಶ್ರೀಕೃಷ್ಣನನ್ನು ಭೇಟಿಯಾಗಬಾರದೆಂದು ನಿರ್ಧರಿಸುತ್ತಾಳೆ. ಈ ಮೂಲಕ ರಾಧಾ ಕೃಷ್ಣರ ಪ್ರೇಮಕಥೆ ಅಂತ್ಯವಾಗುತ್ತದೆ.

ಆದರೆ ತನ್ನ ಆರಾಧ್ಯದೈವ ಶ್ರೀಕೃಷ್ಣನ ಬಗ್ಗೆ ತಾನು ಹೇಗೆ ಈ ಬರಹ ಬರೆಯಲಿ ಎಂದು ಜಯದೇವ ಆಲೋಚಿಸುತ್ತಾನೆ. ಒಂದು ಪುಟ್ಟ ವಿರಾಮ ತೆಗೆದುಕೊಂಡು, ಮತ್ತೆ ಬರೆಯುವುದನ್ನು ಆರಂಭಿಸೋಣ ಎಂದು ಪತ್ನಿಯ ಬಳಿ, ನೀನು ಅಡುಗೆ ಮಾಡು, ನಾನು ಸ್ನಾನ ಮಾಡಿ ಬರುತ್ತೇನೆಂದು ಹೇಳುತ್ತಾನೆ. ಜಯದೇವ ಸ್ನಾನ ಮಾಡಿ ಬಂದು, ಅರ್ಧಕ್ಕೆ ನಿಲ್ಲಿಸಿ ಹೋಗಿದ್ದ ಬರಹವನ್ನು ಪೂರ್ತಿ ಮಾಡುತ್ತಾನೆ.

ಬಳಿಕ ಪತ್ನಿಯ ಬಳಿ ಊಟ ಬಡಿಸುವಂತೆ ಕೇಳುತ್ತಾನೆ. ಪತ್ನಿ ಊಟ ಬಡಿಸುತ್ತಾಳೆ. ಜಯದೇವ ಊಟ ಮಾಡುತ್ತಾನೆ. ಪತಿಯ ಎಂಜಿಲು ತಟ್ಟೆಯಲ್ಲಿ ಪತ್ನಿ ಊಟ ಮಾಡುವುದು ಹಿಂದೂ ಧರ್ಮದ ಹಳೆಯ ಪದ್ಧತಿ. ಅದರಂತೆ ಜಯದೇವನ ಪತ್ನಿ, ಜಯದೇವ ಉಂಡ ತಟ್ಟೆಯಲ್ಲಿ ಊಟ ಮಾಡುತ್ತಾಳೆ.

ಇನ್ನೇನು ಊಟ ಮುಗಿಸಿ, ಕೈ ತೊಳೆಯಬೇಕು ಎನ್ನುವಷ್ಟರಲ್ಲಿ, ಸ್ನಾನದ ಕೋಣೆಯಿಂದ ಬಂದ ಜಯದೇವ, ನೀನು ನನ್ನನ್ನು ಬಿಟ್ಟು ಊಟ ಮಾಡುತ್ತಿದ್ದಿಯಾ..? ಎಂದು ಪತ್ನಿಯನ್ನು ಪ್ರಶ್ನಿಸುತ್ತಾನೆ. ಆಗ ಪತ್ನಿ, ನೀವು ಇದೇನು ಮಾತನಾಡುತ್ತಿದ್ದೀರಿ..? ಈಗಷ್ಟೇ ಊಟ ಮುಗಿಸಿ, ಹೋದಿರಲ್ಲ. ನಾನು ಅದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೇನೆ ಎನ್ನುತ್ತಾಳೆ. ಜಯದೇವನಿಗೆ ಇಲ್ಲೇನು ನಡೆಯುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ.

ತಕ್ಷಣ ಹೋಗಿ, ಶ್ರೀ ಕೃಷ್ಣನ ಬಗ್ಗೆ ಬರೆಯುತ್ತಿದ್ದ ಬರಹವನ್ನು ನೋಡುತ್ತಾನೆ. ಆಶ್ಚರ್ಯಗೊಳ್ಳುತ್ತಾನೆ. ಭಕ್ತ ಶ್ರೀಕೃಷ್ಣನ ಪ್ರೇಮ ಕಥೆಯನ್ನ ಯಾವ ರೀತಿ ಬರೆಯಲಿ ಎಂದು ಕಳವಳದಲ್ಲಿದ್ದ. ಆದರೆ ಭಕ್ತನ ಕಳವಳವನ್ನು ಬಗೆ ಹರಿಸಿದ್ದ ಶ್ರೀಕೃಷ್ಣ, ಸ್ವತಃ ತಾನೇ ಬಂದು, ಬರಹ ಪೂರ್ಣಗೊಳಿಸಿ, ಭಕ್ತನ ಮನೆಯಲ್ಲಿ ಊಟ ಮಾಡಿ ಹೋಗಿರುತ್ತಾನೆ.

ಬಳಿಕ ತನ್ನ ಆರಾಧ್ಯದೈವ ಶ್ರೀಕೃಷ್ಣ ಬಂದು, ಊಟ ಮಾಡಿದ ತಟ್ಟೆಯಲ್ಲೇ ತನ್ನ ಪತ್ನಿ ಊಟ ಮಾಡಿದ್ದಾಳೆಂದು ತಿಳಿದ ಜಯದೇವ, ತನ್ನ ಪತ್ನಿ ತನಗಿಂತ ಅದೃಷ್ಟವಂತಳು. ಆಕೆ ಶ್ರೀಕೃಷ್ಣನ ದರ್ಶನ ಮಾಡಿದ್ದಾಳೆ. ಶ್ರೀಕೃಷ್ಣನಿಗೆ ಉಣ ಬಡಿಸಿದ್ದಾಳೆ. ಶ್ರೀೃಷ್ಣನ ಪ್ರಸಾದ ತಿಂದಿದ್ದಾಳೆಂದು ಅರಿಯುತ್ತಾನೆ. ಅಂದಿನಿಂದ ಜಯದೇವ, ಪತ್ನಿ ತಿಂದ ತಟ್ಟೆಯಲ್ಲಿ ತಾನು ಊಟ ಮಾಡಲು ಶುರು ಮಾಡುತ್ತಾನೆ.

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

- Advertisement -

Latest Posts

Don't Miss