Mangalore News: ಕೆಲವು ದಿನಗಳ ಹಿಂದೆ ಪಿಹೆಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆಯಾಗಿದ್ದರು. ಈ ಬಗ್ಗೆ ಉಲ್ಲಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಹಿಂದೂ ಸಂಘಟನೆಗಳು ಚೈತ್ರಾಗೆ ಎಚ್ಚರಿಕೆ ನೀಡಿತ್ತು.
ಇದೀಗ ಚೈತ್ರಾ ಕತಾರ್‌ನಿಂದ ಉಲ್ಲಾಳ ಪೊಲೀಸರಿಗೆ ನನಗೆ ಪ್ರೀತಿಸುವ ಹಕ್ಕಿಲ್ಲವಾ ಎಂದು ಮೇಲ್ ಕಳುಹಿಸಿದ್ದಾಳೆ. ವಿಸಿಟಿಂಗ್ ವೀಸಾ ಮೂಲಕ ಕತಾರ್‌ಗೆ ಹೋಗಿರುವ ಚೈತ್ರಾ, ಮೂರು ತಿಂಗಳ ಬಳಿಕ ಮರಳಿ ಊರಿಗೆ ಬರುವುದಾಗಿ ತಿಳಿಸಿದ್ದು, ಯಾರದ್ದು ಒತ್ತಾಯವಿಲ್ಲದೇ, ನಾನಾಗಿಯೇ ಕತಾರ್‌ಗೆ ಬಂದಿದ್ದೇನೆ ಎಂದು ತಿಳಿಸಿದ್ದಾಳೆ. ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಕ ಚೈತ್ರಾ ಉಲ್ಲಾಳ ಪೊಲೀಸರಿಗೆ ಸಂದೇಶ ರವಾನಿಸಿದ್ದಾಳೆ.
ಇನ್ನು ಚೈತ್ರಾ ಶಾರೂಕ್‌ನನ್ನು ಪ್ರೀತಿಸುತ್ತಿದ್ದು, ಅವನ ಸಹಾಯದ ಮೂಲಕವೇ ಕತಾರ್ ತಲುಪಿದ್ದಾಳೆ. ಶಾರೂಕ್‌ನನ್ನು ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಅರೆಸ್ಟ್ ಮಾಡಿದ್ದು, ಚೈತ್ರಾಳನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೇ, ಶಾರೂಖ್ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಅಲ್ಲಿ ತಪ್ಪು ಮಾಡಿ ಸಿಕ್ಕಿಹಾಕಿಕೊಂಡು ಜೈಲು ಪಾಲಾಗಿದ್ದ.
ಬಳಿಕ ಅವನನ್ನು ಪುನಃ ಭಾರತಕ್ಕೆ ಕಳುಹಿಸಲಾಗಿತ್ತು. ಕತಾರ್ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಚೈತ್ರಾ ಮಾತ್ರ ವಿಸಿಟಿಂಗ್ ವೀಸಾ ಮೂಲಕ ಕತಾರ್ ಪ್ರವೇಶಿಸಿದ್ದಾರೆ. ಇನ್ನು ಚೈತ್ರಾ ಕತಾರ್ ಹೋಗಲು ಶಾರೂಖ್ ಸಹಾಯ ಮಾಡಿದ್ದು, ಇಬ್ಬರೂ ಸೇರಿ ಫೆಬ್ರವರಿ 17ರಂದು ಪಿಜಿಯಿಂದ ಗೋವಾಕ್ಕೆ ಹೋಗಿದ್ದಾರೆ. ಅಲ್ಲಿಂದ ಮುಂಬೈಗೆ ಹೋಗಿ, ಹಿಮಾಚಲ ಪ್ರದೇಶಕ್ಕೆ ಹೋಗಿ, ಶಾರೂಖ್ ಹಿಮಾಚಲ ಪ್ರದೇಶದಲ್ಲೇ ಇದ್ದು, ಚೈತ್ರಾಳನ್ನು ಕತಾರ್‌ಗೆ ಕಳುಹಿಸಿದ್ದಾನೆ.
ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..
ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು




