Friday, July 11, 2025

Latest Posts

ಮೊಟ್ಟೆ ಬಜ್ಜಿ ತಿಂದು ಪ್ರಾಣ ಕಳೆದುಕೊಂಡ ವ್ಯಕ್ತಿ..

- Advertisement -

National News: ಕೆಲವೊಮ್ಮೆ ನಾವು ಇಷ್ಟಪಟ್ಟು ತಿನ್ನುವ ತಿಂಡಿಯೇ ನಮ್ಮ ಜೀವ ತೆಗೆದರೆ, ಅದಕ್ಕಿಂದ ದುರ್ಗತಿ ಮತ್ತೊಂದಿಲ್ಲ. ತೆಲಂಗಾಣದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದ್ದು, ತುಂಬಾಾ ಇಷ್ಟಪಟ್ಟು ತಿನ್ನುತ್ತಿದ್ದ ಎಗ್ ಬಜ್ಜಿ, ಗಂಟಲಿಗೆ ಸಿಕ್ಕಿಹಾಕಿಕೊಂಡು, ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ವನಪರ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಬಜ್ಜಿ ಅಂಗಡಿ ಎದುರು ಪತ್ನಿಯೊಂದಿಗೆ ಎಗ್ ಬಜ್ಜಿ ತಿನ್ನುತ್ತ ಕುಳಿತಿದ್ದ. ಇದ್ದಕ್ಕಿದ್ದಂತೆ ಆತನಿಗೆ ಎಗ್ ಬಜ್ಜಿ ಗಂಟಲಿಗೆ ಸಿಕ್ಕಿಹಾಕಿಕೊಂಡು, ಉಸಿರಾಟಕ್ಕೆ ತೊಂದರೆಯಾಗಿದೆ. ಪತ್ನಿ ಎಷ್ಟೇ ಪ್ರಯತ್ನಿಸಿದರೂ, ಆ ಬಜ್ಜಿ ಹೊರತೆಗೆಯಲಾಗಲಿಲ್ಲ. ಹಲವು ಪ್ರಯತ್ನ ಮಾಡಿದರೂ, ಆತ ಉಸಿರಾಡಲಾಗದೇ, ಕಷ್ಟಪಡುತ್ತಿದ್ದ. ಅಲ್ಲಿದ್ದ ಕೆಲವರು, ಸಾಕಷ್ಟು ಪ್ರಯತ್ನಿಸಿ, ಆ ವ್ಯಕ್ತಿಯ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಜ್ಜಿ ತೆಗೆದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ, ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಮೂಲಕ ಸಾವು ಬರುವುದಿದ್ದರೆ, ಹೇಗೂ ಬರುತ್ತದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಕೆಲ ವರ್ಷಗಳ ಹಿಂದೆ ಶಿಕ್ಷಕಿಯೊಬ್ಬಳು ಶಾಲೆಯಲ್ಲಿ ಪೂಜೆ ಬಳಿಕ ಪ್ರಸಾದ ಸೇವಿಸಿದಾಗ, ತೆಂಗಿನ ಕಾಯಿಯ ಗೆರಟೆ ಪೀಸ್ ಗಂಟಲಿಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಳು. ಕಾಪಾಡಬೇಕಿದ್ದ ಪ್ರಸಾದ ಸೇವನೆಯೇ ಆಕೆಯ ಪ್ರಾಣ ತೆಗೆದಿತ್ತು.

ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss