Saturday, July 27, 2024

Latest Posts

ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

- Advertisement -

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಕುರಿತಂತೆ, ಸಿಹಿ ಕಹಿ ಚಂದ್ರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಸ್ಪೋಟ ಕುರಿತಂತೆ ಆಕ್ರೋಶ ಹೊರಹಾಕಿದ್ದಾರೆ.

ಈ ಕೆಲಸ ಮಾಡಿದ ದುಷ್ಕರ್ಮಿಗಳನ್ನು ನಾವೆಲ್ಲ ಸೇರಿ ಖಂಡಿಸಬೇಕು. ರಾಮೇಶ್ವರಂ ಕೆಫೆ ಜೊತೆ ನಾವು ನಿಲ್ಲಬೇಕು. ರಾಮೇಶ್ವರಂ ಕೆಫೆಯವರು ಮತ್ತೆ ಫಿನಿಕ್ಸ್ ಹಕ್ಕಿಯಂತೆ ಚುರುಕಾಗಲು, ನಾವೆಲ್ಲ ಅವರ ಜೊತೆಯಲ್ಲಿರುತ್ತೇವೆ. ಹೊಟೇಲ್ ಉದ್ಯಮಿಗಳು, ಫುಡ್ ಬ್ಲಾಗರ್ಸ್‌ಗಳು ರಾಮೇಶ್ವರಂ ಕೆಫೆಗೆ ಸಾಥ್ ಕೊಡಬೇಕು. ಇಂಥ ಕೃತ್ಯಗಳನ್ನು ಖಂಡಿಸಿ, ನಾವು ಪ್ರತಿಭಟಸಬೇಕು ಎಂದು ಚಂದ್ರು ಹೇಳಿದ್ದಾರೆ.

ಫುಡ್ ಬ್ಲಾಗರ್ಸ್, ಫುಡ್ ಲವ್ವರ್ಸ್, ಮಾಧ್ಯಮದವರಲ್ಲಿ ನಾನು ವಿನಂತಿಸುವುದೇನೆಂದರೆ, ಇಂಥ ವಿಚಾರವನ್ನು ನಿರ್ಲಕ್ಷಿಸದೇ, ಸೀರಿಯಸ್ ಆಗಿ ತೆಗೆದುಕೊಳ್ಳಬೇಕಿದೆ. ಇಂಥ ದುಷ್ಕರ್ಮಿಗಳು ಎಲ್ಲಿ ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ. ಹಾಗಾಗಿ ಇಂಥವರನ್ನು ಈಗಲೇ ಮಟ್ಟ ಹಾಕಬೇಕು. ಹಾಗಾಗಿ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಬೇಕು. ಮತ್ತೆ ರಾಮೇಶ್ವರಂ ಕೆಫೆ ಮೊದಲಿನಂತೆ ಸೇವೆ ಮಾಡಲು, ನಾವೆಲ್ಲ ಸೇರಿ ಅವಕಾಶ ಮಾಡಿ ಕೊಡಬೇಕಿದೆ. ಎಲ್ಲರೂ ನಮಗೆ ಸಹಕರಿಸಿ ಎಂದು ಸಿಹಿ ಕಹಿ ಚಂದ್ರು ವಿನಂತಿಸಿದ್ದಾರೆ.

ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದ್ದು, ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಚೆನ್ನೈನಿಂದ ವಿಶೇಷ ತಂಡ ಆಗಮಿಸಿದ್ದು, ಬಾಂಬ್ ಸ್ಪೋಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಮೂವರು ತಿಂಡಿ ತಿನ್ನಲು ಬಂದ ಗ್ರಾಹಕಾರಿಗಿದ್ದು, ಓರ್ವ ಅಲ್ಲೇ ಕೆಲಸ ಮಾಡುವ ವ್ಯಕ್ತಿಯಾಗಿದ್ದಾನೆ.

ವಿವಿಧ ಬೇಡಿಕೆಗಳಿಗಾಗಿ ಮತ್ತೆ ಸಾರಿಗೆ ನೌಕರರ ಹೋರಾಟ: ಮಾರ್ಚ್ 4 ರಂದು ಬೆಂಗಳೂರು ಚಲೋ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಿದ್ದರಾಮಯ್ಯ, ಶಿವಕುಮಾರ್ ನೇರ ಹೊಣೆ: ಪ್ರಲ್ಹಾದ್ ಜೋಶಿ

ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ರಿಲೀಸ್

- Advertisement -

Latest Posts

Don't Miss