ನಿವೃತ್ತಿ ಘೋಷಿಸಿದ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್

Sports News: ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೊಕಿಯೋ ಒಲಂಪಿಕ್ಸ್‌ನಲ್ಲಿ ಆಟವಾಡಿದ ಬಳಿಕ, ಪ್ರಣೀತ್‌ ಮೈ ಕೈ ನೋವಿನಿಂದ ಸತತವಾಗಿ ಬಳಲಿದ್ದಾರೆ. ಹಾಗಾಗಿ ಅಂತರಾಷ್ಟ್ರೀ ಬ್ಯಾಡ್ಮಿಂಟನ್ ಆಟಕ್ಕೆ ಪ್ರಣೀತ್ ನಿವೃತ್ತಿ ಘೋಷಿಸಿದ್ದಾರೆ.

ಅಲ್ಲದೇ ಇನ್ನು ಮುಂದೆ ಅಮೆರಿಕ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತೇನೆಂದು ಪ್ರಣೀತ್ ಹೇಳಿದ್ದಾರೆ. 31 ವರ್ಷದ ಸಾಯಿ ಪ್ರಣೀತ್ 2017ರಲ್ಲಿ ಸಿಂಗಾಪುರ್ ಓಪನ್ ವಿನ್ನರ್ ಆಗಿದ್ದರು. ಅಲ್ಲದೇ 2019ರಲ್ಲಿ ಭಾರತಕ್ಕೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪ್ರಣೀತ್, 24 ವರ್ಷಗಳ ವೃತ್ತಿ ಜೀವನಕ್ಕೆ ವಿದಾಾಯ ಹೇಳುತ್ತಿದ್ದೇನೆ. ನನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನಗೆ ಅಸ್ತಿತ್ವ ನೀಡಿದ ಬ್ಯಾಡ್ಮಿಂಟನ್ ನನ್ನ ಜೀವನದ ಮೊದಲ ಲವ್. ಈ ವೃತ್ತಿ ಜೀವನದಲ್ಲಿ ನಾನು ಎದುರಿಸಿದ ಸವಾಲುಗಳು ಸದಾ ನೆನಪಿನಲ್ಲಿರುತ್ತದೆ ಎಂದು ಪ್ರಣೀತ್ ಹೇಳಿದ್ದಾರೆ.

ಇನ್ನು ಸಾಯಿ ಪ್ರಣೀತ್ ಇಷ್ಟು ಚಿಕ್ಕ ವಯಸ್ಸಿಗೆ, ಇಷ್ಟು ಬೇಗ ಆಟದಲ್ಲಿ ನಿವೃತ್ತಿ ತೆಗೆದುಕೊಂಡು, ಕೋಚ್ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.

ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್‌ಗೆ ಕ್ಯಾನ್ಸರ್

ವಿದ್ಯಾರ್ಥಿನಿ ಹ*ತ್ಯೆ ಮಾಡಿ ಯುವಕ ಆತ್ಮಹ*ತ್ಯೆ

ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ

About The Author